HomePage_Banner
HomePage_Banner
HomePage_Banner
HomePage_Banner

ರೋಟರಿ ಪುತ್ತೂರು ಆತಿಥ್ಯದಲ್ಲಿ ರೋಟರಿ ವಲಯ 5ರ ಸಾಂಸ್ಕೃತಿಕ ಸ್ಪರ್ಧೆ `ಕಲಾ ಸಂಭ್ರಮ-2020′

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಕೋವಿಡ್‌ನಲ್ಲೂ ರೋಟರಿಯಿಂದ ಸಮಾಜಮುಖಿ ಕಾರ್ಯಕ್ರಮ ಶ್ಲಾಘನೀಯ-ಡಾ.ಭಾಸ್ಕರ್

ಚಿತ್ರ: ಪದ್ಮಾ ಪುತ್ತೂರು

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಇದರ ವತಿಯಿಂದ ರೋಟರಿ ಜಿಲ್ಲೆ 3181, ರೋಟರಿ ವಲಯ ಐದರ ಸಾಂಸ್ಕೃತಿಕ ಸ್ಪರ್ಧೆ `ಕಲಾ ಸಂಭ್ರವ-2020′ ಕಾರ್ಯಕ್ರಮವು ನ.22ರಂದು ಸುದಾನ ಶಾಲೆಯ ಎಡ್ವರ್ಡ್ ಸಭಾಂಗಣದಲ್ಲಿ ಜರಗಿತು.

ಮಾಜಿ ರೋಟರಿ ಗವರ್ನರ್ ಹಾಗೂ ಪುತ್ತೂರು ಸಿಟಿ ಆಸ್ಪತ್ರೆಯ ವೈದ್ಯರಾಗಿರುವ ಡಾ.ಭಾಸ್ಕರ್ ಎಸ್.ರವರು ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ಕೋವಿಡ್ 19 ಸಂಕಟದ ಸಮಯದಲ್ಲೂ ರೋಟರಿ ಸಂಸ್ಥೆಗಳು ಸುಮ್ಮನೆ ಕೂರದೆ ತಮ್ಮ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಾ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುವುದು ಸಂತೋಷದ ವಿಷಯವಾಗಿದೆ. ವರ್ಚುವಲ್ ಮೀಟಿಂಗ್ ಮೂಲಕ ಒಬ್ಬರಿಗೊಬ್ಬರನ್ನು ಸಂಪರ್ಕಿಸಿ ಹೊಸ ಹೊಸ ಅವಕಾಶಗಳನ್ನು ಅರಸುತ್ತಾ ಜನರಿಗೆ ಕೋವಿಡ್ ಸಂದರ್ಭದಲ್ಲಿ ವಹಿಸಬೇಕಾದ ಎಚ್ಚರಿಕೆಗಳ ತಿಳುವಳಿಕೆ ನೀಡುವುದಲ್ಲದೆ, ಮಾಸ್ಕ್, ಸ್ಯಾನಿಟೈಸರ್, ಆಹಾರ ಪದಾರ್ಥಗಳು ಮತ್ತು ಔಷಧಿಗಳನ್ನು ಉಚಿತವಾಗಿ ನೀಡಿ ಸಮಾಜಸೇವೆಯನ್ನು ಗಣನೀಯ ಪ್ರಮಾಣದಲ್ಲಿ ಮಾಡಿರುವುದು ಶ್ಲಾಘನೀಯ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ರೋಟರಿ ಜಿಲ್ಲಾ 3181ರ ಸಾಂಸ್ಕೃತಿಕ ಸಭಾಪತಿಯಾಗಿರುವ ರಾಜಗೋಪಾಲ ವೈಯವರು ಮಾತನಾಡಿ, ೨೦೨೦ ಇಸವಿ ಸರ್ವರು ನೆನಪಿನಲ್ಲಿಡಬೇಕಾದ ವರ್ಷ. ಇಡೀ ವಿಶ್ವವೇ ಸ್ಥಗಿತಗೊಳಿಸಲ್ಪಟ್ಟು ಮಹಾಮಾರಿ ಕೋವಿಡ್ ಜನರಿಗೆ ಊಹಿಸಲೂ ಅಸಾಧ್ಯವಾದಂತಹ ಅನುಭವಗಳನ್ನು ನೀಡಿದೆ. 3181 ರೋಟರಿ ಜಿಲ್ಲೆಯಲ್ಲಿ ಕೋವಿಡ್ 19ರ ನಂತರ ಪ್ರಥಮವಾಗಿ ಸಾರ್ವಜನಿಕವಾಗಿ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ನಡೆಸುವ ಜವಾಬ್ದಾರಿಯನ್ನು ಬಹಳ ಅಚ್ಚುಕಟ್ಟಾಗಿ, ಸರಕಾರದ ನಿಯಮವನ್ನು ಪಾಲಿಸಿಕೊಂಡು ಪುತ್ತೂರು ರೋಟರಿ ಕ್ಲಬ್ ಆಯೋಜಿಸಿರುವುದು ಬಹಳ ಸಂತೋಷದ ವಿಷಯವಾಗಿದೆ ಎಂದ ಅವರು ರೋಟರಿ ಸಂಸ್ಥೆಯು ಸಮಾಜದ ಬೇಕು-ಬೇಡಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡುತ್ತಿದ್ದು, ಸದಸ್ಯರು ಬಹಳ ಉತ್ಸಾಹದಿಂದ ಕ್ಲಬ್‌ನ ಚಟುವಟಿಕೆಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸಬೇಕು ಎಂದು ಅವರು ಹೇಳಿದರು.

ವಲಯ ಐದರ ಅಸಿಸ್ಟೆಂಟ್ ಗವರ್ನರ್‌ಗಳಾದ ಸಚ್ಚಿದಾನಂದ, ರತ್ನಾಕರ್ ರೈ ಕೆದಂಬಾಡಿಗುತ್ತುರವರು ಸಂದರ್ಭೋಚಿತವಾಗಿ ಮಾತನಾಡಿ, ಪುತ್ತೂರು ರೋಟರಿ ಕ್ಲಬ್ ಈ ಕಲಾ ಸಂಭ್ರಮವನ್ನು ಬಹಳ ಅಚ್ಚುಕಟ್ಟಾಗಿ ಆಯೋಜಿಸಿರುವುದು ಶ್ಲಾಘನೀಯವಾಗಿದೆ ಎಂದು ಅಭಿಪ್ರಾಯಪಟ್ಟರು. ರೋಟರಿ ಕ್ಲಬ್ ಪುತ್ತೂರು ಇದರ ಸಾಂಸ್ಕೃತಿಕ ಸಭಾಪತಿ ಪ್ರೇಮಾನಂದ ಬಿ, ಕಾರ್ಯದರ್ಶಿ ಪ್ರೊ|ದತ್ತಾತ್ರೇಯ ರಾವ್‌ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು|ಪ್ರಾರ್ಥನಾ ಪ್ರಾರ್ಥಿಸಿದರು. ಕ್ಲಬ್ ಅಧ್ಯಕ್ಷ ಪ್ರೊ|ಝೇವಿಯರ್ ಡಿ’ಸೋಜ ಸ್ವಾಗತಿಸಿ, ಸಾಂಸ್ಕೃತಿಕ ಕಾರ್ಯಕ್ರಮದ ಸಂಯೋಜಕರಾದ ಜೈರಾಜ್ ಭಂಡಾರಿ ವಂದಿಸಿದರು.

ರೋಟರಿ ಎಲೈಟ್ ಸಮಗ್ರ, ರೋಟರಿ ಪುತ್ತೂರು ರನ್ನರ್ಸ್..
-ಡ್ಯಾನ್ಸ್ ವಿಭಾಗ, ೧೪ ವರ್ಷ ಕೆಳಗಿನವರಿಗೆ
ಪ್ರಥಮ: ರೋಟರಿ ಯುವ, ದ್ವಿತೀಯ: ರೋಟರಿ ಪುತ್ತೂರು
-ಡ್ಯಾನ್ಸ್ ವಿಭಾಗ, ೧೪ ವರ್ಷ ಮೇಲ್ಪಟ್ಟವರಿಗೆ
ಪ್ರಥಮ: ರೋಟರಿ ಪುತ್ತೂರು, ದ್ವಿತೀಯ: ರೋಟರಿ ಎಲೈಟ್
-ಮೈಮ್ ಶೋ
ಪ್ರಥಮ: ರೋಟರಿ ಎಲೈಟ್, ದ್ವಿತೀಯ: ರೋಟರಿ ಸೆಂಟ್ರಲ್
-ಸಮೂಹ ನೃತ್ಯ
ಪ್ರಥಮ: ರೋಟರಿ ಎಲೈಟ್, ದ್ವಿತೀಯ: ರೋಟರಿ ಸೆಂಟ್ರಲ್
-ಪ್ರಹಸನ
ಪ್ರಥಮ: ರೋಟರಿ ಎಲೈಟ್, ದ್ವಿತೀಯ: ರೋಟರಿ ಪುತ್ತೂರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.