ಪುತ್ತೂರು: ಸಮಾಜ ಸೇವೆ, ಬಡವರ ಕಷ್ಟಗಳಿಗೆ ಸ್ಷಂದಿಸಲು ಮತ್ತು ಸರ್ಕಾರದ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಕಾರ್ಯಾಚರಿಸುತ್ತಿರುವ ಅಶೋಕ್ ರೈ ಕೋಡಿಂಬಾಡಿ ಸೇವಾ ಟ್ರಸ್ಟ್ ಇದರ ಕೌಡಿಚ್ಚಾರಿನ ನೂತನ ಘಟಕವನ್ನು ಇತ್ತೀಚೆಗೆ ರಚಿಸಲಾಯಿತು. ದರ್ಬೆಯಲ್ಲಿರುವ ರೈ ಎಸ್ಟೇಟ್ನ ಕಚೇರಿಯಲ್ಲಿ ಅಶೋಕ್ ರೈಯವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಜನಾರ್ದನ ಪೂಜಾರಿ, ಜೀವನ್ ರೈ, ರಾಜೇಶ್ ಪ್ರಸಾದ್, ನವೀನ್ ಮಣಿಯಾಣಿ, ಅನಿಲ್ ಕೌಡಿಚ್ಚಾರು ಮತ್ತು ಶಿವಪ್ರಸಾದ್ರವರು ಪದಾಧಿಕಾರಿಗಳಾಗಿ ಆಯ್ಕೆಯಾದರು. ಅಶೋಕ್ ಕುಮರ್ ರೈಯವರು ಟ್ರಸ್ಟ್ನ ಉದ್ದೇಶ ಮತ್ತು ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ಪ್ರಜ್ವಲ್ ರೈ ಪಾತಾಜೆ ಅವರ ಉಪಸ್ಥಿತಿಯಿದ್ದರು.