HomePage_Banner
HomePage_Banner
HomePage_Banner
HomePage_Banner

ಪರ್ಪುಂಜ: ನವೀಕೃತ ಜುಮಾ ಮಸೀದಿ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನವೀಕೃತಗೊಂಡಿರುವ ಪರ್ಪುಂಜ ಬದ್ರಿಯಾ ಜುಮಾ ಮಸೀದಿಯ ಉದ್ಘಾಟನೆ ಹಾಗೂ ವಕಫ್ ಕಾರ್ಯಕ್ರಮ ನ.೧೯ ರಂದು ನಡೆಯಿತು.ಎನ್ ಪಿ ಎಂ ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ ಮಸೀದಿಯನ್ನು ಉದ್ಘಾಟಿಸಿ ವಕಫ್ ನೆರವೇರಿಸಿದರು.ಜಮಾತ್ ಕಮಿಟಿ ಅಧ್ಯಕ್ಷ ಶರೀಫ್ ಹಾಜಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಅರಿಯಡ್ಕ ಜಮಾತ್ ಕಮಿಟಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಕುಂಬ್ರ ರೇಂಜ್ ಮದ್ರಸ ಮೆನೆಜ್‌ಮೆಂಟ್ ಅಧ್ಯಕ್ಷ ಪಿ ಎ ಅಬ್ದುಲ್ ಖಾದರ್ ಹಾಜಿ ಹಿರಾ, ಮೈದಾನಿಮೂಲೆ ಜಮಾತ್ ಕಮಿಟಿ ಅಧ್ಯಕ್ಷ ಯೂಸುಫ್ ಹಾಜಿ ಕೈಕಾರ, ಮಹಮ್ಮದ್ ಅಶ್ರಫ್ ತಂಙಳ್ ಹೈದ್ರೋಸ್, ಸಂಟ್ಯಾರ್ ಮಸೀದಿ ಖತೀಬ್ ಅಶ್ರಫ್ ದಾರಿಮಿ, ಬದ್ರಿಯಾ ನಗರ ಮಸೀದಿ ಖತೀಬ್ ಅಬ್ದುಲ್ ಹಕೀಂ ಫೈಝಿ, ಮೈದಾನಿಮೂಲೆ ಮಸೀದಿ ಖತೀಬ್ ಅಬ್ದುಲ್ ರಝಾಕ್ ಖಾಸಿಮಿ,ಪಣೆಮಜಲು ಮಸೀದಿ ಖತೀಬ್ ಅಬ್ಬಾಸ್ ಮದನಿ, ಕುಂಬ್ರ ರೇಂಜ್ ಅಧ್ಯಕ್ಷ ಸಂಶುದ್ದೀನ್ ದಾರಿಮಿ, ರೇಂಜ್ ಕೋಶಾಧಿಕಾರಿ ಶುಕೂರ್ ದಾರಿಮಿ, ಪಪುಂಜ ಇಝ್ಝತ್ತುಲ್ ಇಸ್ಲಾಂ ಯಂಗ್ ಮೆನ್ಸ್ ಅಧ್ಯಕ್ಷ ಅಬ್ದುಲ್ ನವಾಝ್ ಸುಪ್ರಿಂ, ಪರ್ಪುಂಜ ಮಸೀದಿ ಮುಅಲ್ಲಿಂ ಅಬ್ದುಲ್ ರಹಿಮಾನ್ ಝುಹುರಿ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯದರ್ಶಿ ನಝೀರ್ ಪರ್ಪುಂಜ ಸ್ವಾಗತಿಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.