HomePage_Banner
HomePage_Banner
HomePage_Banner
HomePage_Banner

ಪದ್ದೋನ್ನತಿಹೊಂದಿ ವರ್ಗಾವಣೆಗೊಂಡ ಸಹಶಿಕ್ಷಕರಿಗೆ ಸನ್ಮಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ನಿರಂತರ ಅಧ್ಯಾಯನದಿಂದ ವೃತ್ತಿ ಬದುಕು ಸಾರ್ಥಕತೆ – ಸಂಜೀವ ಮಠಂದೂರು


ಪುತ್ತೂರು: ಅಧ್ಯಾಪಕ ವೃತ್ತಿ ಪವಿತ್ರವೆಂಬ ನೆಲೆಯಲ್ಲಿ ಕೆಲಸ ಮಾಡಿದಾಗ ಸಮಾಜ ಗೌರವಿಸುತ್ತದೆ. ನಿರಂತರ ಅಧ್ಯಯನಶೀಲದಿಂದ ವೃತ್ತಿ ಬದುಕು ಸಾರ್ಥಕತೆಯನ್ನು ಕಾಣುತ್ತದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಮುಖ್ಯೋಪಾಧ್ಯಾಯರಾಗಿ ಪದ್ದೋನ್ನತಿ ಹೊಂದಿ ವರ್ಗಾವಣೆಗೊಂಡ 9 ಮಂದಿ ಶಿಕ್ಷಕರಿಗೆ ಪುತ್ತೂರು ಕೊಂಬೆಟ್ಟು ಸ.ಪ್ರೌ.ಶಾಲೆಯ ಅವರಣದಲ್ಲಿರುವ ಶಿವಸದನದಲ್ಲಿ ನ.೨೩ರಂದು ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾಲ ಸಮಯ ಸಂದರ್ಭ ನೋಡಿಕೊಂಡು ವೃತ್ತಿ ಬದುಕಿನಲ್ಲಿ ಅಧ್ಯಾಪಕರು ಅಪ್‌ಡೇಟ್ ಅಗಬೇಕು ಎಂದು ಅವರು ಹೇಳಿದರು.
ಸನ್ಮಾನ:
ಪದ್ದೋನ್ನತಿ ಹೊಂದಿದವರಿಗೆ ಶಾಸಕ ಸಂಜೀವ ಮಠಂದೂರು ಸನ್ಮಾನ ಕಾರ್ಯಕ್ರಮ ನೆರವೇರಿಸಿದರು. ಪಾಪೆಮಜಲು ಶಾಲೆಯಿಂದ ಕೊಂಬೆಟ್ಟುಗೆ ವರ್ಗಾವಣೆಗೊಂಡ ವಸಂತ ಮೂಲ್ಯ, ಪಾಪೆಮಜಲಿನಿಂದ ಕಡೆಶಿವಾಲಯಕ್ಕೆ ವರ್ಗಾವಣೆಗೊಂಡ ಲೋಕಾನಂದ್, ಪಾಪೆಮಜಲಿನಿಂದ ನೆಟ್ಟಣಿಗೆಮುಡ್ನೂರಿಗೆ ವರ್ಗಾವಣೆಗೊಂಡ ಪ್ರೇಮ್ ಕುಮರ್, ಪಾಪೆಮಜಲುನಿಂದ ಸುಳ್ಯಕ್ಕೆ ವರ್ಗಾವಣೆಗೊಂಡ ಪ್ರಕಾಶ್ ಮೂಡಿತ್ತಾಯ, ಕಡಬದಿಂದ ಪಡುಬೆಟ್ಟಿಗೆ ವರ್ಗಾವಣೆಗೊಂಡ ಕಮಲ, ಇರ್ದೆ ಉಪ್ಪಳಿಗೆಯಿಂದ ಬೊಳಂತಿಮುಗೇರುಗೆ ವರ್ಗಾವಣೆಗೊಂಡ ಸಂಧ್ಯಾರಾಣಿ, ಡಾ.ಕೆ.ಶಿವರಾಮ ಕಾರಂತರ ಶಾಲೆಯಿಂದ ಬಳಿಯೂರಿಗೆ ವರ್ಗಾವಣೆಗೊಂಡ ಜ್ಯೋತಿ ಕುಮಾರಿ, ಡಾ.ಕೆ.ಶಿವರಾಮ ಕಾರಂತರ ಶಾಲೆಗೆ ಮುಖ್ಯೋಪಾದ್ಯಾಯರಾದ ಜಲಜಾಕ್ಷಿ, ಪಂಜ ಶಾಲೆಯಿಂದ ದೋಲ್ಪಾಡಿಗೆ ವರ್ಗಾವಣೆಗೊಂಡ ಶಶಿಧರ್ ಪಿ ರವರನ್ನು ಸನ್ಮಾನಿಸಲಾಯಿತು. ಇತ್ತೀಚೆಗೆ ಜಿಲ್ಲಾ ಪ್ರಶಸ್ತಿ ಪುರಸ್ಕ್ರತ ವೆಂಕಟೇಶ್ ದಾಂಬ್ಲೆ ಅವರನ್ನು ಗೌರವಿಸಲಾಯಿತು. ತಾ.ಪಂ ಅಧ್ಯಕ್ಷ ರಾಧಾಕ್ರಷ್ಣ ಬೋರ್ಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕ್ರಷ್ಣ ಆಳ್ವ, ಎಸ್ ಡಿ ಎಮ್ ಸಿ ಕಾರ್ಯಾಧ್ಯಕ್ಷ ನಗರಸಭಾ ಸದಸ್ಯ ಪಿ.ಜಿ ಜಗನ್ನಿವಾಸ ರಾವ್, ಮುಖ್ಯೋಪಾಧ್ಯಯ ಸಂಘದ ಅಧ್ಯಕ್ಷ ದಿವಾಕರ್ ಆಚಾರ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಲೋಕೇಶ್, ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ ಅವರು ಶುಭ ಹಾರೈಸಿದರು. ಕೊಂಬೆಟ್ಡು ಸರಕಾರಿ ಪ್ರೌಢಶಾಲೆಯ ಉಪಪ್ರಾಂಶುಪಾಲ ವಸಂತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸನ್ಮಾನಿತರ ಪರವಾಗಿ ಪ್ರಕಾಶ್ ಮೂಡಿತ್ತಾಯ ಮಾತನಾಡಿದರು. ಗುಡ್ಡಪ್ಪ ಬಲ್ಯ ತರಬೇತಿ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜೊತೆ ಕಾರ್ಯದರ್ಶಿ ಅನ್ನಪೂರ್ಣ ಅವರು ಪ್ರಾರ್ಥಿಸಿದರು. ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹಶಿಕ್ಷಕರ ಸಂಘದ ಪುತ್ತೂರು ತಾಲೂಕು ಘಟಕದ ಅಧ್ತಕ್ಷ ಅಬ್ರಹಂ ಅವರು ಸ್ವಾಗತಿಸಿದರು. ವಿನೋದ್ ಕಾರ್ಯಕ್ರಮ ನಿರೂಪಿಸಿದರು. ಸತ್ಯಶಂಕರ್ ವಂದಿಸಿದರು.

ಬೆಳಿಗ್ಗೆ ತರಬೇತಿ ಶಿಬಿರ:
ಬೆಳಿಗ್ಗೆ ದ.ಕ.ಜಿ.ಪಂ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ.ರಾ.ಪ್ರೌಢಶಾಲಾ ಸಹಶಿಕ್ಷಕರ ಸಂಘ ಬೆಂಗಳೂರು ಮತ್ತು ಪುತ್ತೂರು ತಾಲೂಕು ಘಟಕದ ಸಹಯೋಗದೊಂದಿಗೆ ಪ್ರೌಢಶಾಲಾ ಶಿಕ್ಷಕರಿಗೆ ಎನ್ ಟಿ ಎಸ್ ಇ ಮತ್ತು ಎನ್ ಎಮ್ ಎಮ್ ಎಸ್ ತರಬೇತಿ ಶಿಬಿರ ನಡೆಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.