ಪುತ್ತೂರು: ಸರಕಾರಿ ಮೆಡಿಕಲ್ ಕಾಲೇಜಿಗೆ ನಿಯುಕ್ತಿಗೊಳಿಸಿದ ಜಾಗವನ್ನು ಉಳಿಸಿಕೊಂಡು ಅಗತ್ಯ ಸೀ ಫ಼ುಡ್ ಪಾರ್ಕ್ ನ್ನೂ ಪುತ್ತೂರಿನಲ್ಲಿ ಉಳಿಸಿಕೊಳ್ಳುವಂತೆ ಪುತ್ತೂರು ವಾಣಿಜ್ಯ ಮತ್ತು ಕೈಕಾರಿಕಾ ಸಂಘದ ವತಿಯಿಂದ ಮನವಿ ಮಾಡಲಾಯಿತು.
ಪುತ್ತೂರಿನಲ್ಲಿ ಅಗತ್ಯ ಸರಕಾರಿ ಮೆಡಿಕಲ್ ಕಾಲೇಜಿಗೆ ಬನ್ನೂರು ಪ್ರದೇಶದಲ್ಲಿ 40 ಎಕರೆಯಷ್ಟು ಜಮೀನನ್ನು ನಿಯುಕ್ತಿಗೊಳಿದ್ದು ಎಲ್ಲರಿಗೂ ತಿಳಿದ ವಿಚಾರ, ಈ ನಡುವೆ ಪುತ್ತೂರಿನ ವ್ಯಾವಹಾರಿಕ ಮತ್ತು ಅಭಿವೃದ್ಧಿಯ ಪುತ್ತೂರಾಗಿ ನಿಯುಕ್ತಿಗೊಳಿಸಲು ಪುತ್ತೂರಿಗೆ ಸೀ ಫುಡ್ ಪಾರ್ಕ್ ನ್ನು ತರಿಸಿದ್ದು ಶ್ಲಾಘನೀಯ, ಇದರಿಂದಾಗಿ ಪುತ್ತೂರು ಇನ್ನಷ್ಟು ವ್ಯಾವಹಾರಿಕ ಕ್ಷೇತ್ರದಲ್ಲಿ ಬೆಳೆಯಲು ಅನುಗುಣವಾಗಲಿದೆ. ಇತ್ತೀಚಿಗಿನ ಬೆಳವಣಿಗೆಗೆ ಸಂಬಂದಿಸಿ ಸರಕಾರಿ ಮೆಡಿಕಲ್ ಕಾಲೇಜಿನ ಜಾಗವನ್ನು ಉಳಿಸಿಕೊಂಡು ಬೇರೆ ಕಡೆ ಸೀ ಫುಡ್ ಪಾರ್ಕ್ಗೆ ಸ್ಥಳ ನಿಯುಕ್ತಿಗೊಳಿಸಿ ಪುತ್ತೂರಿನಲ್ಲೇ ಸೀ ಫುಡ್ ಪಾರ್ಕ್ ಉಳಿಸುವಂತೆ ಅವರು ಮನವಿಯಲ್ಲಿ ತಿಳಿಸಿದರು. ವರ್ತಕ ಸಂಘದ ಅಧ್ಯಕ್ಷ ಜೇಮ್ಸ್ ಜೆ ಮಾಡ್ತಾ, ಪ್ರಧಾನ ಕಾರ್ಯದರ್ಶಿ ರಪೀಕ್ ದರ್ಬೆ, ಉಪಾದ್ಯಕ್ಷರಾದ ಸದಾನಂದ ಕೆ, ಕೋಶಾಧಿಕಾರಿ ಸಂತೋಷ್ ಶೆಟ್ಟಿ, ಮಾಜಿ ಅದ್ಯಕ್ಷರುಗಳಾದ ಕೇಶವ ಪೈ, ಸಾಮೆತ್ತಡ್ಕ ಗೋಪಾಲ ಕೃಷ್ಣ ಭಟ್, ಲೋಕೇಶ್ ಹೆಗ್ಡೆ, ಸುಂದರ ಗೌಡ ,ಸುರೇಂದ್ರ ಕಿಣಿ, ಸದಸ್ಯರಾದ ಮನೋಜ್ ಟಿ.ವಿ, ಎಂ.ಟಿ.ಜಯರಾಮ ಭಟ್, ಮಹಮ್ಮದ್ ಸಾಬ್, ಸುಧಾಕರ್ ಶೆಟ್ಟಿ, ಮೆನೆಜರ್ ಉಲ್ಲಾಸ್ ಪೈ ಉಪಸ್ತಿತರಿದ್ದರು.