HomePage_Banner
HomePage_Banner
HomePage_Banner
HomePage_Banner

ರಾಜೀವ್ ಗಾಂಧಿ ಪಂಚಾಯತ್ ಸಂಘಟನೆಯ ವತಿಯಿಂದ ಪುತ್ತೂರಿನಲ್ಲಿ ಗ್ರಾ.ಪಂ. ಚುಣಾವಣೆ, ಬಿ.ಎಲ್.ಎ ತರಬೇತಿ ಕಾರ್ಯಗಾರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಪುತ್ತೂರು ವಿಧಾನ ಸಭಾ ಕ್ಷೇತ್ರದಿಂದ ವತಿಯಿಂದ ಪುತ್ತೂರು ಬ್ಲಾಕ್ ಕಾಂಗ್ರೆಸ್‌ನ ಸಹಯೋಗದಿಂದ ಗ್ರಾ.ಪಂ. ಚುಣಾವಣೆ ಬಿ.ಎಲ್.ಎ ತರಬೇತಿ ಕಾರ್ಯಗಾರವು ನ.೨೩ರಂದು ಪುತ್ತೂರು ಎಪಿಎಂಸಿ ರಸ್ತೆಯಲ್ಲಿರುವ ಕ್ರಿಸ್ತೋಫರ್ ಕಾಂಪ್ಲೆಕ್ಸ್‌ನಲ್ಲಿ ನಡೆಯಿತು. ಮುಂದಿನ ತಿಂಗಳಲ್ಲಿ ನಡೆಯಲಿರುವ ಗ್ರಾ.ಪಂ. ಚುಣಾವಣೆ ಮತ್ತು ಮತದಾರರ ಪಟ್ಟಿಯ ಪರಿಷ್ಕರಣೆ ವಿಷಯದಲ್ಲಿ ತರಬೇತಿ ನೀಡಲಾಯಿತು. ಕೆ.ಪಿ.ಸಿ.ಸಿ ಉಸ್ತುವಾರಿ ಮತ್ತು ನ್ಯಾಯವಾದಿ ವೆಂಕಪ್ಪ ಗೌಡ ಸುಳ್ಯ, ಜಿಲ್ಲಾ ಸಂಪನ್ಮೂಲ ವ್ಯಕ್ತಿ ದುರ್ಗಾಪ್ರಸಾದ್ ರವರು ತರಬೇತಿ ನಡೆಸಿಕೊಟ್ಟರು.

ಈ ತರಬೇತಿಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ 60ಕ್ಕೂ ಮಿಕ್ಕಿ ಬಿಎಲ್‌ಎ ಗಳು ಭಾಗವಹಿಸಿದ್ದರು, ಇದಕ್ಕೂ ಮೊದಲು ನಡೆದ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ನೆರೆವೇರಿದ ಪುತ್ತೂರು ಮಾಜಿ ಶಾಸಕಿ ಶಂಕುತಳಾ ಶೆಟ್ಟಿ ಮಾತನಾಡಿ, ಈ ತರಬೇತಿಯಲ್ಲಿ ಫಾಲ್ಗೋಂಡ ಬಿ.ಎಲ್.ಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರೂ ಗ್ರಾ.ಪಂ. ತೆರಳಿ ಅದನ್ನು ಅನುಷ್ಟಾನಗೊಳಿಸಿದ್ದಲ್ಲಿ ಮುಂದೇ ನಡೆಯಲಿರುವ ಗ್ರಾ.ಪಂ. ಚುಣಾವಣೆಯಲ್ಲಿ ಹೆಚ್ಚಿನ ಪಂಚಾಯತ್‌ಗಲ್ಲಿ ಕಾಂಗ್ರೆಸ್ ಬೆಂಬಲಿತರು ಅಧಿಕಾರಕ್ಕೆ ಏರುವಂತಾಗಲಿದೆ. ಅದಕ್ಕಾಗಿ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಇಂತಹ ಕಾರ್ಯಕ್ರಮ ಎಲ್ಲಾ ಕಡೆ ನಡೆಯಬೇಕೆಂದು ಎಂದರು.

ಕೊಡಗು ಜಿಲ್ಲಾ ಮಾಜಿ ಕಾಂಗ್ರೆಸ್ ಅಧ್ಯಕ್ಷ, ಕೆಪಿಸಿಸಿ ಉಸ್ತುವಾರಿಗಳು ಆದ ಪಿಪಿ ರಮೇಶ್ ರವರು ಮಾತನಾಡಿ ರಾಜೀವ ಗಾಂಧಿ ಪಂಚಾಯತ್ ರಾಜ್ ವತಿಯಿಂದ ಉತ್ತಮ ಕಾರ್ಯಕ್ರಮ ಆಯೋಜಿಸಿದ್ದು ಈ ಕಾರ್ಯಕ್ರಮದ ಮೂಲಕ ಗ್ರಾಮೀಣ ಮಟ್ಟದಲ್ಲಿ ಕಾಂಗ್ರೆಸ್ ಪುಟಿದೇಳಲು ಸಹಕಾರಿಯಾಗಲಿದೆ ಎಂದು ಅವರು ಹೇಳಿದರು. ಪೂರ್ಣ ತಯಾರಿ ಇಲ್ಲದಿದ್ದರೆ ಪಂಚಾಯತ್ ಮಟ್ಟದಲ್ಲಿ ಗೆಲುವು ಸಾಧಿಸಲು ಸಾಧ್ಯವಿಲ್ಲ ಇಂತಹ ಕಾರ್ಯಕ್ರಮದಲ್ಲಿ ಎಲ್ಲಾರೂ ಪಾಲ್ಗೋಂಡು ಕೊನೆ ತನಕ ಆಲಿಸಿ, ಕಾರ್ಯಕರ್ತರು ಕಾರ್ಯಪ್ರವೃತ್ತ ಆಗಬೇಕು ಎಂದು ಅವರು ಹೇಳಿದರು. ಈ ರೀತಿ ಗ್ರಾಮೀಭಿವೃದ್ಧಿಯಲ್ಲಿ ತೊಡಗಿಸಿಕೊಂಡಾಗ ಮುಂದೆ ನಡೆಯುವ ಚುಣಾವಣೆಗಳಲ್ಲಿ ಗೆಲುವು ಸಾಧಿಸಲು ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.

ಜಿ.ಪಂ. ಸದಸ್ಯ ಎಂ.ಎಸ್. ಮುಹಮ್ಮದ್ ರವರು ಮಾತನಾಡಿ ಶೀಘ್ರ ನಡೆಯುವ ಪಂಚಾಯತ್ ಚುನಾವಣೆಯಲ್ಲಿ ಈಗೀಂದ ಈಗಾಲೇ ಕಾರ್ಯ ಪ್ರವೃತ್ತರಾಗಬೇಕು ಎಂದು ಅವರು, ನಿಸ್ವಾರ್ಥ ಮನೋಭಾವದ ಮೂಲಕ ಇಚ್ಛಾ ಶಕ್ತಿಯಿಂದ ಯಾವುದೇ ಫಲಾಪೇಕ್ಷೆ ಇಲ್ಲದೇ ತಳಮಟ್ಟದ ಕಾರ್ಯಕರ್ತರಿಗೆ ಸಿಗುವ ಅವಕಾಶವಾಗಿದೆ ಎಂದು ಅವರು ಹೇಳಿದರು. ಪಂಚಾಯತ್ ಮಟ್ಟದಲ್ಲಿ ಜನರ ಸೇವೆ ಮಾಡಬೇಕಾದರೆ ಅಥವಾ ಆಭಿವೃದ್ಧಿ ಕೆಲಸಗಳು ಆಗಬೇಕಾದರೆ ಆ ಪಂಚಾಯತ್ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಅನಿವಾರ್ಯತೆ ಆದುದರಿಂದ ನಾವೂ ಶಕ್ತಿ ಮೀರಿ ಡುಡಿದು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದರು.

ಇಂದು ಮಹಿಳೆಯರಿಗೆ 50% ಮೀಸಲಾತಿ, ಪರಿಶಿಷ್ಟ ಜಾತಿ, ಪಂಗಡಕ್ಕೆ ಅವಕಾಶ ಸಿಕ್ಕಿದ್ದರೆ ಅದು ಕಾಂಗ್ರೆಸ್ ಕೊಡುಗೆ ಹಾಗೂ ರಾಜೀವ್ ಗಾಂಧಿಯವರ ಕೊಡುಗೆ ಎಂದರು

ಜಿಲ್ಲಾ ರಾಜೀವ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ಸುಭೋಧಯ ಆಳ್ವ ರವರು ಮಾತನಾಡಿ ಇಂತಹ ತರಬೇತಿ ಶಿಬಿರಗಳು ಅಲ್ಲೆಲ್ಲಿ ನಡೆದಾಗ ಮಾತ್ರ ಕಾರ್ಯಕರ್ತರಿಗೆ ಹುರುಪು ಉಂಟಾಗುತ್ತದೆ ಕಾಂಗ್ರೆಸ್‌ನಲ್ಲಿ ಕೆಲಸ ಮಾಡಲು ಸಹಕಾರಿಯಾಗಲಿದೆ ಎಂದರು. ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿಗಳಾದ ಗಿರೀಶ್ ಶೆಟ್ಟಿ, ಕೆಪಿಸಿಸಿ ಸದಸ್ಯ ಎಂ.ಬಿ ವಿಶ್ವನಾಥ ರೈ ಉಪಸ್ಥಿತರಿದ್ದರು.

ಸ್ವಾಗತಿಸಿ ಮಾತನಾಡಿದ ಪುತ್ತೂರು ಬ್ಲಾಕ್ ಕಾಂಗ್ರೆಸ್‌ನ ಅಧ್ಯಕ್ಷ ಮುಹಮ್ಮದ್ ಬಡಗನ್ನುರು ಮಾತನಾಡಿ ಪಂಚಾಯತ್‌ನ ವ್ಯವರ್ಸತೆಗೆ ಹೊಸ ಆಯಾಮ ನೀಡಿ ಜನರಿಗೆ ಪ್ರಯೋಜನಕಾರಿಯಾಗಿ ಕಾನೂನು ಜಾರಿಗೊಳಿಸಿದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಕೊಡುಗೆ ಅಮೋಘವಾಗಿದೆ. ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಯಕರ್ತರಿಗೆ ಹುಮನಸ್ಸು ಹೆಚ್ಚಾಗುತ್ತಿದೆ ಎಂದರು.

ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುರಳೀಧರ ರೈ ಮಠಂದಬೆಟ್ಟು ವಂದಿಸಿದರು, ರಾಜೀವ್ ಗಾಂಧಿ ಪಂಚಾಯತ್ ಸಂಘಟನೆ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸಂತೋಷ್ ಭಂಡಾರಿ ಚಿನ್ಮತ್ತಾರು, ಪುತ್ತೂರು ಸಂಘಟನೆಯ ಅಧ್ಯಕ್ಷ ಸನತ್ ರೈ ಕುರಿಯ, ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ಪೂಜಾರಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಯಾಕೂಬ್ ಹಾಜಿ ದರ್ಬೆ, ಎಪಿಎಂಸಿ ನಿರ್ದೇಶಕ ವಿ.ಎಚ್.ಎ ಶಕೂರ್ ಹಾಜಿ, ಪುತ್ತೂರು ಸೇವಾದಳದ ಅಧ್ಯಕ್ಷ ಜೋಕಿಂ ಡಿ’ಸೋಜಾ, ನಗರ ಕಾಂಗ್ರೆಸ್ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿಶಲಾಕ್ಷಿ ಬನ್ನೂರು, ನಗರಸಭಾ ಸದಸ್ಯ ಯೂಸೂಫ್ ಡ್ರೀಮ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ, ಯೂಸೂಫ್ ಒಳಮೊಗ್ರು, ಬೊಳೋಡಿ ಚಂದ್ರಹಾಸ ರೈ ಮೊದಲಾದವರು ಉಪಸ್ಥಿತರಿದ್ದರು.

ಸನ್ಮಾನ:
ಯಕ್ಷಗಾನದಲ್ಲಿ ಅದ್ವೀತಿಯ ಸಾಧನೆಗೈದ ಕೆ.ಎಚ್. ದಾಸಪ್ಪ ರೈ ಹಾಗೂ ಹಿರಿಯ ಕಾಂಗ್ರಸಿಗ, ಪುತ್ತೂರು ಕಾಂಗ್ರೆಸ್ ಖಂಜಾಜಿ ವಲೇರಿಯೆಂಡ್ ಡಯಾಸ್ ರವರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.