HomePage_Banner
HomePage_Banner
HomePage_Banner
HomePage_Banner

ಉಪ್ಪಿನಂಗಡಿಯ ಅನಿವಾಸಿ ಕನ್ನಡಿಗನಿಂದ ಯುಎಇನಲ್ಲಿ `Fidaaa.com’  ಇ-ಶಾಪಿಂಗ್ ವೆಬ್‌ಸೈಟ್ ಆರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಕರಾವಳಿ ರುಚಿ ಯುಎಇಯಲ್ಲಿ ಸ್ವಾದಿಸುವ ಭಾಗ್ಯ…!

– ಇಬ್ರಾಹಿಂ ಖಲೀಲ್ ಪುತ್ತೂರು

ಪುತ್ತೂರು: ಪ್ರಸ್ತುತ ದಿನಗಳಲ್ಲಿ ಎಲ್ಲಾವೂ ಡಿಜಿಟಲ್ ಕರಣ ಆಗುತ್ತಿದ್ದು,  ಜನರು ಬೇಗನೇ ಮರಳಾಗಿದ್ದಾರೆ. ನಮಗೆ ಬೇಕಾಗುವ ಅಗತ್ಯ ವಸ್ತುಗಳಿಂದ ಹಿಡಿದು ಎಲ್ಲಾ ರೀತಿಯ ಸೇವೆಗಳು ಈಗ ಆನ್‌ಲೈನ್ ನಲ್ಲಿಯೇ ವ್ಯವಹಾರಿಸಬಲ್ಲ ವ್ಯವಸ್ಥೆಗಳು ರೂಪಿತವಾಗಿವೆ. ಜಗತ್ತು ವೇಗವಾಗಿ ಬದಲಾವಣೆಯತ್ತ ಮುಖ ಮಾಡುತ್ತಿದ್ದೆ, ಅದೇ ವ್ಯಾಪಾರ ಪ್ರವೃತ್ತಿಗಳೂ ಕೂಡ ಬದಲಾಗಬೇಕು. ವಿಶ್ವದಲ್ಲಿ ಇಂದು ಇಂಟರ್ ನೆಟ್ ಪ್ರಮುಖ ಪಾತ್ರ ವಹಿಸುತ್ತಿದೆ.

ಪ್ರತಿಯೊಂದು ಕೂಡ ಇಂಟರ್ ನೆಟ್ ನೆರವಿನಿಂದಲೇ ನಡೆಯುತ್ತದೆ. ಅದರಲ್ಲೂ ಮುಖ್ಯವಾಗಿ ಕೋವಿಡ್-19 ಸಾಂಕ್ರಾಮಿಕದ ಬಳಿಕ, ಮಾರುಕಟ್ಟೆ ಬಹುತೇಕ ಆನ್‌ಲೈನ್ ಪ್ಲಾಟ್‌ಫಾರಂಗಳತ್ತ ಮುಖ ಮಾಡಿವೆ. ಜನರಿಗಿಷ್ಟವಾಗುವ ಎಲ್ಲಾ ರೀತಿಯ ಸೇವೆಗಳು ಕುಳಿತಲ್ಲೇ ಮಾಡಬಹುದಾದ ಸುಲಭ ವಿಧಾನಗಳು ದಿನದಿಂದ ದಿನಕ್ಕೆ ಹೆಚ್ಚಾಗಿತ್ತಿದೆ ಎಂದರೆ ತಪ್ಪಾಗಲಾರದು. ಕಡಲಿನಾಚೆಗೆ ಅರಬ್ ರಾಷ್ಟ್ರಗಳಿಗೆ ಉದ್ಯೋಗಕ್ಕಾಗಿ ತೆರಳುವ ಅದೆಷ್ಟು ಮಂದಿಗೆ ಊರಿನ ವಸ್ತು ಉತ್ಪನ್ನಗಳ ಬಗ್ಗೆ ಇಷ್ಟವಿರುತ್ತದೆ, ಆದರೆ ಅಲ್ಲಿಯ ಆಹಾರ ಪದ್ಧತಿಗೆ ಸರಿದೋಗಲು ಬಯಸದವರಿಗೆ ಇದೀಗ ಆನ್‌ಲೈನ್ ಮೂಲಕ ಆಹಾರೋತ್ಪದನಾಗಳನ್ನು ತರಿಸಿಕೊಳ್ಳಬಹುದಾದ ವಿಶೇಷ ಸೌಕರ್ಯವನ್ನು ಮಾಡಿದೆ. ದ.ಕ. ಜಿಲ್ಲೆಯ ಮೂಲತಃ ಉಪ್ಪಿನಂಗಡಿಯ ನಿವಾಸಿ ಉದ್ಯಮಿ ಅಹ್ಮದ್ ಬಾಬಾ ರವರು ಯುನೈಟೆಡ್ ಅರಬ್ ಎಮೀರೇಟ್ಸ್ (ಯುಎಇ) ಜನತೆಗೆ ಶಾಪಿಂಗ್ ಸುಲಭ ರೀತಿಯಲ್ಲಿ ಮಾಡಬೇಕೆಂಬ ದೃಷ್ಟಿಯಲ್ಲಿ ಸೆಂಪ್ಟೆಂಬರ್ ತಿಂಗಳಲ್ಲಿ `Fidaaa.com’ ಹೆಸರಿನ ಇ-ಶಾಪಿಂಗ್ ವೆಬ್‌ಸೈಟ್ ಆರಂಭ ಮಾಡಿದ್ದಾರೆ. ಆನ್‌ಲೈನ್ ಪ್ರಿಯರಿಗೆ ಮುದ ನೀಡುವ ವೈವಿಧ್ಯಮಯ, ನಂಬಿಕೆಯಾರ್ಹ ಬ್ರಾಂಡ್‌ಗಳ ಉತ್ಪನ್ನಗಳು ಈ ಶಾಪಿಂಗ್‌ನಲ್ಲಿ ಮಾರಾಟಕ್ಕಿವೆ.

`ಫಿದಾ’ದಲ್ಲಿ ಏನೇನಿದೆ?
ಕಳೆದ ತಿಂಗಳಿಂದ ನೂತನವಾಗಿ ಆರಂಭಗೊಂಡ ಫಿದಾ ಆನ್‌ಲೈನ್ ಶಾಪಿಂಗ್ ವೆಬ್ ಸೈಟ್ ನಲ್ಲಿ ವಿವಿಧ ರೀತಿಯಲ್ಲಿ ಹಲವು ಆಕರ್ಷಕ ರಿಯಾಯಿತಿ ಬೆಲೆಯಲ್ಲಿ ವಿವಿಧ ಉತ್ಪತ್ನಗಳು ನಿಮ್ಮ ಆಯ್ಕೆಯಂತೆ ಖರೀದಿಕೊಳ್ಳಬಹುದಾಗಿದೆ. ನಿಕಾನ್, ಗುಸ್ಸಿ, ಕ್ಯಾನನ್, ಮರ್ಸಿಡೆಸ್ ಬೆನ್ಝ್, ಸೋನಿ, ಪುಜಿಫಿಲ್ಮಿ ಹಾಗೂ ಇನ್ನಿತರ ದಿನಸಿ ಸಾಮಾಗ್ರಿಗಳು ಕೂಡ ಫಿದಾದಲ್ಲಿ ಲಭ್ಯವಿದೆ. ಇದಲ್ಲದೇ ವಿಶೇಷವಾಗಿ ಜೋರ್ಡನ್ ಖರ್ಜೂರ, ಫಲೆಸ್ತೇನ್ ಖರ್ಜೂರ, ದುಬೈ ಖರ್ಜೂರ ಸಹಿತ ಡ್ರೈ ಫ್ರುಟ್ಸ್ ಗಳು, ನಾನಾ ಸುಗಂಧ ದ್ರವ್ಯಗಳು ರಖಂ ಬೆಲೆಯಲ್ಲಿ ಫಿದಾದಲ್ಲಿದೆ. ಪುಸ್ತಕಗಳು, ಇಲೆಕ್ಟ್ರಾನಿಕ್ಸ್ ವಸ್ತುಗಳು, ಮಕ್ಕಳ ಆಟಿಕೆಗಳು, ಬಟ್ಟೆ ಬರೆಗಳು, ಮೊಬೈಲ್ ಟ್ಯಾಬ್ಸ್, ಹೆಲ್ತ್ ಕೇರ್ ಎಂಬಿತ್ಯಾದಿ ಕ್ಯಾಟಗರಿಗಳಿವೆ. ಈಗಾಗಲೇ ಯುಎಇ ಮತ್ತು ಇತರ ಸುತ್ತಮುತ್ತಲ ಪ್ರದೇಶಗಳ ಗ್ರಾಹಕರು ಉತ್ಪನ್ನಗಳನ್ನು ಖರೀದಿಸುತ್ತಿದ್ದು, ಸಾವಿರಾರು ಸಂದೇಶಗಳನ್ನು ಗ್ರಾಹಕರು ಫಿದಾದೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

ಉದ್ಯೋಗದ ಸೃಷ್ಟಿಸುವ ಗುರಿ…
ಈಗಾಗಲೇ ಕೋವಿಡ್ ಆಘಾತದಿಂದ ವಹಿವಾಟುಗಳಿಗೆ ಕಂಟಕ ಸುತ್ತಿಕೊಂಡು ಲಕ್ಷಾಂತರ ಮಂದಿ ಉದ್ಯೋಗದ ಕಂಪನಿಗಳು ಕೈಬಿಟ್ಟಿವೆ. ಗಲ್ಫ್ ರಾಷ್ಟ್ರಗಳಲ್ಲಿರುವ ಹಲವಾರು ಅನಿವಾಸಿ ಕನ್ನಡಿಗರಿಗೆ ಉದ್ಯೋಗಾವಕಾಶ ಮಾಡಿ ಕೊಡುವುದು ಹಾಗೂ ನಿರೋದ್ಯೋಗಳಾಗಿ ತನ್ನ ಜೀವನದಲ್ಲಿ ಅರ್ಥಿಕ ಸಂಕಷ್ಟ ಅನುಭವಿಸುವವರಿಗೆ ಉದ್ಯೋಗವನ್ನು ಕಲ್ಪಿಸಿಸುವುದು ಈ ಫಿದಾ ಇ- ಕಾಮರ್ಸ್‌ನ ಹಿಂದಿರುವ ಮೂಲ ಉದ್ದೇಶವಾಗಿದೆ ಎನ್ನುತ್ತಾರೆ ಅನಿವಾಸಿ ಕನ್ನಡಿಗ, ಉದ್ಯಮಿ ಅಹ್ಮದ್ ಬಾವ.

ಕರಾವಳಿ ರುಚಿ ಯುಎಇಯಲ್ಲಿ ಸ್ವಾದಿಸಿ!
ಜನರಿಗೆ ಉತ್ಪನ್ನಗಳು ಸುಲಭವಾಗಿ ಹಾಗೂ ವೇಗವಾಗಿ ಪತ್ತೆ ಮಾಡಲು ಮತ್ತು ತ್ವರಿತ & ದಕ್ಷವಾಗಿ ಪೂರೈಸುವ ವಿಧಾನವನ್ನು ಕೂಡ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೇ ಕರಾವಳಿಯ ಪ್ರಸಿದ್ಧ ಕೋರಿರೊಟ್ಟಿ, ಬ್ಯಾಡಗಿ ಮೆಣಸಿನಕಾಯಿ, ಕೊರ್ಗ್ ಶುದ್ಧ ತುಪ್ಪ, ನಂದಿನಿ ತುಪ್ಪ, ಊರಿನ ಉಪ್ಪಿನಕಾಯಿ ಸಹಿತ ಹಲವು ರೀತಿಯ ಊರಿನ ಉತ್ಪನ್ನಗಳು ಫಿಧಾದಲ್ಲಿ ಲಭ್ಯವಿರುವುದರಿಂದ ಹರ್ಷ ತಂದಿದೆ ಎಂದು ಅನಿವಾಸಿ ಕನ್ನಡಿಗರು ತಿಳಿಸಿದ್ದಾರೆ.

ಉತ್ಪನ್ನ ಕ್ವಾಲಿಟಿ ಸರ್ಟಿಫಿಕೇಟ್
ಇತ್ತೀಚೆಗೆ ಹೆಚ್ಚುತ್ತಿರುವ ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್‌ಗಳು ನಕಲಿ, ಗುಣಮಟ್ಟವಲ್ಲದ ಸಾಮಾಗ್ರಿಗಳನ್ನಿಟ್ಟು ವ್ಯವಹಾರಿಸಿ ಜನರಿಗೆ ಮೋಸಕ್ಕೆ ದುಡುತ್ತದೆ. ಈ ನಿಟ್ಟಿನಲ್ಲಿ `ಫಿದಾ’ ಕ್ವಾಲಿಟಿ ಫ್ರೋಪ್ ಸರ್ಟಿಪಿಕೇಟ್ ಹಾಗೂ ಇ- ಕಾಮರ್ಸ್‌ಗೆ ಸಂಬಂಧ ಪಟ್ಟ ಎಲ್ಲಾ ರೀತಿ ಕಾನೂನು ಬದ್ಧವಾದ ಮೂಲ ದಾಖಲೆಯನ್ನು ಹೊಂದಿದೆ, ಜನರಿಗೆ ಯಾವುದೇ ರೀತಿಯಲ್ಲೂ ವಂಚಿಸುವುದಿಲ್ಲ ಎಂದು ಇ-ಶಾಪಿಂಗ್‌ನ ಮುಖ್ಯಸ್ಥರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.