ಪುತ್ತೂರು: ಇಲ್ಲಿನ ನಿರಾಲ ಬಾರಿನ ಬಳಿ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನವೊಂದು ಕಳವಾದ ಬಗ್ಗೆ ವರದಿಯಾಗಿದೆ.
ಚಾನೆಲ್ ಒಂದರ ವರದಿಗಾರ ಎಂದು ಹೇಳಿಕೊಳ್ಳುತ್ತಿರುವ ಪುತ್ತೂರು ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿರುವ ಅನೀಶ್ ಮರೀಲ್ ಎಂಬವರು ನ.23ರಂದು ರಾತ್ರಿ ಸುಮಾರು 10 ಗಂಟೆಯ ವೇಳೆಗೆ ನಿರಾಲ ಬಾರ್ನ ಬಳಿ ತನ್ನ ಹೀರೋ ಪ್ಲೆಜರ್ ಸ್ಕೂಟರ್ (ಕೆಎ.21.ಕೆ.20) ನಿಲ್ಲಿಸಿ ನಿರಾಲ ಬಾರ್ಗೆ ಹೋಗಿದ್ದರು. ಕೆಲವು ತಾಸಿನ ಬಳಿಕ ವಾಹನ ನಿಲ್ಲಿಸಿದ ಸ್ಥಳಕ್ಕೆ ಬಂದು ನೋಡಿದಾಗ ವಾಹನ ಕಳವಾಗಿರುವುದು ಬೆಳಕಿಗೆ ಬಂದಿದೆ. ಘಟನೆಯ ಕುರಿತು ಅವರು ಪೊಲೀಸರಿಗೆ ದೂರು ನೀಡಿರುವುದಿಲ್ಲ ಎಂದು ತಿಳಿದು ಬಂದಿದೆ. ಸ್ಕೂಟರ್ ಕಳವಾದರೂ ಪತ್ರಕರ್ತರಾಗಿಯೂ ಪೊಲೀಸರಿಗೆ ದೂರು ನೀಡದೇ ಇರುವುದು, ನಿಜವಾಗಿಯೂ ಕಳ್ಳತನವಾಗಿದೆಯೇ? ಅಥವಾ ಹಣ ಬಾಕಿ ಇಟ್ಟಿರುವುದರಿಂದ ಸಾಲಗಾರರು ಕೊಂಡು ಹೋಗಿದ್ದಾರೆಯೇ? ಎಂಬ ಹಲವು ಸಂಶಯಗಳಿಗೆ ಕಾರಣವಾಗಿದೆ.