HomePage_Banner
HomePage_Banner
HomePage_Banner

ಸೌಲಭ್ಯಗಳ ಮೂಲಕ ದುರ್ಬಲ ವರ್ಗದವರು ಮುಖ್ಯವಾಹಿನಿಗೆ – ದುರ್ಬಲ ವರ್ಗಗಳ ದಿನ ವಿಶೇಷ ಕಾರ್ಯಗಾರದಲ್ಲಿ ನ್ಯಾಯಾಧೀಶ ಕಿಶನ್ ಬಿ ಮಡಲಗಿ

Puttur_Advt_NewsUnder_1
Puttur_Advt_NewsUnder_1

  • ಪ್ರತಿಯೊಬ್ಬ ಪ್ರಜೆಗೂ ಮೂಲಭೂತ ಸೌಕರ್ಯ ಸರಕಾರದ ಜವಾಬ್ದಾರಿ- ವೆಂಕಟೇಶ್
  • ಸರಕಾರ, ಸಂಘಟನೆಗಳು ಸೇವೆಗಾಗಿ ಮೀಸಲು – ಗೌರಿ ಬನ್ನೂರು
  • ದುರ್ಬಲ ವರ್ಗದವರನ್ನು ಸಬಲರನ್ನಾಗಿ ಮಾಡಬೇಕು- ಮನೋಹರ್ ಕೆ.ವಿ

ಪುತ್ತೂರು: ಸಮಾಜದಲ್ಲಿ ಉದ್ಯೋಗವಾಕಾಶ, ಶೈಕ್ಷಣಿಕ, ರಾಜಕೀಯ ಪ್ರಾತಿನಿಧ್ಯ ಸೇರಿದಂತೆ ಹಲವಾರು ಸೌಲಭ್ಯಗಳನ್ನು ದುರ್ಬಲವರ್ಗದವರಿಗೆ ನೀಡುವ ಮೂಲಕ ಅವರನ್ನು ಮುಖ್ಯವಾಹಿನಿಗೆ ತರುವ ಕೆಲಸ ಆಗಬೇಕು. ಇದನ್ನು ಸರಕಾರ ಮಾಡುತ್ತದೆ ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಕಿಶನ್ ಬಿ ಮಡಲಗಿ ಅವರು ಹೇಳಿದರು.
ದುರ್ಬಲ ವರ್ಗಗಳ ದಿನದ ಅಂಗವಾಗಿ ಬನ್ನೂರು ನವೊದಯ ಯುವಕ ಮಂಡಲದಲ್ಲಿ ನ.22ರಂದು ನಡೆದ ಕಾನೂನು ಮಾಹಿತಿ ಶಿಬಿರವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಶ್ರೀ ಡಿ ದೇವರಾಜ ಅರಸು ಮೆಟ್ರಿಕ್ ನಂತರದ ಬಸಲಕಿಯರ ವಿದ್ಯಾರ್ಥಿನಿ ನಿಲಯ, ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು ಮತ್ತು ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ನವೋದಯ ಯುವಕ ಮತ್ತು ಮಹಿಳಾ ಮಂಡಲದ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಿತು. ಬ್ರಿಟೀಷ್ ಆಳ್ವಿಕೆ ಹೋದ ಬಳಿಕ ದೇಶವನ್ನು ಹೇಗೆ ನಡೆಸಬೇಕೆಂಬ ಪ್ರಶ್ನೆ ಬಂದಾಗ ಸಂವಿಧಾನ ರಚನೆ ಮಾಡಲಾಯಿತು. ಆ ಸಂವಿಧಾನದಂತೆ ಎಲ್ಲರು ಸಮಾನರೆಂಬ ಕಾನೂನು ತರಲಾಯಿತು. ಅದರಂತೆ ಭಾರತದ ಎಲ್ಲಾ ನಾಗರಿಕರು ಸಮಾನತೆಯಿಂದರಬೇಕೆಂದು ಪ್ರಯತ್ನ ಪಟ್ಟರೂ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಇನ್ನೂ ಕೂಡಾ ಸಾಮಾಜಿಕವಾಗಿ ಹಿಂದುಳಿದಿರುವುದು ಬೆಳಕಿಗೆ ಬಂತು. ಈ ನಿಟ್ಟಿನಲ್ಲಿ ಅವರ ಅಭಿವೃದ್ಧಿಗಾಗಿ ಸರಕಾರ ಅನೇಕ ಉತ್ತಮ ಯೋಜನೆಗಳನ್ನು ಜಾರಿಗೆ ತಂದಿತ್ತು. ಆದರೆ ಇನ್ನೂ ಹಲವು ಮಂದಿ ದುರ್ಬಲ ವರ್ಗದವರಿಗೆ ಸರಕಾರದ ಯೋಜನೆಗಳ ಕುರಿತು ಅರಿವಿಲ್ಲ. ಈ ಅರಿವು ಮೂಡಿಸುವ ಕಾರ್ಯ ಸರಕಾರದ ಮೂಲಕ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಪ್ರತಿಯೊಬ್ಬ ಪ್ರಜೆಗೂ ಮೂಲಭೂತ ಸೌಕರ್ಯ ಸರಕಾರದ ಜವಾಬ್ದಾರಿ:
೨ನೇ ಹೆಚ್ಚುವರಿ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ವೆಂಕಟೇಶ್ ಅವರು ಮಾತನಾಡಿ ಪ್ರತಿಯೊಬ್ಬ ಪ್ರಜೆಗೂ ಮೂಲಭೂತ ಸೌಕರ್ಯ ಒದಗಿಸುವುದು ಸರಕಾರದ ಜವಾಬ್ದಾರಿ. ಕಲ್ಯಾಣ ರಾಜ್ಯದ ಪ್ರಕಾರ ಪ್ರತಿಯೊಬ್ಬ ಪ್ರಜೆಗೂ ಮೂಲಭೂತ ಸೌಕರ್ಯ ಒದಗಿಸುವುದು ಅಗತ್ಯ. ಈ ನಿಟ್ಟಿನಲ್ಲಿ ತಂದೆ ತಾಯಿಯ ಸ್ಥಾನದಲ್ಲಿ ಸರಕಾರ ಇರುತ್ತದೆ ಎಂದರು.
ಸರಕಾರ, ಸಂಘಟನೆ ಸೇವೆಗಾಗಿ ಮೀಸಲು:
ನಗರಸಭಾ ಸದಸ್ಯ ಗೌರಿ ಬನ್ನೂರು ಅವರು ಮಾತನಾಡಿ ಸರಕಾರ ಮತ್ತು ಸಂಘಟನೆಗಳು ಇರುವುದೇ ಸಮಾಜದ ಸೇವೆಗಾಗಿ. ಈ ನಿಟ್ಟಿನಲ್ಲಿ ಸಮಾಜದ ದುರ್ಬಲ ವರ್ಗದವರ ಏಳ್ಗಿಗಾಗಿ ಸರಕಾರ ಅನೇಕ ಕಾರ್ಯಕ್ರಮ ಹಾಕಿಕೊಂಡಿದೆ. ಅದನ್ನು ತಳಮಟ್ಟದ ಜನರಿಗೂ ತಲುಪಿಸುವುದು ನಮ್ಮ ಜವಾಬ್ದಾರಿ ಎಂದರು.
ದುರ್ಬಲ ವರ್ಗದವರನ್ನು ಸಬಲರನ್ನಾಗಿ ಮಾಡಬೇಕು:
ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ ವಿ ಅವರು ಮಾತನಾಡಿ ಬಡತನದಿಂದ ಮೀರಿ ಹೋಗುವ ಅವಕಾಶ ಸಿಕ್ಕಿರುವಾಗ ಅದನ್ನು ಸದುಪಯೋಗ ಪಡೆಯಬೇಕು. ಪ್ರಸ್ತುತ ದಿನಗಳಲ್ಲಿ ದುರ್ಬಲ ವರ್ಗದವರು ಅನೇಕ ಸಮಸ್ಯೆಗಳಿಂದ ಹಿಂದೆ ಉಳಿಯುತ್ತಾರೆ. ಅವರನ್ನು ಸಬಲರನ್ನಾಗಿ ಮಾಡಬೇಕು ಎಂದು ಹೇಳಿದರು. ಕಾನೂನು ಸೇವೆಗಳ ಸಮಿತಿ ಅರೆಕಾಲಿಕ ಸ್ವಯಂ ಸೇವಕರಾದ ರೋಹಿಣಿ ರಾಘವ ಆಚಾರ್ಯ ಮಾತನಾಡಿದರು. ನಗರಸಭೆ ಸದಸ್ಯೆ ಮೋಹಿನಿ ವಿಶ್ವನಾಥ್, ಯುವಕ ಮಂಡಲದ ಸಂಚಾಲಕ ಚಂದ್ರಾಕ್ಷ ಬಿ.ಎನ್, ಅಧ್ಯಕ್ಷ ಶ್ರೀಧರ್ ಪೂಜಾರಿ, ಮಹಿಳಾ ಮಂಡಲದ ಅಧ್ಯಕ್ಷೆ ಮಮತಾ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನ್ಯಾಯವಾದಿಗಳಾದ ರಾಜೇಶ್ವರಿ ಪ್ರಾರ್ಥಿಸಿ, ಹರಿಣಾಕ್ಷಿ ಜೆ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎನ.ಎಸ್ ಮಂಜುನಾಥ್ ವಂದಿಸಿದರು. ರಂಗಪ್ಪ ಪೂಜಾರಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.