- ೮.೮೯ ಲಕ್ಷ ರೂ.,ನಿವ್ವಳ ಲಾಭ; ಶೇ.೨೦ ಡಿವಿಡೆಂಟ್, ಲೀ.ಗೆ ರೂ.೧.೦೯ ಬೋನಸ್ ಘೋಷಣೆ
ಹಿರೇಬಂಡಾಡಿ: ಹಿರೇಬಂಡಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ ನ.೨೪ರಂದು ಹಿರೇಬಂಡಾಡಿ ಗ್ರಾ.ಪಂ.ಸಮುದಾಯ ಭವನದಲ್ಲಿ ನಡೆಯಿತು.
ಸಂಘದ ಅಧ್ಯಕ್ಷೆ ಚಂದ್ರಾವತಿ ಜಿ.,ಸಭೆಯ ಅಧ್ಯಕ್ಷತೆ ವಹಿಸಿದ್ದರು. ೨೦೧೯-೨೦ನೇ ಸಾಲಿನಲ್ಲಿ ಸಂಘವು ೫,೨೬,೭೩,೭೦೭ ರೂ.,ಗಳ ವ್ಯವಹಾರ ನಡೆಸಿದೆ. ಪಶು ಆಹಾರ ಮಾರಾಟದಿಂದ ೧೪,೪೯,೯೦೦ ರೂ.,ಹಾಗೂ ಲವಣ ಮಿಶ್ರಣದಿಂದ ೧,೧೬,೫೦ ರೂ.,ಆದಾಯ ಬಂದಿದೆ. ವರದಿ ಸಾಲಿನಲ್ಲಿ ೮,೮೯,೧೫೨ ರೂ.,ನಿವ್ವಳ ಲಾಭ ಬಂದಿದೆ. ಲಾಭಾಂಶದಲ್ಲಿ ಸಂಘದ ಸದಸ್ಯರಿಗೆ ಶೇ.೨೦ರಷ್ಟು ಡಿವಿಡೆಂಟ್ ಹಾಗೂ ಪ್ರತಿ ಲೀ.ಹಾಲಿಗೆ ರೂ., ೧.೦೯ ಬೋನಸ್ ನೀಡಲಾಗುವುದು ಎಂದು ಅಧ್ಯಕ್ಷೆ ಚಂದ್ರಾವತಿಯವರು ಹೇಳಿದರು. ಸಂಘದ ಸದಸ್ಯರ ಹಾಗೂ ಸಿಬ್ಬಂದಿಗಳ ಪ್ರೋತ್ಸಾಹದಿಂದ ಸಂಘವು ಪ್ರಗತಿಪಥದಲ್ಲಿ ಸಾಗುತ್ತಿದೆ. ಮುಂದಿನ ದಿನಗಳಲ್ಲಿ ಹಾಲು ಶೀಥಲೀಕರಣ ಘಟಕ ಪ್ರಾರಂಭಿಸಲಾಗುವುದು ಎಂದು ಹೇಳಿ ಸಹಕಾರ ಕೋರಿದರು. ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿಯವರು ಒಕ್ಕೂಟದಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.
ಗೌರವಾರ್ಪಣೆ:
ವರದಿ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ನೀಡಿದ ಕೂಸಪ್ಪ ಗೌಡ ಬಾರ್ಲ(ಪ್ರಥಮ), ಸಂಜೀವ ಮಠಂದೂರು (ದ್ವಿತೀಯ) ಹಾಗೂ ಪ್ರಸಾದ್ ಶೆಟ್ಟಿ ಪೆರಾಬೆ (ತೃತೀಯ)ಯವರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಅಲ್ಲದೇ ೯೦ ದಿನಕ್ಕಿಂತ ಹೆಚ್ಚು ಹಾಲು ಪೂರೈಸಿದ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಸಂಘದ ನಿರ್ದೇಶಕರಾದ ಕೊರಗಪ್ಪ ಗೌಡ, ಜನಾರ್ದನ ಪಿ., ಪದ್ಮನಾಭ ಪಿ., ಆದಿರಾಜ ಎಸ್., ಇಂದಿರಾ ಪಿ., ಕೇಶವ ಗೌಡ, ಡೀಕಯ್ಯ ಗೌಡ, ಲಕ್ಷ್ಮೀಶ, ಗಂಗಾಧರ, ಭವಾನಿ ಶೆಟ್ಟಿ, ಬಾಲಕೃಷ್ಣ ನಾಯ್ಕ್, ಮತ್ತಡಿ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ವಿಶಾಲಾಕ್ಷಿ ಹೆಚ್.,ವರದಿ ವಾಚಿಸಿದರು. ನಿರ್ದೇಶನ ಜನಾರ್ದನ ಅನಂತಿಮಾರು ಸ್ವಾಗತಿಸಿದರು. ಹಾಲು ಪರೀಕ್ಷಕ ಸತೀಶ್ ಜಾಲು, ಸಹಾಯಕಿ ಆಶಾ ಪಿ.,ಸಹಕರಿಸಿದರು. ಸಿಬ್ಬಂದಿ ಗಣೇಶ್ ಮಠಂದೂರು ಸಹಕರಿಸಿದರು.