- ಗ್ರಾಮದ ಕಟ್ಟಕಡೇಯ ವ್ಯಕ್ತಿಯೂ ಮೂಲಭೂತ ಸೌಕರ್ಯದಿಂದ ವಂಚಿತರಾಗಬಾರದು: ಅನಿತಾ ಹೇಮನಾಥ ಶೆಟ್ಟಿ

ಪುತ್ತೂರು: ಗ್ರಾಮಗಳ ಅಭಿವೃದ್ದಿಗೆ ಸರಕಾರ ಅನುದಾನವನ್ನು ನೀಡುತ್ತದೆ ಆದರೆ ಅದನ್ನು ಗ್ರಾಮದ ಕಡ್ಡಕಡೇಯ ವ್ಯಕ್ತಿಗೂ ತಲುಪಿಸುವ ಕಾರ್ಯ ಜನಪ್ರತಿನಿಧಿಗಳಿಂದ ಆದರೆ ಮಾತ್ರ ಗ್ರಾಮಗಳ ಅಭಿವೃದ್ದಿ ಸಾಧ್ಯವಾಗುತ್ತದೆ ಎಂದು ನೆಟ್ಟಣಿಗೆ ಮುಡ್ನೂರು ಜಿಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಹೇಳಿದರು.
ಅವರು ನ. 24 ರಂದು ಮಾಡ್ನೂರು ಗ್ರಾಮದ ತೋಟದಮೂಲೆ, ಮುಂಡಕೊಚ್ಚಿ, ತೋಟದ ಮೂಲೆ ಮಾರಿಯಮ್ಮ ದೇವಸ್ಥಾನದ ವಿವಿಧ ಕಾಮಗಾರಿ, ಕೆರೆಮಾರು ಮುಂಡೋಳೆ ರಸ್ತೆ ಸೇರಿದಂತೆ ಒಟ್ಟು ಏಳು ಕಡೆಗಳಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಸರಕಾರದ ಸೌಲಭ್ಯದ ಬಗ್ಗೆ ಜನ ಸಾಮಾನ್ಯರಿಗೆ ಹೆಚ್ಚಿನ ಮಾಹಿತಿ ಇರುವುದಿಲ್ಲ, ಜನಪ್ರತಿನಿಧಿಯಾದವರು ಅದನ್ನು ತಿಳಿದುಕೊಂಡು ಸರಕಾರದಿಂದ ಸಿಗುವ ಅನುದಾನವನ್ನು ಬೇಡಿಕೆ ಇರುವ ಕಡೆಗಳಲ್ಲಿ ಕಾಮಗಾರಿ ನಡೆಸಬೇಕು. ಜನರ ಸಮಸ್ಯೆಯನ್ನು ಜನರೇ ಬಂದು ನಮ್ಮ ಬಳಿ ಹೇಳುವುದಕ್ಕಿಂತ ನಾವೇ ಸಮಸ್ಯೆಯ ಇರುವ ಕಡೆಗಳಲ್ಲಿ ಅನುದಾನವನ್ನು ಇರಿಸಿ ಸಮಸ್ಯೆಯನ್ನು ಪರಿಗರಿಸಬೇಕು.ನೆಟ್ಟಣಿಗೆ ಮುಡ್ನೂರು ಜಿಪಂ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಈಗಾಗಲೇ ಕೋಟ್ಯಂತರ ರೂ ಗಳ ವಿವಿಧ ಕಾಮಗಾರಿಗಳು ನಡೆದಿದೆ. ಇರುವ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಗ್ರಾಮಸ್ಥರ ಬೇಡಿಕೆಯನ್ನು ಈಡೇರಿಸಿದ ತೃಪ್ತಿ ನನಗಿದೆ ಎಂದು ಹೇಳಿದರು.
ಜನಪ್ರತಿನಿಧಿಯಾದ ತಕ್ಷಣವೇ ನಾವು ಜನರನ್ನು ಮರೆಯಬಾರದು. ಜನರ ಆಶೀರ್ವಾದ ಇಲ್ಲದೇ ಹೋದರೆ ಜನಪ್ರತಿನಿಧಿಯಾಗಲು ಸಾಧ್ಯವಿಲ್ಲ. ಜನ ನಮ್ಮಿಂದ ಅನೇಕ ನಿರೀಕ್ಷೆಗಳನ್ನು ಇಟ್ಟು ಆಯ್ಕೆ ಮಾಡಿರುತ್ತಾರೆ , ಜನರ ನಿರೀಕ್ಷಗೆ ಭಂಗ ತರುವ ಕೆಲಸವನ್ನು ಯಾರೂ ಮಾಡಬಾರದು. ಅಭಿವೃದ್ದಿಯಲ್ಲಿ ರಾಜಕೀಯ ತಾರತಮ್ಯ ಮಾಡಬಾರದು ಅದನ್ನು ಜನ ಸಾಮಾನ್ಯ ಇಷ್ಟಪಡುವುದಿಲ್ಲ ಎಂಬುದನ್ನು ನಾವು ಅರಿತುಕೊಳ್ಳಬೇಕು. ಮಾಡ್ನೂರು ಗ್ರಾಮದ ಮಾರಿಯಮ್ಮ ದೇವಸ್ಥಾನಕ್ಕೆ ಇಂಟರ್ಲಾಕ್ ಮತ್ತು ಶೌಚಾಲಯದ ವ್ಯವಸ್ಥೆಯನ್ನು ಮಾಡಲಾಗಿದೆ, ಇದೇ ಪರಿಸರದಲ್ಲಿ ಕುಡಿಯುವ ನೀರಿಗಾಗಿ ಬ್ರಹತ್ ಟ್ಯಾಂಕ್ನ ಉದ್ಘಾಟನೆಯೂ ನಡೆದಿದೆ. ಮುಂದಿನ ದಿನಗಳಲ್ಲಿ ತೋಟದ ಮೂಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಾರದು, ಜನ ನೀರಿಗಾಗಿ ಭವಣೆ ಪಡಬಾರದು ಎಂಬ ಉದ್ದೇಶದಿಂದ ಈ ವ್ಯವಸ್ಥೆಯನ್ನು ಜಿಪಂನಿಂದ ಮಾಡಲಾಗಿದೆ ಎಂದು ಹೇಳಿದ ಅವರು ಗ್ರಾಮಸ್ಥರ ಸಹಕಾರಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು.
ಮುಂಡಕೊಚ್ಚಿಯಲ್ಲಿ ನೀರಿನ ಸಮಸ್ಯೆ ಇತ್ಯರ್ಥ
ಮಾಡ್ನೂರು ಗ್ರಾಮದ ಮುಂಡಕೊಚ್ಚಿಯಲ್ಲಿ ಕಳೆದ ೪೦ ವರ್ಷಗಳಿಂದ ಇದ್ದ ಕುಡಿಯುವ ನೀರಿನ ಸಮಸ್ಯೆಯನ್ನು ಈ ಬರಿ ಬಗೆಹರಿಸಲಗಿದೆ. ಬರಡು ಭೂಮಿ ಎಂದೇ ಕರೆಯಲ್ಪಡುತ್ತಿದ್ದ ಈ ಪ್ರದೇಶದಲ್ಲಿ ಜಿಪಂನಿಂದ ಕೊಳವೆ ಬಾವಿಯನ್ನು ತೆಗೆಯಲಾಗಿದ್ದು ದಾರಾಳ ನೀರು ಲಭ್ಯವಾಗಿದೆ. ಈ ನೀರು ಪರಿಸರದ ಎಲ್ಲಾ ಮನೆಗಳಿಗೂ ತಲುಪಬೇಕು ಎಂಬ ಉದ್ದೇಶದಿಂದ ಓವರ್ಹೆಡ್ ಟ್ಯಾಂಕ್ ಸುಮಾರು ೧೮ ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಇದೀಗ ಈ ಭಾಗದ ನೀರಿನ ಸಮಸ್ಯೆಯೂ ಇತ್ಯರ್ಥವಾಗಿದೆ ಎಂದು ಅನಿತಾ ಹೇಮನಾಥ ಶೆಟ್ಟಿ ಹೇಳಿದರು. ಮುಂಡಕೊಚ್ಚಿಯಲ್ಲಿ ನೂತನ ನೀರಿನ ಟ್ಯಾಂಕನ್ನು ತೆಂಗಿನ ಕಾಯಿ ಒಡೆಯುವ ಮೂಲಕ ಅನಿತಾ ಹೇಮನಾಥ ಶೆಟ್ಟಿ ಉದ್ಘಾಟಿಸಿದರು.

ಗ್ರಾಮೀಣ ಜನತೆಯ ಬೇಡಿಕೆಗೆ ಸ್ಪಂದಿಸಬೇಕು: ಹೇಮನಾಥ ಶೆಟ್ಟಿ
ಗ್ರಾಮೀಣ ಜನರು ಅನೇಕ ಬೇಡಿಕೆಗಳನ್ನು ಚುನಾವಣೆ ಸಂದರ್ಭದಲ್ಲಿ ಹೇಳಿಕೊಂಡಿರುತ್ತಾರೆ. ಆದರೆ ಚುನಾವಣೆ ಬಳಿಕ ಕೆಲವರು ಅದನ್ನು ಮರೆತುಬಿಡುತ್ತಾರೆ ಆ ರೀತಿ ಆಗಬಾರದು. ಜನರ ಸಮಸ್ಯೆಗಳಿಗೆ ಜನಪ್ರತಿನಿಧಿಗಳಾದವರು ಸ್ಪಂದಿಸಬೇಕು ಇಲ್ಲವಾದರೆ ಜನರೇ ಅದಕ್ಕೆ ಉತ್ತರವನ್ನು ನೀಡುತ್ತಾರೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಹೇಳಿದರು.
ಅರಿಯಡ್ಕ ಹಾಗೂ ಮಾಡ್ನೂರು ಗ್ರಾಮದಲ್ಲಿ ಕಳೆದ ೫ ವರ್ಷಗಳಲ್ಲಿ ಅನೇಕ ಕಾಮಗಾರಿಗಳು ನಡೆದಿದೆ. ರಸ್ತೆ, ಕುಡಿಯುವ ನೀರು, ಪೈಪ್ ಲೈನ್, ಮೋರಿಯ ಕಾಮಗಾರಿ, ದಾರಿ ದೀಪ, ಇಂಟರ್ಲಾಕ್ ಅಳವಡಿಕೆ, ಶೌಚಾಲಯ ಸೇರಿದಂತೆ ಜನರ ಮೂಲಭೂತ ಬೇಡಿಕೆಗಳಿಗೆ ಜಿಪಂ ಸದಸ್ಯರು ಸ್ಪಂದಿಸಿದ್ದಾರೆ. ಇರುವ ಅನುದಾನವನ್ನು ಬಳಕೆ ಮಾಡಿಕೊಂಡು ಬೇಡಿಕೆ ಇರುವ ಸ್ಥಳಗಳಲ್ಲಿ ಕಾಮಗಾರಿಯನ್ನು ನಡೆಸಲಾಗಿದೆ. ೪೦ ವರ್ಷಗಳಿಂದ ಪರಿಹಾರವಾಗದೇ ಇದ್ದ ಮುಂಡಕೊಚ್ಚಿಯ ಕುಡಿಯುವ ನೀರಿನ ಸಮಸ್ಯೆಯನ್ನು ಈ ಬಾರಿ ಬಗೆಹರಿಸಲಾಗಿದೆ ಇದು ಅತ್ಯಂತ ಸಂತೋಷದ ವಿಚಾರವಾಗಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನವನ್ನು ಒದಗಿಸುವ ಮೂಲಕ ಗ್ರಾಮದ ಪ್ರತೀ ರಸ್ತೆಯೂ ಕಾಂಕ್ರೀಟೀಕರಣಗೊಳ್ಳುವುದರ ಜೊತೆಗೆ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕಿದೆ ಎಂದು ಹೇಳಿದರು.ಜನರನ್ನು ಸಂತೃಪ್ತಿ ಗೊಳಿಸುವುದೇ ಜನಪ್ರತಿನಿಧಿಯ ದೊಡ್ಡ ಸೇವೆಯಾಗಿದೆ ಎಂದು ಹೇಮನಾಥ ಶೆಟ್ಟಿ ಹೇಳಿದರು.
ಹೆಚ್ಚು ಅಭಿವೃದ್ದಿ; ರಮೇಶ್ ರೈ ಸಾಂತ್ಯ
ನೆಟ್ಟಣಿಗೆ ಮುಡ್ನೂರು ಜಿಪಂ ಕ್ಷೇತ್ರದಲ್ಲಿ ಅತೀ ಹೆಚ್ಚು ಅಭಿವೃದ್ದಿ ಕಾಮಗಾರಿಗಳು ನಡೆದಿದೆ. ದ ಕ ಜಿಲ್ಲೆಯಲ್ಲೇ ನೆಟ್ಟಣಿಗೆ ಮುಡ್ನೂರು ಪ್ರಥಮ ಸ್ಥಾನಿಯಾಗಿದೆ ಎಂದರೂ ತಪ್ಪಾಗುವುದಿಲ್ಲ ಆ ಮಟ್ಟದಲ್ಲಿ ಅಭಿವೃದ್ದಿ ಕಾರ್ಯ ನಡೆದಿರುವುದು ಸಂತಸದ ವಿಚಾರ ಎಂದು ಪುತ್ತೂರು -ಕಾವು ಲಯನ್ಸ್ ಕ್ಲಬ್ ನ ಅಧ್ಯಕ್ಷ ರಮೇಶ್ ರೈ ಸಾಂತ್ಯ ಹೇಳಿದರು. ಸಮಸ್ಯೆ ಇರುವ ಕಡೆಗಳನ್ನು ಗುರುತಿಸಿಕೊಂಡು ಅಲ್ಲಿಗೆ ಸೌಕರ್ಯಗಳನ್ನು ಕಲ್ಪಿಸಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಪ್ರತೀಯೊಬ್ಬ ಜನಪ್ರತಿನಿಧಿಗೂ ಅನಿತಾ ಹೇಮನಾಥ ಶೆಟ್ಟಿ ಮಾದರಿ ರಾಜಕಾರಣಿ, ಮಾದರಿ ಜನಪ್ರತಿನಿಧಿ ಎಂದು ಹೇಳಿದರು.
ಉದ್ಘಾಟನೆಗೊಂಡ ಕಾಮಗಾರಿಗಳು
* ಜಿಪಂ ಅನುದಾನದಿಂದ ಮಾಡ್ನೂರು ಗ್ರಾಮದ ತೋಟದಮೂಲೆ ಮಾರಿಯಮ್ಮ ದೇವಸ್ಥಾನದ ಅಂಗಣಕ್ಕೆ ಇಂಟರ್ಲಾಕ್ ಮತ್ತು ಶೌಚಾಲಯ ಹಾಗೂ ಸ್ನಾನಗೃಹದ ಉದ್ಘಾಟನೆ.
* ಜಿಪಂ ಅನುದನದಿಂದ ತೋಟದಮೂಲೆಯಲ್ಲಿ ಕುಡಿಯುವ ನೀರಿಗಾಗಿ ೨೫ ಸಾವಿರ ಲೀಟರ್ ನ ನೀರಿನ ಟ್ಯಾಂಕ್ ಉದ್ಘಾಟನೆ
* ಜಿಪಂ ಅನುದಾನದಿಂದ ಮಾಡ್ನೂರು ಗ್ರಾಮದ ಮುಂಡಕೊಚ್ಚಿಯಲ್ಲಿ ೧೮ ಲಕ್ಷ ರೂ ವೆಚ್ಚದಲ್ಲಿ ಕುಡಿಯುವ ನೀರಿನ ಓವರ್ಹೆಡ್ ಟ್ಯಾಂಕ್ ಮತ್ತು ಪಂಪ್ ಅಳವಡಿಕೆ ಉದ್ಘಾಟನೆ
*ಮುಂಡಕೊಚ್ಚಿಯಲ್ಲಿ ಸೋಲಾರ್ ದಾರಿದೀಪ
*ಮುಂಡಕೊಚ್ಚಿಯಲ್ಲಿ ಗ್ರಾಪಂನ 2 ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆ
*ಮುಂಡೋಳೆ ರಸ್ತೆಯಲ್ಲಿ ಗ್ರಾಪಂ ಅನುದಾನದಿಂದ ಹಾಕಿರುವ ದಾರಿದೀಪದ ಉದ್ಘಾಟನೆ
*ಮುಂಡೋಳೆ-ಕೆರೆಮಾರು ರಸ್ತೆಗೆ ಜಿಪಂ, ಹಾಗೂ ಗ್ರಾಪಂ ಅನುದಾನದಿಂದ ರಸ್ತೆ ಕಾಂಕ್ರಿಟೀಕರಣಕ್ಕೆ ಗುದ್ದಲಿಪೂಜೆ
*ಮುಂಡಕೊಚ್ಚಿಯಲ್ಲಿ ಗ್ರಾಪಂ ಅನುದಾನದಿಂದ ನಿರ್ಮಾಣವಾಗುವ ಮೋರಿಗೆ ಶಂಕುಸ್ಥಾಪನೆ

ಗ್ರಾಮಸ್ಥರಿಂದ ಸನ್ಮಾನ
ಮುಂಡಕೊಚ್ಚಿಯ ಜನತೆಯ ಬಹುಕಾಲದ ಬೇಡಿಕೆಯನ್ನು ಈಡೇರಿಸಿದ ಜಿಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಹಾಗೂ ಹೇಮನಾಥ ಶೆಟ್ಟಿ ದಂಪತಿಗಳನ್ನು ಗ್ರಾಮಸ್ಥರು ಸನ್ಮಾನಿಸಿದರು. ಶಾಲು ಹೊದಿಸಿ, ಫಲಪುಷ್ಪ ನೀಡಿ ಸನ್ಮಾನಿಸಿದರು. ಸನ್ಮಾನಿಸಿ ಮಾತನಾಡಿದ ಪ್ರಭಾಕರ ಪ್ರಭು ಹಾಗೂ ರಾಮಣ್ಣ ರವರು ಮುಂಢಕೊಚ್ಚಿಯ ಬಹುಕಾಲದ ಬೇಡಿಕೆ ಈ ಬಾರಿ ಈಡೇರಿದೆ , ನಮ್ಮ ವ್ಯಾಪ್ತಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿದ್ದೀರಿ. ಬರಡು ಭೂಮಿ , ಈ ಪ್ರದೇಶದಲ್ಲಿ ನೀರು ಇಲ್ಲ ಎಂದು ನೀರು ತಜ್ಞರು ಹೇಳಿದ್ದರು ಆದರೆ ಜಿಪಂನಿಂದ ಕೊಳವೆ ಬಾವಿಯನ್ನು ತೆಗೆದಗ ಅದರಲ್ಲಿ ೫ ಇಂಚು ನೀರು ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು. ಮುಂಡಕೊಚ್ಚಿಯಲ್ಲಿ ಟ್ಯಾಂಕ್ ನಿರ್ಮಾಣಕ್ಕೆ ಕಾರಣವಾದ ನಿಮಗೆ ನಾವೆಲ್ಲಾ ಕೃತಜ್ಞರು ಎಂದು ಹೇಳಿದರು.

ಬೇಡಿಕೆಗಳ ಮಹಾಪೂರ
ಅರಿಯಡ್ಕ ಹಾಗೂ ಮಾಡ್ನೂರು ಗ್ರಾಮಗಳಲ್ಲಿ ಇನ್ನೂ ಹಲವಾರು ಅಭಿವೃದ್ದಿ ಕಾಮಗಾರಿಗಳು ನಡೆಯಬೇಕಿದೆ. ಹಲವು ವರ್ಷಗಳಿಂದ ಬಾಕಿ ಇರುವ ಕಾಮಗಾರಿಗೆ ಅನುದಾನ ನೀಡುವಂತೆ ಗ್ರಾಮಸ್ಥರು ಜಿಪಂ ಸದಸ್ಯೆಯರಲ್ಲಿ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಅನಿತಾ ಹೇಮನಾಥ ಶೆಟ್ಟಿ ಗ್ರಾಮದ ಎಲ್ಲಾ ಜನರ ಬೇಡಿಕೆಯನ್ನು ಹಂತಹಂತವಾಗಿ ಈಡೇರಿಸಲಾಗುವುದು. ಇರುವ ಅನುದಾನವನ್ನು ಸಮಾನವಾಗಿ ಹಂಚಿ ತಾವು ಬೇಡಿಕೆ ಇಟ್ಟಿರುವ ರಸ್ತೆ ಗಳಿಗೆ ಕಾಂಕ್ರೀಟ್ ಮಾಡಿಕೊಡಲಾಗುವುದು. ನಿಮ್ಮ ಆಶೀರ್ವಾದ ಇರುವವರೆಗೆ ನಾನು ನಿಮ್ಮ ಸೇವೆಗೆ ಸದಾ ಬದ್ದಳು, ನನ್ನದು ರಾಜಕೀಯ ರಹಿತ ಅಭಿವೃದ್ದಿಯಾಗಿದೆ, ನಾನು ಎಂದಿಗೂ ಅಭಿವೃದ್ದಿಯಲ್ಲಿ ಇದುವರೆಗೂ ರಾಜಕೀಯ ಮಾಡಿಲ್ಲ. ಗ್ರಾಮಸ್ಥರ ಸಂತೃಪ್ತಿಯೇ ನನಗೆ ನೀವು ಪುರಸ್ಕಾರವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅರಿಯಡ್ಕ ಗ್ರಾಪಂ ಪಿಡಿಒ ಪದ್ಮಕುಮಾರಿ, ಪುತ್ತೂರು ಕಾವು ಲಯನ್ಸ್ ಕ್ಲಬ್ನ ಅಧ್ಯಕ್ಷ ರಮೇಶ್ ರೈ ಸಾಂತ್ಯ, ಕಾರ್ಯದರ್ಶಿ ಪವನ್ರಾಮ್, ಅರಿಯಡ್ಕ ಗ್ರಾಪಂ ಮಾಜಿ ಸದಸ್ಯರುಗಳಾದ ದಿವ್ಯನಾಥ ಶೆಟ್ಟಿ ಕಾವು, ಮೋನಪ್ಪ ಪೂಜಾರಿ ಕೆರೆಮಾರು, ಚಿತ್ರ, ನವೀನಾ ಬಿ ಡಿ, ನಿರ್ಮಲಾ, ಗೋಪಾಲ ಪಾಟಾಳಿ ಪಟ್ಟುಮೂಲೆ, ರವೀಂದ್ರಪೂಜರಿ ಮಂಜಕೊಟ್ಯ,ಪ್ರಭಾಕರ ಪ್ರಭು, ಸೀತಾರಾಮ ರೈ ಮುಂಡಕೊಚ್ಚಿ, ಸತೀಶ್, ಪ್ರವೀಣ್ ಮೇಲಿನಬಳ್ಲಿಕಾನ, ಗೋಪಾಲಕೃಷ್ಣ ಪಾಟಾಳಿ,ಸುರೇಶ್, ವಿಕ್ರಂ, ರಾಮಣ್ಣ, ಚನಿಯಪ್ಪ ನಾಯ್ಕ ಬಳ್ಲಿಕಾನ, ಶೀನಪ್ಪ ಮುಂಡಕೊಚ್ಚಿ, ರವಿ ಬಳ್ಲಿಕಾನ, ಕೊರಗಪ್ಪ ಬಳ್ಲಿಕಾನ, ಸುಲೋಚನಾ, ಪ್ರೇಮ ಬಳ್ಳಿಕಾನ, ಕೃಷ್ಣಪ್ಪ, ವಿಮಲಾ, ಸಂತೋಷ್ ಬಳ್ಲಿಕಾನ, ತೋಟದಮುಲೆಯವರಾದ ಬಾಬು, ಗಂಗಾಧರ, ರವಿ, ಐತಪ್ಪ, ಚೆನ್ನಪ್ಪ, ಐತಪ್ಪ, ಮುಧರ, ಬೈರ, ಭವ್ಯ, ಗುರು, ರಾಮಚಂದ್ರ, ಪ್ರಸದ್, ಬಾಬು, ಯತೀಂದ್ರ, ಪ್ರದೀಪ್, ಅಜಿತ್, ತೀರ್ಥಪ್ರಸಾದ್, ಭರತ್, ಪ್ರಸಾದ್, ಜಗದೀಶ, ಲೋಕೇಶ್, ಧರ್ಮ, ರಿತೇಶ್, ಐತಪ್ಪ, ಉಷಾ, ಕೆರೆಮೂಲೆ- ಮುಂಡೋಲೆ ಫಲಾನುಭವಿಗಳಾದ ಅರಿಯಡ್ಕ ಗ್ರಾಪಂ ಸದಸ್ಯೆ ಸರೋಜಿನಿ, ರವಿಪುಜಾರಿ, ಮಹಾಲಿಂಗ ನಾಯ್ಕ, ನಾರಾಯಣ ಕೆರೆಮರು, ರಾಧಾಕೃಷ್ಣ , ಸುಜಿತ್ ಕೆರೆಮಾರು, ಸುಜಿತ್ ಬಾಳೆಕೊಚ್ಚಿ, ನವೀನ ಕೆರೆಮಾರು ಸೇರಿದಂತೆ ಗ್ರಾಮದ ವಿವಿಧ ವಾರ್ಡುಗಳ ಫಲಾನುಭವಿಗಳು ಉಪಸ್ಥಿತರಿದ್ದರು. ಅರಿಯಡ್ಕ ಗ್ರಾಪಂ ಮಾಜಿ ಉಪಾಧ್ಯಕ್ಷ ಇಕ್ಬಾಲ್ ಹುಸೇನ್, ದಿನೇಶ್ ಪಾಣಾಜೆ ಕಾರ್ಯಕ್ರಮ ನಿರೂಪಿಸಿದರು. ಗ್ರಾಪಂ ಸದಸ್ಯ ಮೋನಪ್ಪ ಪೂಜಾರಿ ಕೆರೆಮಾರು ಕಾರ್ಯಕ್ರಮ ನಿರ್ವಹಿಸಿದರು.