ಪುತ್ತೂರು: ಪುತ್ತೂರು ಸೇರಿದಂತೆ ದೇಶದ ವಿವಿಧ ಕಡೆಗಳಲ್ಲಿ ಹೊಸ ಹೊಸ ಅವಿಷ್ಕಾರದೊಂದಿಗೆ ಯೋಜನೆಗಳನ್ನು ರೂಪಿಸಿ ತನ್ನದೇ ಆದ ವಿಶಿಷ್ಟ ಮಾಸ್ಟರ್ ಪ್ಲಾನ್ ರೂಪಿತರಾದ ಮಾಸ್ಟರ್ ಪ್ಲಾನರಿಯ ಮಾಲಕ ಎಸ್.ಕೆ.ಆನಂದ್ ಅವರ ಸಾಧನೆಯನ್ನು ಅವರ ಜನ್ಮ ದಿನದಂದು ಪುಸ್ತಕ ರೂಪದಲ್ಲಿ ಹೊರ ತರುವ ಕುರಿತು ನ.೨೩ರಂದು ಮೊದಲು ಹಂತದ ಪೂರ್ವ ಭಾವಿ ಸಭೆಯು ನೆಹರುನಗರ ಮಾಸ್ಟರ್ ಪ್ಲಾನರಿಯಲ್ಲಿ ನಡೆಯಿತು.
ಸಮಾನ ಮನಸ್ಕರು ಸೇರಿಕೊಂಡು ನಡೆಸಿದ ಸಭೆಯಲ್ಲಿ ಎಸ್.ಕೆ.ಆನಂದ್ ಅವರಿಗೆ 70ರ ಸಂವತ್ಸರ ತುಂಬವ ನಿಟ್ಟಿನಲ್ಲಿ ಮುಂದಿನ ಡಿಸೆಂಬರ್ ತಿಂಗಳಲ್ಲಿ ಸಾಧನಾ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ನಿರ್ಣಯ ಕೈಗೊಳ್ಳಲಾಯಿತು. ಸಭೆಯಲ್ಲಿ ಸಾಹಿತಿ ಶಿಕ್ಷಣ ತಜ್ಞ ಡಾ. ಚಂದ್ರಶೇಖರ್ ದಾಂಬ್ಲೆ, ರಾಜೇಶ್ ಪವರ್ ಪ್ರೆಸ್ ಮಾಲಕ ರಘುನಾಥ್ ರಾವ್, ರಾಮ್ ಕುಮಾರ್, ನಾರಾಯಣ ಭಟ್ ಹರೆಕೆರೆ, ವೆಂಕಟ ಭಟ್ ಹರೆಕೆರೆ, ರಾಮ್ ಭಟ್ ಬಂಗಾರಡ್ಕ, ಪಂಜಿಗುಡ್ಡೆ ಈಶ್ವರ ಭಟ್, ವಸಂತ್ ಭಟ್, ಅಶ್ವಿನಿ ಕೃಷ್ಣಮೂರ್ತಿ, ಎಮ್ ಏನ್ ಪ್ರಭಾಕರ್, ಚಂದ್ರೆಶೇಖರ್ ಭಟ್, ನವೀನ್ ನಾಯಕ್, ಎಸ್.ಕೆ.ಆನಂದ್ ಅವರ ಪುತ್ರರಾದ ಅಕ್ಷಯ್ ಭಟ್ ಎಸ್ ಕೆ , ಅರ್ಜುನ್ ಭಟ್ ಎಸ್ ಕೆ, ಆಕಾಶ್ ಎಸ್ ಕೆ ಮತ್ತು ಅವರ ಸಂಬಂಧಿಕ ಕಾಡು ನೆಹರು ನಗರ ರಾಘವೇಂದ್ರ ಭಟ್ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮದ ರೂಪುರೇಶೆಯ ಕುರಿತು ಚರ್ಚಿಸಿದರು.