ಪುತ್ತೂರು: ಸಣ್ಣ ನೀರಾವರಿ ಯೋಜನೆಯಡಿಯಲ್ಲಿ ರೂ.೩೦ ಲಕ್ಷ ವೆಚ್ಚದಲ್ಲಿ ಮುಕ್ರಂಪಾಡಿ ಸುಭದ್ರ ಕಲ್ಯಾಣ ಮಂಟಪದ ಬಳಿ ಹರಿಯುತ್ತಿರುವ ತೋಡಿಗೆ ಸುಮಾರು ೭೫ ಮೀ. ಉದ್ದದ ತಡೆಗೋಡೆ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮ ನ.೨೧ ರಂದು ನೆರವೇರಿದೆ.
ಶಾಸಕ ಸಂಜೀವ ಮಠಂದೂರುರವರು ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ಪುತ್ತೂರಿನ ಸಮಗ್ರ ಅಭಿವೃದ್ಧಿಗಾಗಿ ರೂ.೨೫ ಕೋಟಿಯನ್ನು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರದಲ್ಲಿಯೇ ಮುಖ್ಯಮಂತ್ರಿ ಯಡಿಯೂರಪ್ಪರವರು ಮಂಜೂರು ಮಾಡಲಿದ್ದಾರೆ. ಅಭಿವೃದ್ಧಿಯ ಹಿತಚಿಂತನೆಯಲ್ಲಿರುವ ಸರಕಾರ ನಮ್ಮದು. ಈಗಾಗಲೇ ನಗರಸಭೆ ವ್ಯಾಪ್ತಿಯಲ್ಲಿ ಯುಜಿಡಿ ಯೋಜನೆ ಜಾರಿಯಾಗಿದೆ. ಅದು ಕರ್ಯಗತಕ್ಕಾಗಿ ಯೋಜನೆ ರೂಪಿಸಲಾಗಿದ್ದು ಕಾಲಮಿತಿಯೊಳಗೆ ಕಾಮಗಾರಿಗಳು ಪೂರ್ಣಗೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭಾ ಸ್ಥಳೀಯ ಸದಸ್ಯೆ ಶಶಿಕಲಾ ಸಿ.ಎಸ್, ಎಪಿಎಂಸಿ ನಿರ್ದೇಶಕರೂ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಬೂಡಿಯಾರ್ ರಾಧಾಕೃಷ್ಣ ರೈ, ಕೆಡಿಪಿ ನಾಮನಿರ್ದೇಶಿತ ಸದಸ್ಯ ಭಾಸ್ಕರ್ ರೈ ಕಂಟ್ರಮಜಲು, ಕಿರಣ್ ಎಂಟರ್ಪ್ರೈಸಸ್ನ ಕೇಶವ್ ನಾಯಕ್, ವಿದ್ಯಾ ಕೇಶವ್, ಕಿರಣ್ ನಾಯಕ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾಜಾರಾಂ, ಕಾಂಟ್ರಾಕ್ಟರ್ ನಿಝಾರ್ ಬೇಕಲ್, ಮಣಿಲ ವೆಲ್ಡಿಂಗ್ ಸರ್ವಿಸ್ನ ಸುರೇಶ್ ನಾಕ್ ಸಹಿತ ಹಲವರು ಉಪಸ್ಥಿತರಿದ್ದರು.