HomePage_Banner
HomePage_Banner
HomePage_Banner
HomePage_Banner

ಐತ್ತೂರು ಕಲ್ಲಾಜೆ ಬಜಕೆರೆ ಶ್ರೀರಾಮ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ರಚನಾ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಐತ್ತೂರು ಕಲ್ಲಾಜೆ ಬಜಕೆರೆ ಶ್ರೀರಾಮ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ರಚನಾ ಸಭೆ

    ಕಡಬ: ಐತ್ತೂರು ಗ್ರಾಮದ ಕಲ್ಲಾಜೆ ಬಜಕೆರೆಯಲ್ಲಿರುವ ಶ್ರೀರಾಮ ದೇವಸ್ಥಾನದ ಜೀಣೋದ್ದಾರ ಸಮಿತಿ ರಚನಾ ಸಭೆಯು ನ.22ರಂದು ದೇವಸ್ಥಾನದ ಆವರಣದಲ್ಲಿ ನಡೆಯಿತು.
    ಸಮಿತಿ ರಚನಾ ಸಭೆಯ ಅಧ್ಯಕ್ಷತೆಯನ್ನು ಆಡಳಿತ ಸಮಿತಿಯ ಅಧ್ಯಕ್ಷ ರಾಮನ್ ಪಿ.ಎಸ್.ಅವರು ವಹಿಸಿ ಮಾತನಾಡಿ, ಶ್ರೀರಾಮನ ದೇವಸ್ಥಾನ ಈಗಾಗಲೇ ಅಜೀರ್ಣವಸ್ಥೆಯಲ್ಲಿದೆ, ಈ ದೇವಸ್ಥಾನವನ್ನು ಜೀರ್ಣೋದ್ದಾಗೊಳಿಸಿ ಬ್ರಹ್ಮಕಲಶ ಮಾಡಬೇಕೆಂಬ ಸಂಕಲ್ಪವನ್ನು ಮಾಡಿದ್ದೆವೆ, ಈ ಕಾರ್ಯವನ್ನು ಊರಿನ ಜನತೆಯ ಸಹಕಾರದೊಂದಿಗೆ ಮಾಡಬೇಕಾಗುತ್ತದೆ, ಈ ನಿಟ್ಟಿನಲ್ಲಿ ಸಮಿತಿಯನ್ನು ರಚಿಸಿಕೊಂಡು ಜೀರ್ಣೋದ್ದಾರ ಕಾರ್ಯ ಮಾಡಲಾಗುವುದು ಎಂದರು. ಕಡಬ ಶ್ರೀ ದುರ್ಗಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಒಂದು ದೇವಸ್ಥಾನದ ಅಭಿವೃದ್ದಿಗೆ ಆ ಊರಿನ ಜನರಲ್ಲಿ ಭಕ್ತಿ ಹಾಗೂ ಶಕ್ತಿ ಬೇಕಾಗುತ್ತದೆ, ಆ ಶಕ್ತಿಯನ್ನು ಕ್ರೂಢಿಕರಿಸುವ ತಂಡ ರಚನೆ ಮಾಡಿಕೊಂಡು ದೇವಸ್ಥಾನದ ಜೀರ್ಣೋದ್ದಾರ ಕಾರ್ಯ ಮಾಡಬಹುದು, ಈ ನಿಟ್ಟಿನಲ್ಲಿ ಅಭಿವೃದ್ದಿ ಕಾರ್ಯವು ಆದಷ್ಟು ಶೀಘ್ರವಾಗಿ ನಡೆಯಲಿ ಎಂದು ಹೇಳಿದರು. ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಭಿವೃದ್ದಿ ಸಮಿತಿಯ ಸದಸ್ಯ ಎ.ಬಿ.ಮನೋಹರ್ ರೈ, ಎ.ಪಿ.ಎಂ.ಸಿ ನಿರ್ದೇಶಕಿ ಪುಲಸ್ತ್ಯ ರೈ, ಮರ್ದಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಶಿವಪ್ರಸಾದ್ ಕೈಕುರೆ, ಶ್ರೀರಾಮ ದೇವಸ್ಥಾನದ ಆಡಳಿತ ಸಮಿತಿಯ ಮಾಜಿ ಅಧ್ಯಕ್ಷ ಕೃಷ್ಟನ್, ಐತ್ತೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸತೀಶ್.ಕೆ ಅವರು ಮಾತನಾಡಿ ಜೀರ್ಣೋದ್ದಾರದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ವಿವಿಧ ಸಲಹೆ ಸೂಚನೆಗಳನ್ನು ನೀಡಿದರು. ನಿವೃತ್ತ ಪೋಲಿಸ್ ಉಪನಿರೀಕ್ಷಕ ಗಂಗಾಧರ, ಉಮೇಶ್ ಬ್ರಹ್ಮಶ್ರೀ, ಧ.ಗ್ರಾ,ಯೋಜನೆಯ ಸೇವಾ ಪ್ರತಿನಿಧಿ ಸತೀಶ್ ಆಜನ, ಹಿರಿಯ ಮುಂದಾಳು ಜಗನ್ನಾಥ ಶೆಟ್ಟಿ ಆಜನ, ಯುವ ಬ್ರಿಗೇಡ್ ನ ಮಿಥುನ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜ್ಞಾನ ಸೆಲ್ವಿ ಅವರು ಸ್ವಾಗತಿಸಿ, ಶಿಕ್ಷಕ ತ್ಯಾಗಂ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಭಾ ಕಾರ್ಯಕ್ರಮದಲ್ಲಿ ಜೀರ್ಣೋದ್ದಾರ ಸಮಿತಿಯನ್ನು ರಚಿಸಲಾಯಿತು. ಪ್ರಮುಖರಾದ ಮಹೇಶ್ವರ, ಬಾಲಕೃಷ್ಣ, ಮಂಗಳಾದೇವಿ, ಸತ್ಯನಾಥನ್, ಮುನಿರತ್ನ, ಚಂದ್ರಮತಿ, ಶೇಖರ, ವಸಂತಿ, ಜಯಲಕ್ಷ್ಮೀ, ಜಯಪಾಲನ್ ಮೊದಲಾದವರು ಅತಿಥಿಗಳನ್ನು ಹೂ ಗುಚ್ಚ ನೀಡಿ ಗೌರವಿಸಿದರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.