ಪುತ್ತೂರು: ಬನ್ನೂರಿನ ಸೇಡಿಯಾಪಿನಲ್ಲಿ ಮೆಡಿಕಲ್ ಕಾಲೇಜಿಗೆ ಮೀಸಲಿಟ್ಟ ಜಾಗದಲ್ಲಿ ನೂತನವಾಗಿ ಸೀ ಫುಡ್ ಪಾರ್ಕ್ ಯೋಜನೆ ಕಾರ್ಯಗತಗೊಳ್ಳುವುದಕ್ಕೆ ಪುತ್ತೂರು ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರ ನೇತೃತ್ವದಲ್ಲಿ ಇಲ್ಲಿನ ರೋಟರಿ ಮನೀಷಾ ಸಭಾಂಗಣದಲ್ಲಿ ನ.23ರಂದು ನಡೆದ ಸಮಾನ ಮನಸ್ಕರ ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಮೆಡಿಕಲ್ ಕಾಲೇಜಿನ ಸ್ಥಳವನ್ನು ಉಳಿಸಲು ಮೊದಲು ಮನವಿ ಸಲ್ಲಿಸುವುದು, ಅದಕ್ಕೆ ಸ್ಪಂಧನೆ ಸಿಗದಿದ್ದರೆ ಧರಣಿ, ಅದಕ್ಕೂ ಸ್ಪಂಧನೆ ಸಿಗದಿದ್ದರೆ ಹೋರಾಟ ವೇಗವನ್ನು ಹೆಚ್ಚಿಸುವ ಕುರಿತು ನಿರ್ಣಯ ಕೈಗೊಳ್ಳಲಾಗಿದೆ.
ಸಮಾನಮನಸ್ಕರ ಹೋರಾಟದ ಸಮಿತಿಯಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರು ಅಧ್ಯಕ್ಷರಾಗಿ, ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಮತ್ತು ಸೇಡಿಯಾಪು ವಿಶ್ವಪ್ರಸಾದ್ ಅವರು ಪ್ರಧಾನಕಾರ್ಯದರ್ಶಿಯಾಗಿ ಆಯ್ಕೆಗೊಂಡಿದ್ದು, ಮುಂದೆ ಹೋರಾಟದ ತೀವ್ರತೆಯನ್ನು ಕಾಣಲಿದ ಎಂದು ಸಭೆಯಲ್ಲಿ ಚರ್ಚಿಸಲಾಯಿತು. ಜಿ.ಪಂ ಸದಸ್ಯ ಎಮ್.ಎಸ್ ಮಹಮ್ಮದ್, ನ್ಯಾಯವಾದಿ ಸಾಯಿರ ಜುಬೇರ್, ಬನ್ನೂರು ಗ್ರಾ.ಪಂ ಮಾಜಿ ಅಧ್ಯಕ್ಷೆ ವಿಶಾಲಾಕ್ಷಿ ಬನ್ನೂರು, ನಗರಸಭೆ ಮಾಜಿ ಅಧ್ಯಕ್ಷೆ ವಾಣಿಶ್ರೀಧರ್, ನ್ಯಾಯವಾದಿ ಹರಿಣಾಕ್ಷಿ ಜೆ.ಶೆಟ್ಟಿ, ಎಂ.ಬಿ.ವಿಶ್ವನಾಥ ರೈ, ರೈತ ಸಂಘದ ರೂಪೇಶ್ ಅಲಿಮಾರ್, ಡಾ. ಸುರೇಶ್ ಪುತ್ತೂರಾಯ, ಬನ್ನೂರು ಗ್ರಾ.ಪಂ ಸದಸ್ಯ ಪಂಜಿಗುಡ್ಡೆ ಈಶ್ವರ ಭಟ್, ಪ್ರಸಾದ್ ಕೌಶಲ್ ಶೆಟ್ಟಿ, ಅಶೋಕ್ ಎಡಮಲೆ, ರೋಟರಿ ಯುವದ ಭರತ್ ಪೈ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದು ತಮ್ಮ ಅಭಿಪ್ರಾಯ ವ್ಯಕ್ತಪಿಸಿದರು.