HomePage_Banner
HomePage_Banner
HomePage_Banner

ಸವಣೂರು ಶಾಂತಿನಗರದ ರವೀಂದ್ರ ಆಚಾರ್ಯರಿಗೆ ಹಿಂಜಾವೇಯಿಂದ ಆರ್ಥಿಕ ನೆರವು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮೆದುಳಿನ ರಕ್ತಸ್ರಾವದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿಯಲ್ಲಿರುವ ಸವಣೂರು ಶಾಂತಿನಗರ ನಿವಾಸಿ ರವೀಂದ್ರ ಆಚಾರ್ಯ ಅವರ ಆಸ್ಪತ್ರೆಯ ವೆಚ್ಚಕ್ಕಾಗಿ ಹಿಂದು ಜಾಗರಣ ವೇದಿಕೆ ಸವಣೂರು ಘಟಕ ಕಡಬ ತಾಲೂಕು ಇದರ ವತಿಯಿಂದ ಅವರ ಮನೆಯವರಿಗೆ ಆರ್ಥಿಕ ನೆರವು ಹಸ್ತಾಂತರಿಸಲಾಯಿತು.
ಬಡ ಕುಟುಂಬದ ರವೀಂದ್ರ ಆಚಾರ್ಯರವರು ಮನೆಯ ದುಡಿಯುವ ವ್ಯಕ್ತಿಯಾಗಿ ಇದೀಗ ಆಸ್ಪತ್ರೆ ಸೇರಿದ್ದು ಮನೆ ಮಂದಿಗೆ ಜೀವನಕ್ಕೆ ಕಷ್ಟಕರ ಆಗಿರುವುದನ್ನು ಮನಗಂಡು ಹಿಂದು ಜಾಗರಣ ವೇದಿಕೆ ಸವಣೂರು ಘಟಕ ಇದರ ಪದಾಧಿಕಾರಿಗಳ ಒಟ್ಟು ಸಂಗ್ರಹದ ಮೊತ್ತ ರೂ. 8,000 ಅನ್ನು ರವೀಂದ್ರ ಆಚಾರ್ಯಅವರ ಮನೆಯವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಹಿಂದು ಜಾಗರಣ ವೇದಿಕೆ ಪುತ್ತೂರು ನಗರ ಇದರ ಗೌರವಾಧ್ಯಕ್ಷ ಪ್ರಕಾಶ್ಚಂದ್ರ ರೈ ಮೊಗರುಗುತ್ತು , ಹಿಂದು ಜಾಗರಣ ವೇದಿಕೆ ಪುತ್ತೂರು ತಾಲೂಕು ಕಾರ್ಯದರ್ಶಿ ಪುಷ್ಪರಾಜ್ ಸವಣೂರು, ಸವಣೂರು ಹಿಂದು ಜಾಗರಣ ವೇದಿಕೆಯ ಅಧ್ಯಕ್ಷ ಶ್ರೀಧರ ಇಡ್ಯಾಡಿ, ಹಿಂದು ಜಾಗರಣ ವೇದಿಕೆ ಕುದ್ಮಾರು ಇದರ ಪ್ರಧಾನ ಕಾರ್ಯದರ್ಶಿ ಆಕಾಶ್ ಕುದ್ಮಾರು, ಹಾಗೂ ಹಿಂದು ಜಾಗರಣ ವೇದಿಕೆ ಸವಣೂರು ಘಟಕ ಇದರ ಪದಾಧಿಕಾರಿಗಳಾದ ಚೇತನ್ ಇಡ್ಯಾಡಿ, ಸನತ್ ಇಡ್ಯಾಡಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.