HomePage_Banner
HomePage_Banner
HomePage_Banner
HomePage_Banner

ಪೆರಿಯಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಪೆರಿಯಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘವು 2019-20ನೇ ಸಾಲಿನಲ್ಲಿ 6.50 ಲಕ್ಷ ರೂ. ಲಾಭ ಗಳಿಸಿದ್ದು, ಸದಸ್ಯರಿಗೆ ಶೇ. 14ಡಿವಿಡೆಂಟ್ ಘೋಷಿಸಲಾಗಿದೆ.

ನ.23ರಂದು ಸಂಘದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಲಾಭಾಂಶ ವಿಂಗಡನೆ ನಡೆದು ಈ ಡಿವಿಡೆಂಟ್ ಘೋಷಿಸಲಾಯಿತು. ಸಂಘದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಜಗದೀಶ್ ರಾವ್, ವರದಿ ಸಾಲಿನಲ್ಲಿ ಸಂಘವು ಹಾಲು ಮಾರಾಟದಿಂದ 14,34,365.80 ರೂ. ಲಾಭ ಬಂದಿದೆ. ಪಶು ಆಹಾರ ಮಾರಾಟ, ವೀರ್ಯ ನಳಿಕೆ, ಲವಣ ಮಿಶ್ರಣ, ಹುಳದ ಔಷಧ ಸೇರಿದಂತೆ ಇತರ ಮಾರಾಟದಿಂದ 73,510 ರೂ. ಲಾಭ ಬಂದಿದೆ. ಹೀಗೆ ಒಟ್ಟು ಎಲ್ಲಾ ವ್ಯವಹಾರಗಳ ಖರ್ಚು ಕಳೆದು 6,50,494.70 ನಿವ್ವಳ ಲಾಭ ಬಂದಿದೆ. ಬಂದ ಲಾಭಾಂಶದಲ್ಲಿ ಶಿಕ್ಷಣ ನಿಧಿಗೆ ಶೇ.2, ಕ್ಷೇಮ ನಿಧಿಗೆ ಶೇ.25, ಹಾಲು ಉತ್ಪಾದಕರ ಬೋನಸ್ಸಿಗೆ ಶೇ.50, ಕಟ್ಟಡ ನಿಧಿಗೆ ಶೇ.20, ರಾಸು ಅಭಿವೃದ್ಧಿ ನಿಧಿಗೆ ಶೇ.10, ದಾನ ಧರ್ಮದ ನಿಧಿಗೆ ಶೇ.5 ಹಾಗೂ 60 ಸಾವಿರ ರೂ.ವನ್ನು ಸಿಬ್ಬಂದಿ ಬೋನಸ್ಸಿಗೆ ಮೀಸಲಿಡಲಾಗಿದೆ. ಅಡಿಟ್ ವರ್ಗೀಕರಣದಲ್ಲಿ ಸಂಘಕ್ಕೆ ಎ ಗ್ರೇಡ್ ಬಂದಿದೆ. ಇದಕ್ಕೆ ಕಾರಣರಾದ ಎಲ್ಲಾ ಸಂಘಕ್ಕೆ ಹಾಲು ಪೂರೈಸುವ ಹೈನುಗಾರರಿಗೂ, ಆಡಳಿತ ಮಂಡಳಿ, ಸಿಬ್ಬಂದಿಗಳಿಗೂ ಅಭಿನಂದನೆ ಸಲ್ಲಿಸಿದರು.

ವರದಿ ವರ್ಷದಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಕೆ ಮಾಡಿದ ವಾಸಪ್ಪ ಪೂಜಾರಿ ಖಂಡಿಗರಿಗೆ ಪ್ರಥಮ, ಸದಾನಂದ ಶೆಟ್ಟಿ ಕಿಂಡೋವು ಅವರಿಗೆ ದ್ವಿತೀಯ ಹಾಗೂ ವಸಂತ ಕುಂಟಿನಿ ಅವರಿಗೆ ತೃತೀಯ ಬಹುಮಾನವನ್ನು ನೀಡಲಾಯಿತು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಶೀನಪ್ಪ ಗೌಡ, ನಿರ್ದೇಶಕರಾದ ಜಯಂತ ಪೊರೋಳಿ, ಸತೀಶ್ ರಾವ್, ಪ್ರಶಾಂತ, ಈಶ್ವರ ನಾಯಕ್, ದೇರಣ್ಣ ಗೌಡ, ಸುಮತಿ, ವನಿತಾ, ಬಾಲಚಂದ್ರ ಕೆ., ಸದಾನಂದ ಶೆಟ್ಟಿ, ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿ ಉಪಸ್ಥಿತರಿದ್ದರು.

ಸಂಘದ ಸಿಬ್ಬಂದಿ ಗಣೇಶ್ ಕೆ. ಸ್ವಾಗತಿಸಿದರು. ಕಾರ್ಯದರ್ಶಿ ಮಧುಷಾ ವರದಿ ವಾಚಿಸಿದರು. ಸಿಬ್ಬಂದಿಗಳಾದ ಸುರೇಶ್ ಜಿ. ವಂದಿಸಿದರು. ಚೆನ್ನಯ್ಯ ಪಿ. ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.