ಪುತ್ತೂರು: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಾವು ನನ್ಯದಲ್ಲಿ ಕಾರೊಂದು ರಸ್ತೆ ಬೇಲಿಗೆ ಢಿಕ್ಕಿ ಹೊಡೆದು ಕಾರು ಪಲ್ಟಿಯಾಗಿ ಕಾರಿನಲ್ಲಿದ್ದ ಮೂವರು ಗಾಯಗೊಂಡ ಘಟನೆ ನ.23ರಂದು ಸಂಜೆ ವರದಿಯಾಗಿದೆ.
ಪುತ್ತೂರು ಕಡೆಯಿಂದ ಸುಳ್ಯ ಕಡೆಗೆ ಹೋಗುತ್ತಿದ್ದ ಕಾರು(ಕೆಎ18Z 8283) ನನ್ಯ ಸಮೀಪದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಲ್ಲಿನ ಬೇಲಿಗೆ ಢಿಕ್ಕಿ ಹೊಡೆದು ಕಾರು ಪಲ್ಟಿಯಾಗಿ ತಿರುಗಿ ನಿಂತಿದೆ. ಢಿಕ್ಕಿಯ ರಭಸಕ್ಕೆ ಕಾರು ಚಾಲಕ ಮತ್ತು ಕಾರಿನಲ್ಲಿದ್ದ ಈರ್ವರು ಗಾಯಗೊಂಡಿದ್ದಾರೆ.
ಎರಡು ದಿನದ ಹಿಂದೆ ಮದುವೆಯಾಗಿತ್ತು:
ಕಾರಿನಲ್ಲಿದ್ದ ಕಾರು ಚಾಲಕನಿಗೆ ಎರಡು ದಿನದ ಹಿಂದೆ ಮದುವೆಯಾಗಿತ್ತು. ಕಾರಿನಲ್ಲಿ ದಂಪತಿಗಳು ಮತ್ತು ಕಾರು ಚಾಲಕನ ತಂಗಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.