HomePage_Banner
HomePage_Banner
HomePage_Banner

ಕುಂಜೂರು ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಪ್ರದೀಪಕೃಷ್ಣ ಬಂಗಾರಡ್ಕ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಆರ್ಯಾಪು ಗ್ರಾಮದ ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನೂತನ ಅಧ್ಯಕ್ಷರಾಗಿ ಪ್ರದೀಪಕೃಷ್ಣ ಬಂಗಾರಡ್ಕರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ದೇವಸ್ಥಾನದ ಸಭಾಂಗಣದಲ್ಲಿ ನ.೨೧ರಂದು ಆಡಳಿತಾಧಿಕಾರಿಯಾಗಿರುವ ಉಪತಹಶೀಲ್ದಾರ್ ರಾಮಣ್ಣ ನಾಯ್ಕರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಅಧ್ಯಕ್ಷರನ್ನು ಆಯ್ಕೆ ಪ್ರಕ್ರಯೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಪ್ರದೀಪಕೃಷ್ಣರವರ ಹೆಸರನ್ನು ಬಿ.ಆರ್ ಶುಭಕರ ರಾವ್ ಸೂಚಿಸಿ, ಚಂದಪ್ಪ ಪೂಜಾರಿಯವರು ಅನುಮೋದಿಸಿದರು. ಸದಸ್ಯರಾದ ಮಹಾಲಿಂಗ ನಾಯ್ಕ ಮಚ್ಚಿಮಲೆ, ಲೀಲಾವತಿ ಕುಂಜೂರು, ವಿಶ್ವನಾಥ ಕುಲಾಲ್ ಮಚ್ಚಿಮಲೆ, ಉಮಾವತಿ ಗೆಣಸಿನಕುಮೇರು, ನವೀನ್ ಕುಮಾರ್ ಜಿ.ಟಿ. ಗೆಣಸಿಕುಮೇರು, ಅರ್ಚಕ ಸದಾನಂದ ರವಿ ಉಪಸ್ಥಿತರಿದ್ದರು.

ಅಧ್ಯಕ್ಷರ ಪರಿಚಯ:
ನೂತನ ಅಧ್ಯಕ್ಷ ಪ್ರದೀಪಕೃಷ್ಣ ಬಂಗಾರಡ್ಕರವರು ಆರ್ಯಾಪು ಬಂಗಾರಡ್ಕ ಸೋಮಶೇಖರ ಭಟ್ ಮತ್ತು ದೇವಕಿ ದಂಪತಿ ಪುತ್ರ. ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಅನುಭವಿ. ಬಂಗಾರಡ್ಕ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷರಾಗಿ ೨೦೧೮ರಲ್ಲಿ ಭಜನಾ ಮಂದಿರವನ್ನು ಜೀರ್ಣೋದ್ಧಾರಗೊಳಿಸಿ ಬ್ರಹ್ಮಕಲಶೋತ್ಸವವನ್ನು ಯಶಸ್ವಿಯಾಗಿ ನಡೆಸಿರುತ್ತಾರೆ. ಬಂಗಾರಡ್ಕ ಶ್ರೀರಾಮ ಸೇವಾ ಸಮಿತಿ ಅಧ್ಯಕ್ಷ, ಕುಂಜೂರುಪಂಜ ಅನುದಾನಿತ ಹಿ.ಪ್ರಾ ಶಾಲಾ ಆಡಳಿತ ಮಂಡಳಿ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಭಜನೆಯಲ್ಲಿ ವಿಶೇಷ ಆಸಕ್ತಿಹೊಂದಿರುವ ಇವರು ಕಾಟುಕುಕ್ಕೆ ಭಜನಾ ಶಿಷ್ಯವೃಂದ ಬಂಗಾರಡ್ಕ ಇದರ ಸಕ್ರೀಯ ಸದಸ್ಯರಾಗಿರುತ್ತಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.