ಪುತ್ತೂರು: ಅಖಿಲ ಭಾರತ ವೃತ್ತಿ ಪರೀಕ್ಷೆ ನ.23ರಂದು ಆರಂಭಗೊಂಡಿದ್ದು, ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿ ಶ್ರೀ ಮಹಾಲಿಂಗೇಶ್ವರ ಐಟಿಯು ಪರೀಕ್ಷಾ ಕೇಂದ್ರವಾಗಿದ್ದು, ವಿವಿಧ ಐಟಿಐ ಸಂಸ್ಥೆಗಳ ೨೬೯ ಮಮಂದಿ ತರಬೇತಿದಾರರು ಪರೀಕ್ಷೆಗೆ ಹಾಜರಾಗಿದ್ದಾರೆ.
ಪುತ್ತೂರು ತಾಲೂಕಿನ ಐಟಿಐಗಳು ಮತ್ತು ವಿಟ್ಲದ ಸರ್ಕಾರಿ ಐಟಿಐ, ಸುಪ್ರಜಿತ್ ಐಟಿಐ ವಿಟ್ಲ, ಒಡಿಯೂರು ಗುರುದೇವಾನಂದ ಐಟಿಐ ಗಳನ್ನು ಒಳಗೊಂಡ ಪುತ್ತೂರು ಶ್ರೀ ಮಹಾಲಿಂಗೇಶ್ವರ ಐಟಿಐ ಯ ಪರೀಕ್ಷಾ ಕೇಂದ್ರದಲ್ಲಿ ಅಖಿಲ ಭಾರತ ವೃತ್ತಿ ಪರೀಕ್ಷೆಯಲ್ಲಿ ಒಟ್ಟು 269 ತರಬೇತಿದಾರರು ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಸರ್ಕಾರಿ ಐಟಿಐ ಮಡಿಕೇರಿಯ ಪ್ರಾಚಾರ್ಯ ಯೋಗೆಶ್ ಎಚ್. ಇ. ಅವರು ಪರೀಕ್ಷಾ ಕೇಂದ್ರದ ಅಧ್ಯಕ್ಷರಾಗಿ ಆಗಮಿಸಿದ್ದಾರೆ. ಪರೀಕ್ಷೆಯು ದ.2 ರವರೆಗೆ ನಡೆಯಲಿದೆ ಎಂದು ಶ್ರೀ ಮಹಾಲಿಂಗೇಶ್ವರ ಐಟಿಐ ಸಂಚಾಲಕ ಯು. ಪಿ ರಾಮಕೃಷ್ಣ ರವರು ಹಾಗೂ ಪ್ರಾಂಶುಪಾಲ ಪ್ರಕಾಶ್ ಪೈ. ಬಿ. ತಿಳಿಸಿದ್ದಾರೆ.