ಪುತ್ತೂರು: ಬಂಟ್ವಾಳ ತಾಲೂಕು ಬಾಳ್ತಿಲ ಗ್ರಾಮದ ಕುದ್ರೆಬೆಟ್ಟು ಬೋಲ್ಪೋಡಿ ಎಂಬಲ್ಲಿ ನ.22ರಂದು ರಾತ್ರಿ ಓಮ್ನಿ ಕಾರು ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಹಿಂದೂ ಸಂಘಟನೆಯ ಕಾರ್ಯಕರ್ತ ಯತಿರಾಜ್ ರವರು ಮೃತಪಟ್ಟಿದ್ದಾರೆ.
ಕಲ್ಲಡ್ಕ ಕಡೆಯಿಂದ (KA-19-MD-2880) ಬರುತ್ತಿದ್ದ ಓಮ್ನಿ ಕಾರನ್ನು ಅದರ ಚಾಲಕ ಅತೀ ವೇಗ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿ (KA-21-X-1255) ಬೈಕ್ ಗೆ ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ಬೈಕ್ ಸವಾರ ಬಂಟ್ವಾಳ ಬಾಳ್ತಿಲ ಗ್ರಾಮದ ನಿವಾಸಿ ಯತಿರಾಜ್ ಹಾಗೂ ಓಮ್ನಿ ಕಾರು ಚಾಲಕ ಯೋಗೀಶ್ ರವರು ಗಾಯಗೊಂಡಿರುವುದಲ್ಲದೆ ಅಪಘಾತದಲ್ಲಿ ವಾಹನಗಳು ಹಾಗೂ ರಸ್ತೆ ಬದಿಯ ವಿದ್ಯುತ್ ಕಂಬ ಜಖಂಗೊಂಡಿದೆ.
ಗಾಯಾಳುಗಳನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು ಬೈಕ್ ಸವಾರ ಯತಿರಾಜ್ ರವರು ಮೃತಪಟ್ಟಿದ್ದಾರೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಕಲಂ 279, 337, 304[ಎ], 427 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.