HomePage_Banner
HomePage_Banner
HomePage_Banner

ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವದ ಪೂರ್ವಬಾವಿ ಸಭೆ

Puttur_Advt_NewsUnder_1
Puttur_Advt_NewsUnder_1

ಕಾಣಿಯೂರು: ಕುದ್ಮಾರು ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿ ೨೦ರಂದು ನಡೆಯಲಿರುವ ಷಷ್ಠಿ ಮಹೋತ್ಸವ ನಡೆಸುವ ಬಗ್ಗೆ ದೇವಳದ ಪೂರ್ವಬಾವಿ ಸಭೆಯು ನ ೨೨ರಂದು ದೇವಳದ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ದೇವಳದಲ್ಲಿ ಷಷ್ಠಿ ಮಹೋತ್ಸವವನ್ನು ಆಚರಿಸಲಾಗುವುದು ಮತ್ತು ಮುಂದಿನ ದಿನಗಳಲ್ಲಿ ಬ್ರಹ್ಮಕಲಶೋತ್ಸವ ವಿವಿಧ ಸಮಿತಿಗಳ, ಊರವರ ಸಭೆ ನಡೆಸಲಾಗುವುದೆಂದು ನಿರ್ಣಯಿಸಲಾಯಿತು.

ಈ ಸಂದರ್ಭದಲ್ಲಿ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸೀತಾರಾಮ ರೈ ಸವಣೂರು, ಅನುವಂಶೀಯ ಮೊಕ್ತೇಸರರಾದ ರಾಜ್‌ದೀಪಕ್ ಜೈನ್ ಕುದ್ಮಾರುಗುತ್ತು, ಆಡಳಿತ ಸಮಿತಿ ಜತೆ ಕಾರ್ಯದರ್ಶಿ ಶೂರಪ್ಪ ಗೌಡ, ಆಡಳಿತ ಸಮಿತಿ ಸದಸ್ಯರಾದ ಮಹಾಲಿಂಗೇಶ್ವರ ಶರ್ಮ ಕಜೆ, ರಾಮಯ್ಯ ಗೌಡ ನೂಜಿ, ನಿಟ್ಟೋಣಿ ಕೆಡೆಂಜಿ, ದೇವಳದ ಅರ್ಚಕ ರಮಾನಂದ್ ಭಟ್, ಜತ್ತಪ್ಪ ರೈ ಬರೆಪ್ಪಾಡಿ, ನಾಗೇಶ್ ಕೆಡೆಂಜಿ, ಉಮೇಶ್ ಕೆರೆನಾರು, ಚಂದ್ರಶೇಖರ ಬರೆಪ್ಪಾಡಿ, ಭರತ್ ಕುಮಾರ್ ನಡುಮನೆ, ಕುದ್ಮಾರು ಸ್ಕಂದಶ್ರೀ ಯಉವಕ ಮಂಡಲದ ಅಧ್ಯಕ್ಷ ದೇವರಾಜ್ ನೂಜಿ, ತಿರಂಗ ವಾರಿಯರ್‍ಸ್‌ನ ಸಂಚಾಲಕ ಲೋಕೇಶ್ ಬರೆಪ್ಪಾಡಿ ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು. ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಸ್ವಾಗತಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.