ಪುತ್ತೂರು: ಸಾವಿರಾರು ಯುವಕರಿಗೆ ಉದ್ಯೋಗ ಕೊಡಿಸುವ ಸೀ ಫುಡ್ ಪಾರ್ಕ್ ಯೋಜನೆಯನ್ನು ಮಾಹಿತಿ ಗೊಂದಲದಿಂದ ವಿರೋಧ ವ್ಯಕ್ತಪಡಿಸುವ ಬೆರಳೆಣಿಕೆ ಮಂದಿಗಾಗಿ ಕೈ ಬಿಟ್ಟಲ್ಲಿ ಮುಂದಿನ ದಿನ ಪಡ್ನೂರು ಶ್ರೀ ರಾಮ್ ಪ್ರೆಂಡ್ಸ್ನಿಂದ ಹೋರಾಟ ನಡೆಸಲಾಗುವುದು ಎಂದು ಶ್ರೀ ರಾಮ್ಪ್ರೆಂಡ್ಸ್ನ ಗೌರವಾಧ್ಯಕ್ಷ ನವೀನ್ ಪಡ್ನೂರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಆತ್ಮನಿರ್ಭರ ಭಾರತ್ ಯೋಜನೆ ಮೂಲಕ ಹಲವು ಅಭಿವೃದ್ಧಿ ಕಾರ್ಯಕ್ಕೆ ಅವಕಾಶ ಕೊಟ್ಟಿದ್ದಾರೆ. ಕೊವೀಡ್ ಸಂದರ್ಭದಿಂದ ಹಲವಾರು ಮಂದಿ ಉದ್ಯೋಗ ಕಳೆದು ಕೊಂಡು ಊರಿಗೆ ಬಂದಿದ್ದಾರೆ. ಇಂತಹ ಸಂದರ್ಭದಲ್ಲಿ ಯುವಕರಿಗೆ ಉದ್ಯೋಗ ಕೊಡಿಸುವುದು ಅತೀ ಅಗತ್ಯ. ಹಾಗಾಗಿ ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜಿಗೆ ಮೀಸಲಿಟ್ಟ ಜಾಗದಲ್ಲಿ ಸದ್ಯದ ಮಟ್ಟಿಗೆ ಮೆಡಿಕಲ್ ಕಾಲೇಜಿನ ಪ್ರಸ್ತಾವನೆ ಇಲ್ಲದಿದ್ದ ಹಿನ್ನೆಲೆಯಲ್ಲಿ ಆ ಸ್ಥಳದಲ್ಲಿ ಸೀ ಪುಡ್ ಪಾರ್ಕ್ ಮಾಡುವುದು ಔಚಿತ್ಯವಾಗಿದೆ. ಮೆಡಿಕಲ್ ಕಾಲೇಜಿಗೆ ಸರಕಾರಿ ಜಾಗ ಬೇರೆ ಕಡೆಯಲ್ಲಿ ಗುರುತು ಮಾಡುವ ಕೆಲಸ ಆಗಬೇಕು ಎಂದ ಅವರು ಪುತ್ತೂರು ಅಭಿವೃದ್ದಿ ಆಗಬೇಕಾದರೆ ದೊಡ್ಡ ದೊಡ್ಡ ಕಾರ್ಖಾನೆಗಳು ಬರುವಂತಾಗಬೇಕು. ಇಂತಹ ಕಾರ್ಖಾನೆಗಳು ಬಂದಾಗ ಆ ಪರಿಸರ ಅಭಿವೃದ್ದಿ ಹೊಂದುವುದರ ಜೊತೆಗೆ ಆ ಭಾಗದಲ್ಲಿ ಸ್ವ ಉದ್ಯೋಗಗಳು ಸೃಷ್ಟಿಯಾಗುತ್ತವೆ, ಮೂಲಭೂತ ಸೌಕರ್ಯಗಳು ಹೆಚ್ಚುತ್ತವೆ ಎಂದು ಅವರು ಹೇಳಿದರು.
ಸೀ ಫುಡ್ ಪಾರ್ಕ್ನ ಅರಿವು ಅಗತ್ಯ:
ಸೀ ಫುಡ್ ಪಾರ್ಕ್ ಬಂದರೆ ಗ್ರಾಮದ ಜನರಿಗೆ ತೊಂದರೆ ಉಂಟಾಗುತ್ತದೆ ಎಂಬ ಗೊಂದಲವನ್ನು ಉಂಟು ಮಾಡುವ ಕೆಲಸ ಆಗಿದೆ. ಆದರೆ ಸೀ ಫುಡ್ ಪಾರ್ಕ್ ಕುರಿತು ಯಾರಿಗೂ ಸರಿಯಾದ ಜ್ಞಾನ ಇಲ್ಲ. ಹಾಗಾಗಿ ಕೇರಳದ ಅಲೆಪ್ಪಿಯಲ್ಲಿರುವ ಸೀ ಫುಡ್ ಪಾರ್ಕ್ನ ಅಧಿಕಾರಿಗಳನ್ನು ಕರೆಸಿ ಅವರಿಂದ ಪುತ್ತೂರಿನಲ್ಲಿ ಗ್ರಾಮದ ಜನತೆಗೆ ಅರಿವು ಮೂಡಿಸುವ ಕೆಲಸ ಶಾಸಕರ ನೇತೃತ್ವದಲ್ಲಿ ಆಗಬೇಕು. ಅರಿವು ಮೂಡಿಸುವ ಕಾರ್ಯಕ್ಕೆ ಅವಕಾಶ ಕೊಡುವುದಾದರೆ ಶ್ರೀ ರಾಮ್ಫ್ರೆಂಡ್ಸ್ ನೇತೃತ್ವ ವಹಿಸಲಿದೆ ಎಂದು ನವೀನ್ ಪಡ್ನೂರು ಹೇಳಿದರು.
ಉದ್ಯೋಗದಲ್ಲಿ ಬನ್ನೂರು ಪಡ್ನೂರಿಗೆ ಆದ್ಯತೆ:
ಸೀ ಫುಡ್ ಪಾರ್ಕ್ ಬಂದರೆ ಸಾವಿರಾರು ಮಂದಿಗೆ ಉದ್ಯೋಗ ಅವಕಾಶ ಸಿಗುತ್ತದೆ. ಇಂತಹ ಸಂದರ್ಭದಲ್ಲಿ ಪುತ್ತೂರಿನ ಬನ್ನೂರು ಮತ್ತು ಪಡ್ನೂರು ಗ್ರಾಮದ ಯುವಕರಿಗೆ ಉದ್ಯೋಗದ ಪ್ರಥಮ ಆದ್ಯತೆ ಕೊಡಬೇಕು ಎಂದು ನವೀನ್ ಪಡ್ನೂರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಶ್ರೀರಾಮ್ ಫ್ರೆಂಡ್ಸ್ನ ಅಧ್ಯಕ್ಷ ಯತೀಶ್ ಪಂಜಿಗುಡ್ಡೆ, ಸಂಚಾಲಕ ವಿಶ್ವನಾಥ್ ಪಂಜಿಗುಡ್ಡೆ, ಸಹ ಸಂಚಾಲಕ ಲೋಕೇಶ್ ಉಪಸ್ಥಿತರಿದ್ದರು.
ಮೆಡಿಕಲ್ ಕಾಲೇಜಿಗೆ ಹೊಸ ಜಾಗ ಹುಡುಕುವ ಬದಲು ಸೀ-ಪುಡ್ ಪಾರ್ಕ್ ಗೆ ಹೊಸ ಜಾಗ ಹುಡುಕುವುದು ಸಮಂಜಸ. ಪುತ್ತೂರು ತಾಲೂಕು ಈಗಾಗಲೆ ಜಿಲ್ಲೆಯಾಗಿ ಮಾರ್ಪಡಿಸಿದ್ದರೆ, ಪುತ್ತೂರು ತಾಲೂಕು ಅಸ್ಪತ್ರೆ ಯನ್ನು ಜಿಲ್ಲಾ ಆಸ್ಪತ್ರೆ ಯಾಗಿ ಅಭಿವೃದ್ಧಿ ಪಡಿಸಿದ್ದರೆ ಇದೇ ವರ್ಷ ಮೆಡಿಕಲ್ ಕಾಲೇಜು ಅರಂಬಿಸಬಹುದಿತ್ತು. ಅಕ್ಷೇಪಕ್ಕೆ ಪ್ರತಿ ಆಕ್ಷೇಪ ಪರಿಹಾರ ಯಾ ತಂತ್ರವಲ್ಲ