HomePage_Banner
HomePage_Banner
HomePage_Banner
HomePage_Banner

ಸವಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • 2,99 ಕೋಟಿ ರೂ, ವ್ಯವಹಾರ, 5,48 ಲಕ್ಷ ರೂ ಲಾಭ- ಸುಪ್ರೀತ್ ರೈ ಖಂಡಿಗ

ಪುತ್ತೂರು: ಸವಣೂರು ಹಾಲು ಉತ್ಪಾದಕರ ಸಹಕಾರಿ ಸಂಘವು 2019-20ನೇ ಸಾಲಿನಲ್ಲಿ 2,99,00,279,03 ರೂ, ವ್ಯವಹಾರವನ್ನು ನಡೆಸಿ, ೨,೫೦,೭೨೬,೪೦ ಹಾಲನ್ನು ರೂ, ೭೫,೦೬,೩೦೨, ೧೩ಕ್ಕೆ ಖರೀದಿಸಿ, ಸ್ಥಳೀಯ ಜನರಿಗೆ ೧೯,೩೯೪.೫೦ ಹಾಲನ್ನು, ಒಕ್ಕೂಟಕ್ಕೆ ೨,೩೭,೯೬೦.೦೦ ಲೀಟರ್ ಹಾಲನ್ನು ಮಾರಾಟ ಮಾಡಲಾಗಿದೆ. ವರದಿ ಸಾಲಿನಲ್ಲಿ ೧,೮೧೦ ಚೀಲ ಪಶು ಆಹಾರ ಹಾಗೂ ೨,೫೩೧ ಕೆ.ಜಿ ಲವಣ ಮಿಶ್ರಣ ಮಾರಾಟ ಮಾಡಿ, ಹಾಲು ವ್ಯಾಪಾರದಿಂದ , ಪಶು ಆಹಾರ ಮಾರಾಟದಿಂದ ಹಾಗೂ ಲವಣ ಮಿಶ್ರಣ ಮಾರಾಟದಿಂದ ೮,೧೯,೪೬೦.೪೩ ವ್ಯಾಪಾರ ಲಾಭ ಬಂದಿರುತ್ತದೆ. ಬಿ.ಎಂ.ಸಿ ಮತ್ತು ಮೇವಿನ ತಾಕುಗಳಿಂದ ೧,೬೦,೮೦೫,೧೯ ಲಾಭ ಬಂದಿರುತ್ತದೆ ಹಾಗೂ ಇತರ ಮೂಲಗಳಿಂದ ರೂ, ೧,೬೩,೮೦೪,೫೩ ಬಂದಿರುತ್ತದೆ ವರದಿ ಸಾಲಿನಲ್ಲಿ ಒಟ್ಟು ರೂ, ೧೧,೪೪,೦೭೧.೧೫ ವ್ಯಾಪಾರ ಲಾಭ ಬಂದಿದ್ದು, ಸಿಬ್ಬಂಧಿ ವೇತನ ಹಾಗೂ ಸಾದಿಲ್ವಾರು ಖರ್ಚುಗಳಿಗೆ ರೂ ೪,೪೭,೯೭೯,೯೬ ಖರ್ಚು ಆಗಿರುತ್ತದೆ. ಸವಕಳಿ ನಿಧಿ, ಲೆಕ್ಕ ಪರಿಶೋಧನಾ ಶುಲ್ಕ ರೂ, ೧,೩೫,೪೭೦.೦೦ ಕಾದಿರಿಸಿ, ಸಂಘುವು ವರದಿ ಸಾಲಿನಲ್ಲಿ ರೂ, ೫,೪೮,೯೮೫.೬೪ ನಿವ್ವಳ ಲಾಭ ಪಡೆದಿರುತ್ತದೆ ಎಂದು ಸಂಘದ ಅಧ್ಯಕ್ಷ ಸುಪ್ರೀತ್ ರೈ ಖಂಡಿಗರವರು ಹೇಳಿದರು.

 

ಅವರು ನ.21ರಂದು ಸವಣೂರು ಶ್ರೀ ವಿನಾಯಕ ಸಭಾ ಭವನದಲ್ಲಿ ಜರಗಿದ ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿ ಸಂಘದ ಎಲ್ಲಾ ಸದಸ್ಯರುಗಳು ಮತ್ತು ಆಡಳಿತ ಮಂಡಳಿಯ ಪ್ರೋತ್ಸಾಹದಿಂದ ಸಂಘವು ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿದ್ದು, ವರದಿ ಸಾಲಿನಲ್ಲಿ ಸದಸ್ಯರುಗಳಿಗೆ ಶೇ.25 ಡಿವಿಡೆಂಡ್ ನೀಡಲಾಗುವುದು, ಅಲ್ಲದೇ ಪ್ರತಿ ಲೀಟರ್ ಹಾಲಿಗೆ ಪ್ರಥಮ ಬಾರಿಗೆ ಒಂದು ರೂಪಾಯಿ ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ ಎಂದು ತಿಳಿಸಿ, ಸಂಘದ ವತಿಯಿಂದ ಸದಸ್ಯರ ರಾಸುಗಳಿಗೆ ಉಚಿತವಾಗಿ ಜಂತು ಹುಳ ಜಾಷಧಿಯನ್ನು ನೀಡಲಾಗಿದೆ. ಅಲ್ಲದೇ ಕಾಲು ಬಾಯಿ ಜ್ವರದ ಲಸಿಕೆಯನ್ನು ನೀಡಲಾಗಿದೆ ಎಂದು ಸುಪ್ರೀತ್ ರೈ ತಿಳಿಸಿದರು.

ಪ್ರಗತಿಯ ಹಾದಿಯಲ್ಲಿ ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘ- ಡಾ.ಸತೀಶ್ ರಾವ್
ದ,ಕ.ಜಿಲ್ಲಾ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಸತೀಶ್ ರಾವ್‌ರವರು ಮಾತನಾಡಿ ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘವು ಅತ್ಯುತ್ತಮವಾದ ಪ್ರಗತಿಯನ್ನು ಹೊಂದಿ, ಹೆಚ್ಚು ಲಾಭವನ್ನು ಪಡೆದಿರುವುದು ತುಂಬಾ ಸಂತೋಷದ ವಿಷಯವಾಗಿದ್ದು, ಪ್ರಸ್ತುತ ದಿನಗಳಲ್ಲಿ ಹೈನುಗಾರಿಕೆಯಿಂದ ಸ್ವಾವಲಂಬಿ ಬದುಕು ಸಾಧಿಸಬಹುದು ಎಂಬುದನ್ನು ರೈತರು ತೋರಿಸಿಕೊಟ್ಟಿದ್ದಾರೆ, ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ದ.ಕ.ಹಾಲು ಒಕ್ಕೂಟವು ರೈತರಿಗೆ ಹಾಲು ಖರೀದಿಯಲ್ಲಿ ಉತ್ತಮವಾದ ಧಾರಣೆಯನ್ನು ನೀಡುತ್ತಿದ್ದು, ಕೋವಿಡ್ ಹಿನ್ನಲೆಯಲ್ಲೂ ಹಾಲಿನ ಉತ್ವನ್ನಗಳಿಗೆ ಬೇಡಿಕೆ ಕಡಿಮೆ ಇದ್ದರೂ, ಒಕ್ಕೂಟ ಮಾತ್ರ ರೈತರ ಹಿತವನ್ನು ಸದಾ ಕಾಯ್ದುಕೊಂಡಿದೆ. ನಮ್ಮ ರೈತ ವ್ಯಾಪಿ ಮಂದಿ ತಮ್ಮ ಮನೆ ಸಮಾರಂಭಗಳಿಗೆ ನಂದಿನಿ ಉತ್ಪನ್ನಗಳ ಬಳಕೆಯನ್ನು ಮಾಡುವ ಪರಿಪಾಠವನ್ನು ಮಾಡಿಕೊಂಡಾಗ, ನಂದಿನಿ ಉತ್ವನ್ನಗಳು ಜನಪ್ರಿಯವಾಗುತ್ತದೆ ಎಂದು ಹೇಳಿದರು.

ಸುಪ್ರೀತ್ ರೈ ಖಂಡಿಗರವರ ನಾಯಕತ್ವದಲ್ಲಿ ಸಂಘ ಮುನ್ನಡೆ- ಸೀತಾರಾಮ ರೈ
ದ.ಕ.ಜಿಲ್ಲಾ ಹಾಲು ಒಕ್ಕೂಟದ ನಿಕಟಪೂರ್ವ ನಿರ್ದೇಶಕ ಸವಣೂರು ಕೆ.ಸೀತಾರಾಮ ರೈಯವರು ಮಾತನಾಡಿ ಕಳೆದ ಒಂದುವರೆ ವರುಷಗಳಿಂದ ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘವು ಅಧ್ಯಕ್ಷ ಸುಪ್ರೀತ್ ರೈ ಖಂಡಿಗ ಮತ್ತು ಆಡಳಿತ ಮಂಡಳಿಯ ನೇತ್ರತ್ವದಲ್ಲಿ ಉತ್ತಮ ರೀತಿಯಲ್ಲಿ ನಡೆಯುತ್ತಿರುವುದು ತುಂಬಾ ಸಂತೋಷ ತಂದಿದೆ. ಸಂಘವು ವರದಿ ಸಾಲಿನಲ್ಲಿ ೫.೮೫ ಲಕ್ಷ ರೂ ಲಾಭ ಪಡೆದಿರುವುದು ಖುಷಿಯ ವಿಚಾರವಾಗಿದೆ, ಸಹಕಾರ ಮನೋಭಾವದ ನೆಲೆಯಲ್ಲಿ ನಾವೆಲ್ಲ ರೈತರು ಸಂಸ್ಥೆಯನ್ನು ಮತ್ತಷ್ಟು ಬಲಿಷ್ಟಗೊಳಿಸಬೇಕು ಎಂದು ಹೇಳಿ, ರೈತನಿಂದ ಅರ್ಧ ಲೀಟರ್ ನಿಂದ ಹಿಡಿದು ೫೦೦ ಲೀಟರ್ ತನಕ ಹಾಲು ಖರೀದಿಸಿ, ಅವನಿಗೆ ಯೋಗ್ಯವಾದ ಧಾರಣೆ ನೀಡುವ ಸಂಸ್ಥೆ ಇದ್ದರೆ ಅದು ಹಾಲು ಉತ್ಪಾದಕರ ಸಹಕಾರ ಸಂಘವಾಗಿದ್ದು, ಹೈನುಗಾರಿಕೆಯಿಂದ ರೈತನ ಬದುಕು ಸಂತೋಷದಿಂದ ಕೂಡಿರುತ್ತದೆ ಎಂದರು.

ಹೆಚ್ಚು ಹಾಲು ಹಾಕಿದವರಿಗೆ ಗೌರವಾರ್ಪಣೆ
ವರದಿ ಸಾಲಿನಲ್ಲಿ ಸಂಘಕ್ಕೆ ಹೆಚ್ಚು ಹಾಲು ಹಾಕಿದವರಲ್ಲಿ ಪ್ರಥಮ-ನಾಗರತ್ನಮ್ಮ ಸೊಂಪಾಡಿ, ದ್ವಿತೀಯ- ಸವಣೂರು ಕೆ.ಸೀತಾರಾಮ ರೈ, ತೃತೀಯ- ಸುದರ್ಶನ್ ನಾಕ್ ಕಂಪರವರುಗಳನ್ನು ಸಂಘದ ವತಿಯಿಂದ ಗೌರವಿಸಿ, ಬಹುಮಾನ ನೀಡಲಾಯಿತು. ಅಲ್ಲದೇ ಸಂಘದ ಎಲ್ಲ ಸದಸ್ಯರುಗಳಿಗೆ ಸ್ಟೀಲ್ ಪಾತ್ರೆಯನ್ನು ನೀಡಲಾಯಿತು.

ಸಂಘದ ಕಾರ್‍ಯದರ್ಶಿ ಭವ್ಯ ಪಿರವರಿಗೆ ಸನ್ಮಾನ
ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಕಳೆದ 5 ವರುಷಗಳಿಂದ ಕಾರ್‍ಯದರ್ಶಿಯಾಗಿ ಸೇವೆ ಸಲ್ಲಿಸಿದ ಭವ್ಯ ಪಿರವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಸಂಘದ ನಿರ್ದೇಶಕರುಗಳಾದ ಪ್ರೇಮಚಂದ್ರ ಮೆದು, ಮಮತಾ ದೇವಶ್ಯ, ದೇವಪ್ಪ ಗೌಡ ಕನಡಕುಮೇರು, ಚೆನ್ನಪ್ಪ ಗೌಡ ಬುಡನಡ್ಕ, ಪ್ರಕಾಶ್ ಕೆ.ಕುದ್ಮನಮಜಲು, ವಿಜಯಲಕ್ಷ್ಮಿ ಕಾಯರ್ಗ, ಆಶಾ ರೈ ಕಲಾಯಿ, ಪ್ರಜ್ವಲ್ ಕೆ.ಆರ್ ಕೋಡಿಬೈಲು, ಯಶೋಧ ಬಸ್ತಿರವರುಗಳು ಉಪಸ್ಥಿತರಿದ್ದರು.

ಸಂಘದ ಕಾರ್‍ಯದರ್ಶಿ ಭವ್ಯ ಪಿರವರು ವರದಿ ವಾಚಿಸಿದರು. ಸಂಘದ ಉಪಾಧ್ಯಕ್ಷ ಗೋಪಾಲಕೃಷ್ಣ ಗೌಡ ಆರೆಲ್ತಡಿ ವಂದಿಸಿದರು. ಸಂಪ್ರೀತ್ ಶೆಟ್ಟಿ ಬಾರಿಕೆ ಪ್ರಾರ್ಥನೆಗೈದರು. ನ್ಯಾಯವಾದಿ ಮಹೇಶ್ ಕೆ.ಸವಣೂರು ಕಾರ್‍ಯಕ್ರಮದಲ್ಲಿ ಸಹಕರಿಸಿದರು.

ಸಮಾರಂಭದಲ್ಲಿ ಸವಣೂರು ಹಾಲು ಉತ್ವಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಸುಬ್ಬಣ್ಣ ರೈ ಖಂಡಿಗ, ಸವಣೂರು ಸಿ.ಎ.ಬ್ಯಾಂಕ್ ಅಧ್ಯಕ್ಷ ಗಣೇಶ್ ನಿಡ್ವಣ್ಣಾಯ, ಉಪಾಧ್ಯಕ್ಷ ತಾರಾನಾಥ ಕಾಯರ್ಗ, ಮುಖ್ಯಕಾರ್‍ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ, ಸುಳ್ಯ ಕ್ಷೇತ್ರದ ಅಕ್ರಮ-ಸಕ್ರಮ ಸಮಿತಿಯ ಸದಸ್ಯ ರಾಕೇಶ್ ರೈ ಕೆಡೆಂಜಿ, ಸವಣೂರು ಗ್ರಾ.ಪಂ, ಮಾಜಿ ಸದಸ್ಯ ಗಿರಿಶಂಕರ್ ಸುಲಾಯ, ಪುತ್ತೂರು ಎಪಿಎಂಸಿ ಮಾಜಿ ನಿರ್ದೇಶಕ ಎ.ಆರ್.ಚಂದ್ರ ಎಡಪತ್ಯ, ರಾಜ್ಯ ಯುವ ಜನ ಒಕ್ಕೂಟದ ಪ್ರಧಾನ ಕಾರ್‍ಯದರ್ಶಿ ಸುರೇಶ್ ರೈ ಸೂಡಿಮುಳ್ಳು ಸಹಿತ ಸಂಘದ ಸದಸ್ಯರುಗಳು ಸಮಾರಂಭದಲ್ಲಿ ಭಾಗವಹಿಸಿದ್ದರು. ಸಂಘದ ಹುಲ್ಲುಗಾವಲು ಮೇಲ್ವಿಚಾರಕ ರಮೇಶ್ ಪಿ, ಕೃ,ಗ.ಕಾರ್‍ಯಕರ್ತ ಧನಂಜಯರವರು ಸಹಕರಿಸಿದರು.

ಸಂಘದಿಂದ ಜಾಷಧಿ ಗಿಡಮೂಲಿಕಾ ವನ, ಸಮುದಾಯ ಭವನ
ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದಿಂದ ಜಾಷಧಿ ಗಿಡ ಮೂಲಿಕೆಗಳ ವನ ನಿರ್ಮಾಣ ಮತ್ತು ರೈತ ಸಮುದಾಯ ಭವನದ ಕಟ್ಟಡ ನಿರ್ಮಾಣದ ಯೋಜನೆಯನ್ನು ಹಮ್ಮಿಕೊಳ್ಳಲಾಗಿದ್ದು, ಈಗಾಗಲೇ ಇಂಜಿನೀಯರ್‌ರಿಂದ ಎಸ್ಟೀಟಿಮೇಟ್‌ಯಾಗಿದ್ದು, ಮುಂದಿನ ದಿನಗಳಲ್ಲಿ ಈ ಯೋಜನೆ ಕಾರ್‍ಯರೂಪಕ್ಕೆ ಬರಲಿದೆ. ಸಂಘುವು ೩೫ ವರುಷದಲ್ಲಿ ನಡೆಯುತ್ತಿದ್ದು, ಹೈನುಗಾರರ ನಿರಂತರ ಪ್ರೋತ್ಸಾಹಕ್ಕೆ ಸಂಘವು ಅಭಿನಂದನೆಯನ್ನು ಸಲ್ಲಿಸುತ್ತದೆ – ಸುಪ್ರೀತ್ ರೈ ಖಂಡಿಗ ಅಧ್ಯಕ್ಷರು ಸವಣೂರು ಹಾಲು ಉತ್ಪಾದಕರ ಸಹಕಾರಿ ಸಂಘ

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.