HomePage_Banner
HomePage_Banner
HomePage_Banner
HomePage_Banner

ಆಯುರ್ವೇದ ಶಲ್ಯಚಿಕಿತ್ಸಕ ಡಾ|| ರವಿಶಂಕರ ಪೆರ್ವಾಜೆ ರವರಿಗೆ ಆಯುರ್ವೇದ ರತ್ನ ಪ್ರಶಸ್ತಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಬೆಂಗಳೂರು ಇದರ ಅಡಿಯಲ್ಲಿ ಆಚರಿಸುತ್ತಿರುವ ಐದನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಸಂದರ್ಭದಲ್ಲಿ ಆಯುರ್ವೇದ ಕ್ಷೇತ್ರಕ್ಕೆ ಅನುಪಮ ಹಾಗೂ ಅಸಾಮಾನ್ಯ ಸೇವೆ ಸಲ್ಲಿಸಿದ ಆಯುರ್ವೇದ ಶಲ್ಯಚಿಕಿತ್ಸಕ ಡಾ|| ರವಿಶಂಕರ ಪೆರ್ವಾಜೆ ರವರಿಗೆ ಆಯುರ್ವೇದ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಶ್ರೀ ನಿರ್ಮಲಾನಂದ ಸ್ವಾಮೀಜಿ, ಡಾ. ಎಸ್. ಸಚ್ಚಿದಾನ೦ದ.RGUHS.V.C, ಡಾ. ಬಿ.ಆರ್. ರಾಮಕೃಷ್ಣ,ಎಸ್.ವ್ಯಾಸ ಯುನಿವರ್ಸಿಟಿ.ವಿ.ಸಿ , ಶ್ರೀಮತಿ.ಮೀನಾಕ್ಷಿ ನೆಗಿ,ಡೈರೆಕ್ಟರ್ ಆಯುರ್ವೇದ ವಿಭಾಗ, ಡಾ. ಮೋಹನ್ ಆಳ್ವ, ಡಾ.ಎಸ್. ಬನ್ನಿಗೊಳ,DEAN AYURVEDARGUHS.,ಉಪಸ್ಥಿತರಿದ್ದರು.

ಸನ್ಮಾನಿರ ಬಗ್ಗೆ: ಡಾ. ರವಿಶಂಕರ ಪೆರ್ವಾಜೆ ರವರು ೩೦-೦೪- ೧೯೬೨ರಲ್ಲಿ ಖ್ಯಾತ ಆಯುರ್ವೇದ ವೈದ್ಯರಾದ ಡಾ|| ಪಿ.ಗೋಪಾಲಕೃಷ್ಣ ಭಟ್ ಹಾಗೂ ಶಾರದ ದಂಪತಿಗಳ ಪುತ್ರರಾಗಿ ಜನಿಸುತ್ತಾರೆ. ೧೯೯೫ರಲ್ಲಿ ಎಸ್.ಡಿ.ಎಮ್ ಆಯುರ್ವೇದ ಮಹಾವಿದ್ಯಾಲಯ ಉಡುಪಿಯಲ್ಲಿ ಹಾಗೂ ಸ್ನಾತಕೋತ್ತರ ಪದವಿಯನ್ನು ಹಿಂದೂ ವಿಶ್ವವಿದ್ಯಾಲಯ ವಾರಾಣಾಸಿಯಲ್ಲಿ ಪಡೆದರು.
ತನ್ನ ಹುಟ್ಟೂರಲ್ಲೇ ವೈದ್ಯಕೀಯ ವೃತ್ತಿಯನ್ನು ಪ್ರಾರಂಭಿಸಿ ಜುಲೈ ೨೦೦೨ರಲ್ಲಿ ಸುಸಜ್ಜಿತ ೩೫ ಹಾಸಿಗೆಗಳ ಸುಶ್ರುತ ಆಯುರ್ವೇದ ಆಸ್ಪತ್ರೆಯನ್ನು ಪ್ರಾರಂಭಿಸುತ್ತಾರೆ. ಕ್ಷಾರ ಕರ್ಮ ಹಾಗೂ ಅಗ್ನಿಕರ್ಮ ಚಿಕಿತ್ಸಾ ವಿಧಾನಗಳ ಬಗ್ಗೆ ಸಂಶೋಧನಾ ಪ್ರಬಂಧಗಳನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟದ ಕಾರ್ಯಗಾರದಲ್ಲಿ ಪ್ರಸ್ತುತಪಡಿಸಿದ್ದಾರೆ. ಇವರು ಇಲ್ಲಿಯವರೆಗೆ ಸುಮಾರು ೧೬ಸಾವಿರ ಅಧಿಕ ಗುದಗತ ರೋಗಿಗಳ ಯಶಸ್ವಿ ಚಿಕಿತ್ಸೆ ನೀಡಿದ್ದಾರೆ, ಅಲ್ಲದೇ ಪಕ್ಷಾಘಾತ ರೋಗದಲ್ಲಿ ಕೂಡ ತಮ್ಮದೇ ಆದ ವಿಶಿಷ್ಟ ಚಿಕಿತ್ಸೆಯಿ೦ದ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಸಿರಾವ್ಯಾಧದ೦ತಹ ರಕ್ತಮೋಕ್ಷಣ ಚಿಕಿತ್ಸೆಯಲ್ಲಿಯೂ ಪರಿಣಿತಿಯನ್ನು ಹೊ೦ದಿದ್ದಾರೆ.  ಇವರ ಸಂಶೋಧನಾತ್ಮಕ ಲೇಖನಗಳು ಎನ್‌.ಐ.ಎಂ.ಎ ಹಾಗೂ ಆಯುರ್ ಮೆಡ್‌ಲೈನ್ ಜರ್ನಲ್‌ಗಳಲ್ಲಿ ಪ್ರಕಾಶನಗೊಂಡಿವೆ. ಈಗಲೂ ಕೂಡ ಇವರ ಆಸ್ಪತ್ರೆಯಲ್ಲಿ ೨೦ ರಿಂದ ೨೫ ಆಯುರ್ವೇದ ವೈದ್ಯರು ಸ್ವಇಚ್ಚೆಯಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ. ರಾಷ್ಟ್ರೀಯ ಆಯುರ್ವೇದ ವಿದ್ಯಾಪೀಠ ನವದೆಹಲಿ ಇವರನ್ನು `ಆಯುರ್ವೇದ ಗುರು’ ಎಂದು ೨೦೧೬ರಲ್ಲಿ ಗೌರವಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.