HomePage_Banner
HomePage_Banner
HomePage_Banner
HomePage_Banner

ಅಗತ್ಯ ವಸ್ತುಗಳು, ಚಿನ್ನಾಭರಣವಿದ್ದ ಬ್ಯಾಗ್‌ನ್ನು ಮರಳಿಸಿ ಪ್ರಾಮಾಣಿಕತೆ ಮೆರೆದ ಲಕ್ಷ್ಮೀಶ ದೇವಸ್ಯ ಹಾಗೂ ಪೃಥ್ವಿ ಕೋಡಿಕಲ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ವ್ಯಕ್ತಿಯೊಬ್ಬರ ಅಗತ್ಯ ವಸ್ತುಗಳು ಮತ್ತು ಚಿನ್ನಾಭರಣವಿದ್ದ ಬ್ಯಾಗೊಂದು ಪುತ್ತೂರು-ಬುಳೇರಿಕಟ್ಟೆ-ವಿಟ್ಲ ಮುಖ್ಯ ರಸ್ತೆಯಲ್ಲಿ ಕಳೆದುಹೋಗಿದ್ದು ಮತ್ತು ಕಳೆದುಹೋದ ಕೆಲವೇ ಗಂಟೆಗಳಲ್ಲಿ ಬ್ಯಾಗನ್ನು ಕಳೆದುಕೊಂಡ ವ್ಯಕ್ತಿಗೆ ಮರಳಿ ಸಿಕ್ಕಿರುವ ಘಟನೆ ನಡೆದಿದೆ.

ಪುಣಚ, ಪರಿಯಾಲ್ತಡ್ಕ ಫ್ಯಾಮಿಲಿ ಸೂಪರ್ ಬಜಾರ್‌ನ ಮಹಮದ್ ಅಶ್ರಫ್‌ರವರು ಹಣ, ಮೊಬೈಲ್, ದಾಖಲೆ ಪತ್ರಗಳು ಮತ್ತು ಚಿನ್ನಾಭರಣವಿದ್ದ ಬ್ಯಾಗನ್ನು ಕಳೆದುಕೊಂಡ ವ್ಯಕ್ತಿಯಾಗಿದ್ದು, ಕಳೆದುಹೋದ ಕೆಲವೇ ಘಂಟೆಗಳಲ್ಲಿ ಮಹಮದ್ ಅಶ್ರಫ್‌ರವರ ಮೊಬೈಲ್ ರಿಂಗಣಿಸಿದೆ. ಮೊಬೈಲ್ ರಿಂಗಣಿಸಿದ್ದು ಯಾರೂ ಅಲ್ಲ, ದೇವಸ್ಯ ನಿವಾಸಿ, ಚಿನ್ನದ ಆಚಾರಿ ಶಂಕರ ಆಚಾರ್ಯರವರ ಪುತ್ರ ಲಕ್ಷ್ಮೀಶ ದೇವಸ್ಯ ಮತ್ತು ಮಂಗಳೂರು ಕೋಡಿಕಲ್ ನಿವಾಸಿ ಪ್ರಥ್ವಿ ಕೋಡಿಕಲ್ ಎಂಬ ಯುವಕರು. ಲಕ್ಷ್ಮೀಶ ದೇವಸ್ಯ ಹಾಗೂ ಪ್ರಥ್ವಿ ಕೋಡಿಕಲ್‌ರವರಿಗೆ ಮಹಮದ್ ಅಶ್ರಫ್‌ರವರ ಕಳೆದುಹೋದ ಬ್ಯಾಗ್ ಸಿಕ್ಕಿದ್ದು, ಕೂಡಲೇ ಕಾರ್ಯಪ್ರವೃತ್ತರಾದ ಅವರೀರ್ವರು ಕಳೆದುಹೋದ ಬ್ಯಾಗ್ ಒಳಗಡೆ ಮಹಮದ್ ಅಶ್ರಫ್‌ರವರ ಬ್ಯಾಂಕ್ ಪಾಸ್ ಬುಕ್‌ನಲ್ಲಿದ್ದ ಫೋನ್ ನಂಬರಿಗೆ ಕಾಲ್ ಮಾಡಿ ಕಳೆದುಹೋದ ಬ್ಯಾಗ್ ದೊರೆತಿರುವ ಬಗ್ಗೆ ವಿಷಯವನ್ನು ಪ್ರಸ್ತಾಪಿಸಿದ್ದಾರೆ.

ವಿಷಯವನ್ನು ತಿಳಿದ ಮಹಮದ್ ಅಶ್ರಫ್‌ರವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಕೂಡಲೇ ಮಹಮದ್ ಅಶ್ರಫ್‌ರವರು ಲಕ್ಷ್ಮೀಶ ದೇವಸ್ಯ ಹಾಗೂ ಪ್ರಥ್ವಿ ಕೋಡಿಕಲ್‌ರವರನ್ನು ಸಂಪರ್ಕಿಸಿದ್ದು, ಕಳೆದುಹೋದ ಬ್ಯಾಗ್‌ನ್ನು ವಾರೀಸುದಾರ ಮಹಮದ್ ಅಶ್ರಫ್‌ರವರಿಗೆ ಲಕ್ಷ್ಮೀಶ ದೇವಸ್ಯ ಹಾಗೂ ಪ್ರಥ್ವಿ ಕೋಡಿಕಲ್‌ರವರು ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ ಮಾತ್ರವಲ್ಲದೆ ಕಳೆದುಹೋದ ಬ್ಯಾಗ್‌ನ್ನು ಮರಳಿ ತಂದೊಪ್ಪಿಸಿದ ಲಕ್ಷ್ಮೀಶ ದೇವಸ್ಯ ಹಾಗೂ ಪ್ರಥ್ವಿ ಕೋಡಿಕಲ್‌ರವರಿಗೆ ಮಹಮದ್ ಅಶ್ರಫ್‌ರವರು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.