HomePage_Banner
HomePage_Banner
HomePage_Banner

ಮಂಗಳೂರು ಸಿಟಿ ಕ್ರೈಂ ಬ್ರಾಂಚ್‌ನ ಚಂದ್ರಶೇಖರ್ ಎನ್.ಎ. ಮುಖ್ಯಮಂತ್ರಿ ಪದಕ ಪುರಸ್ಕಾರ

Puttur_Advt_NewsUnder_1
Puttur_Advt_NewsUnder_1

 

ಪುತ್ತೂರು : ಮಂಗಳೂರು ಸಿಟಿ ಕ್ರೈಂಬ್ರಾಂಚ್ (ಸಿಸಿಬಿ) ಘಟಕದ ಸಿಬ್ಬಂದಿ ಚಂದ್ರಶೇಖರ್ ಎನ್.ಎ. ರವರು ಮುಖ್ಯಮಂತ್ರಿಗಳಿಂದ ಪದಕ ಪುರಸ್ಕಾರ ಪಡೆದುಕೊಂಡಿದ್ದಾರೆ.

೧೯೯೬ರ ಬ್ಯಾಚ್ ಸಿಬ್ಬಂದಿಯಾಗಿದ್ದ ಇವರು ಸುಳ್ಯಪದವು ಬಾಲಸುಬ್ರಹ್ಮಣ್ಯ ಪ್ರಾಥಮಿಕ ಶಾಲೆ, ಸರ್ವೋದಯ ಹೈಸ್ಕೂಲ್, ಸುಳ್ಯ ಎನ್‌ಎಂಸಿ ಯಲ್ಲಿ ಶಿಕ್ಷಣ ಪೂರೈಸಿದ್ದಾರೆ. ಶಾಲಾ ಜೀವನದಲ್ಲಿ ಜ್ಯೂನಿಯರ್ ಕಬಡ್ಡಿ ಕ್ರೀಡಾಪಟು ಹಾಗೂ ಜಿಲ್ಲಾಮಟ್ಟದ ವಾಲಿಬಾಲ್ ಆಟಗಾರರಾಗಿದ್ದರು. ೧೯೯೭ರಲ್ಲಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ನಂತರ ಪಣಂಬೂರು ಹೈವೇ ಅಪರಾಧ ದಳ, ಜಿಲ್ಲಾ ಎಸ್ಪಿ ಅಪರಾಧ ದಳ, ರೌಡಿ ನಿಗ್ರಹದಳದಲ್ಲಿ ಕರ್ತವ್ಯ ನಿರ್ವಹಿಸಿ ಪ್ರಸ್ತುತ ನಾರ್ಕೋಟಿಕ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಉಳ್ಳಾಲ ಕೆ.ಸಿ.ರೋಡ್ ಜೋಡಿ ಕೊಲೆ, ಪೊಳಲಿ ಅನಂತು ಕೊಲೆ, ಉಳ್ಳಾಲ ನರಸಿಂಹ ಶೆಟ್ಟಿಗಾರ್ ಕೊಲೆ, ಕ್ಯಾಂಡಲ್ ಸಂತು ಕೊಲೆ, ಮಲ್ಲೂರು ಜಬ್ಬಾರ್ ಕೊಲೆ, ಉಳ್ಳಾಲ ರಾಜು ಕೋಟ್ಯಾನ್ ಕೊಲೆ, ತೊಕ್ಕೊಟ್ಟು ಸಫ್ವಾನ್ ಕೊಲೆ, ರೌಡಿ ಕಾಲಿಯಾ ರಫೀಕ್, ಇಲಿಯಾಸ್ ಕೊಲೆ ಪ್ರಕರಣ, ದೀಪಕ್ ರಾವ್, ಕೊಟ್ಟಾರ ಚೌಕಿ ಬಶೀರ್ ಕೊಲೆ ಪ್ರಕರಣ, ಶರತ್ ಮಡಿವಾಳ ಹತ್ಯೆ, ಕಲಾಯಿ ಅಶ್ರಫ್ ಹತ್ಯೆ ಪ್ರಕರಣ, ಕಟೀಲು ದೇವಸ್ಥಾನದ ಅರ್ಚಕರ ಮನೆ ದರೋಡೆ ಪ್ರಕರಣ, ಕಾಟಿಪಳ್ಳ ಬ್ಯಾಂಕ್‌ನಲ್ಲಿ ಕಳವು ಪ್ರಕರಣ, ಮೂಡಬಿದಿರೆ ಜೈನಬಸದಿ ವಿಗ್ರಹ ಕಳವು ಪ್ರಕರಣ, ಕೌಡಿಚ್ಚಾರ್ ಮತ್ತು ಪಟ್ಟೆ ಬ್ರಾಹ್ಮಣರ ಮನೆ ದರೋಡೆ ಪ್ರಕರಣ, ರವಿ ಪೂಜಾರಿ ಸಹಚರ ಸುಬ್ರಹ್ಮಣ್ಯ ಬಂಧನ, ರಶೀದ್ ಮಲಬಾರಿ ದಸ್ತಗಿರಿ, ಮಂಗಳೂರು ಗಾಂಜಾ ಪತ್ತೆ ಪ್ರಕರಣ ಆರೋಪಿಗಳನ್ನು ಪತ್ತೆಮಾಡುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಇವರ ಸಾಧನೆಗೆ ಹಲವು ಶ್ಲಾಘನೀಯ ಪತ್ರ, ಪ್ರಶಂಸಾ ಪತ್ರ, ನಗದು ಬಹುಮಾನ, ಪಡೆದುಕೊಂಡಿದ್ದಲ್ಲದೆ ಹಲವಾರು ಸಂಘಸಂಸ್ಥೆಗಳಿಂದ ಸನ್ಮಾನಿತಗೊಂಡಿದ್ದಾರೆ.

ಕಾಸರಗೋಡು ತಾಲೂಕಿನ ನೆಟ್ಟಣಿಗೆ ಗ್ರಾಮದ ನಿಡಿಯಡ್ಕ ದಿ.ಅಪ್ಪಯ್ಯ ಮಣಿಯಾಣಿ ಹಾಗೂ ಯಮುನ ಕುಳ ರವರ ಪುತ್ರರಾದ ಇವರು ಪತ್ನಿ ತೇಜಸ್ವಿನಿ, ಪುತ್ರ ಗೌರವ್ ರವರೊಂದಿಗೆ ಮಂಗಳೂರು ತೊಕ್ಕೊಟ್ಟು ಸಮೀಪದ ಹೊಸಗದ್ದೆಯಲ್ಲಿ ವಾಸವಾಗಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.