ಪುತ್ತೂರು: ಬನ್ನೂರು ನವೋದಯ ಮಹಿಳಾ ಮಂಡಲದ 2020-21ನೇ ಸಾಲಿನ ಅಧ್ಯಕ್ಷರಾಗಿ ಬನ್ನೂರು ನಿವಾಸಿ ಮಾಲತಿ ಮತ್ತು ಕಾರ್ಯದರ್ಶಿಯಾಗಿ ಸುಲೋಚನಾ ಅವರು ಆಯ್ಕೆಯಾಗಿದ್ದಾರೆ.


ನವೋದಯ ಸಂಸ್ಥೆಯ ಕಟ್ಟಡದಲ್ಲಿ ನ.22ರಂದು ನಡೆದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಮಹಿಳಾ ಮಂಡಲದ ಗೌರವಾಧ್ಯಕ್ಷೆ ಗೌರಿ ಹೆಚ್ ಅವರ ಅಧ್ಯಕ್ಷತೆಯಲ್ಲಿ ನಿರ್ಗಮನ ಅಧ್ಯಕ್ಷೆ ಮಮತಾ ಶೆಟ್ಟಿ ಮತ್ತು ಕಾರ್ಯದರ್ಶಿ ಆಶಾ ಅವರ ಉಪಸ್ಥಿಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಆಶಾ, ಖಜಾಂಜಿಯಾಗಿ ಅಮಿತಾ, ಪಾರ್ವತಿ, ಮೋಹಿನಿ, ಜಯಶ್ರೀ, ಶೋಭರವರನ್ನು ಆಯ್ಕೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ೨೦೧೯-೨೦ನೇ ಸಾಲಿನ ವರದಿಯನ್ನು ನಿರ್ಗಮನ ಕಾರ್ಯದರ್ಶಿ ಆಶಾ ಮಂಡಿಸಿದ ಬಳಿಕ ನೂತನ ಪದಾಧಿಕಾರಿಗಳಿಗೆ ದಾಖಲೆ ಪತ್ರಗಳನ್ನು ಹಸ್ತಾಂತರಿಸಲಾಯಿತು. ಪುಷ್ಪಾ ಪ್ರಾರ್ಥಿಸಿದರು. ಮಮತಾ ಶೆಟ್ಟಿ ಸ್ವಾಗತಿಸಿ, ಆಶಾ ಕಾರ್ಯಕ್ರಮ ನಿರೂಪಿಸಿದರು. ಸುಲೋಚನಾ ವಂದಿಸಿದರು.