ಪುತ್ತೂರು: ಮಂಗಳೂರಿನ ಅತ್ತಾವರದಲ್ಲಿ ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದ ಪುತ್ತೂರು ಸರ್ವೆ ಗ್ರಾಮದ ಸರ್ವೆದೋಳ ನಿವಾಸಿ ನಾರಾಯಣ ಪೂಜಾರಿ(೬೧ವ) ಅವರು ನ.24ರಂದು ಪುತ್ತೂರು ಮನೆಯಲ್ಲಿ ನಿಧನರಾದರು.
ಕಳೆದ ಎರಡು ವರ್ಷದ ಹಿಂದೆ ಪುತ್ತೂರು ಮೆಸ್ಕಾಂ ಪುತ್ತೂರು ಕಾರ್ಯನಿರ್ವಾಹಕ ಅಭಿಯಂತರಾಗಿದ್ದ ಅವರು ಅಧೀಕ್ಷಕ ಇಂಜಿನಿಯರ್ ಆಗಿ ಮುಂಭಡ್ತಿ ಹೊಂದಿ ಮಂಗಳೂರು ಅತ್ತಾವರಕ್ಕೆ ವರ್ಗಾವಣೆಗೊಂಡಿದ್ದರು. ಅಲ್ಲಿ ಅವರು ಏ.೩೦ರಂದು ಸೇವಾ ನಿವೃತ್ತಿ ಹೊಂದಿದ್ದರು. ನ.೨೪ರಂದು ಅವರು ಪುತ್ತೂರು ಮನೆಯಲ್ಲಿದ್ದ ವೇಳೆ ಹೃದಯಘಾತಕೀಡಾಗಿ ನಿಧನರಾಗಿದ್ದಾರೆ. ಮೃತರು ಪತ್ನಿ ಆಶಾಕಿರಣ, ಪುತ್ರಿ ನಿಹಾರಿಕ ಅವರನ್ನು ಅಗಲಿದ್ದಾರೆ.