HomePage_Banner
HomePage_Banner
HomePage_Banner

ಪಡ್ಡಾಯೂರು ಹಾ.ಉ. ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ ರೂ.5.16ಲಕ್ಷ ಲಾಭ, ಶೇ.25 ಡಿವಿಡೆಂಡ್, ರೂ.1.52 ಬೋನಸ್

Puttur_Advt_NewsUnder_1
Puttur_Advt_NewsUnder_1

ಪುತ್ತೂರು:ಪಡ್ಡಾಯೂರು ಹಾಲು ಉತ್ಪಾದಕರ ಸಹಕಾರಿ ಸಂಘವು ೨೦೧೯-೨೦ನೇ ಸಾಲಿನಲ್ಲಿ ರೂ.೫,೧೬,೬೩೮.೫೫ ನಿವ್ವಳ ಲಾಭಗಳಿಸಿದ್ದು, ಸದಸ್ಯರಿಗೆ ಶೇ.೨೫ ಡಿವಿಡೆಂಡ್ ಹಾಗೂ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ ೧.೫೨ ಪೈಸೆ ಬೋನಸ್ಸು ವಿತರಿಸಲಾಗುವುದು ಎಂದು ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಆನಂದ ಗೌಡ ಮೂವಪ್ಪ ಘೋಷಣೆ ಮಾಡಿದರು.

ಸಭೆಯು ನ.೨೦ರಂದು ಪಡ್ಡಾಯೂರು ಶ್ರೀ ಅನ್ನಪೂರ್ಣೇಶ್ವರಿ ಭಜನಾ ಮಂದಿರದ ಆವರಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಹಕಾರಿ ಸಂಘವು ವರದಿ ವರ್ಷದಲ್ಲಿ ೧,೬೧,೪೮೮ ಲೀಟರ್ ಹಾಲನ್ನು ಖರೀದಿಸಿದೆ. ಇದರಲ್ಲಿ ೪೩,೯೨೪ ಹಾಲನ್ನು ಸ್ಥಳಿಯವಾಗಿ ಮಾರಾಟ ಮಾಡಿ ೧,೧೭,೫೬೪ ಲೀಟರ್ ಹಾಲನ್ನು ಒಕ್ಕೂಟಕ್ಕೆ ಮಾರಾಟ ಮಾಡಲಾಗಿದೆ. ಜೊತೆಗೆ ೧,೨೮೯ ಚೀಲ ಪಶು ಆಹಾರ ಹಾಗೂ ೧೦೩೦ ಕೆ.ಜಿ ಲವಣ ಮಿಶ್ರಣವನ್ನು ಮಾರಾಟ ಮಾಡಲಾಗಿದೆ. ಸಂಘವು ಒಟ್ಟು ರೂ.೨,೨೭,೪೫,೦೧೨.೬೧ ವ್ಯವಹಾರ ನಡೆಸಿ ರೂ.೫,೧೬,೬೩೮.೫೫ ನಿವ್ವಳ ಲಾಭ ಗಳಿಸಿರುತ್ತದೆ ಎಂದು ಅಧ್ಯಕ್ಷರು ತಿಳಿಸಿದರು.

ಪ್ರತಿಭಾ ಪುರಸ್ಕಾರ:
೨೦೧೯-೨೦ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾದ ಸಂಘದ ಸದಸ್ಯ ಕುಂಜಾರು ಜಯಂತಿ ಹಾಗೂ ನಾರಾಯಣ ಗೌಡ ದಂಪತಿ ಪುತ್ರ ಯಶ್ವಿನ್ ಹಾಗೂ ೨೦೧೯-೨೦ನೇ ಸಾಲಿನಲ್ಲಿ ಗುಜರಾತ್‌ನಲ್ಲಿ ನಡೆದ ಅಥ್ಲೆಟಿಕ್ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ಸದಸ್ಯ ಸಿಂಗಾಣಿ ಕೃಷ್ಣಪ್ಪ ಗೌಡ ಹಾಗೂ ಕಮಲ ಪುತ್ರಿ ಪೂಜಾಶ್ರೀಯವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಬಹುಮಾನ:
ವರದಿ ವರ್ಷದಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲನ್ನು ನೀಡಿದ ಲೂಯಿಸ್ ಲಸ್ರಾದೋ(ಪ್ರ), ಧನಂಜಯ ಗೌಡ ಕೊಡಂಗೆ(ದ್ವಿ), ಯಮುನಾ ಕೊಡಂಗೆ(ತೃ) ಬಹುಮಾನ ಹಾಗೂ ಎಲ್ಲಾ ಹಾಲು ಉತ್ಪಾದಕರಿಗೆ ಪ್ರೋತ್ಸಾಹಕ ಬಹುಮಾನಗಳನ್ನು ವಿತರಿಸಲಾಯಿತು. ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿ ಮಾತನಾಡಿ, ಹೈನುಗಾರರಿಗೆ ಒಕ್ಕೂಟ ಹಾಗೂ ಸರಕಾರದಿಂದ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ಸಂಘದ ಉಪಾಧ್ಯಕ್ಷ ವೆಂಕಪ್ಪ ಗೌಡ, ನಿರ್ದೇಶಕರಾದ ಲೂಯಿಸ್ ಲಸ್ರಾದೋ, ವೆಂಕಟ್ರಮಣ ಭಟ್, ನಾರಾಯಣ ಪೂಜಾರಿ, ಕುಶಾಲಪ್ಪ ಗೌಡ, ಸತೀಶ್ ಪಿ.ಆರ್., ವಿನೋದ್ ಕೆ., ಫೆಲ್ಸಿ ಲಸ್ರಾದೋ ಹಾಗೂ ಯಮುನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪುಟಾಣಿಗಳಾದ ಸೃಷ್ಠಿ, ಸ್ನೇಹಾ ಹಾಗೂ ದೀಪಕಾ ಪ್ರಾರ್ಥಿಸಿದರು. ಅಧ್ಯಕ್ಷ ಆನಂದ ಗೌಡ ಸ್ವಾಗತಿಸಿದರು. ಗಣೇಶ್ ಪಡ್ಡಾಯೂರು ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಕುಸುಮಾವತಿ ವಂದಿಸಿದರು. ವತನ್ ಹಾಗೂ ಹಾಲು ಪರೀಕ್ಷಕಿ ರಾಜೀವಿ ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.