ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಇಪ್ಪತ್ತನೆಯ ವಾರ್ಷಿಕದ ಅಂಗವಾಗಿ ಹಮ್ಮಿಕೊಂಡಿರುವ `ಮಾರ್ಕ್-20′ ಅಭಿಯಾನದ ಭಾಗವಾಗಿರುವ ಸ್ಮಾರ್ಟ್ ಕ್ಯಾಂಪಸ್ ಯೋಜನೆಯ ಶಿಲಾನ್ಯಾಸವನ್ನು ಸಂಸ್ಥೆಯ ಅಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ ಅವರು ನಿರ್ವಹಿಸಿದರು. ಸಂಸ್ಥೆಯ ರಸ್ತೆಗೆ ಹಾಗೂ ಅಂಗಳಕ್ಕೆ ಅಳವಡಿಸಿರುವ ಇಂಟರ್ ಲಾಕ್, ಪ್ರವೇಶ ಕವಾಟ, ಗೇಟ್, ಹಾಗೂ ಕ್ಯಾಂಪಸ್ ನವೀಕರಣದ ವಿವಿಧ ಯೋಜನೆಗಳನ್ನು ಹೊಂದಿರುವ ಸ್ಮಾರ್ಟ್ ಕ್ಯಾಂಪಸ್ ಇಪ್ಪತ್ತನೆಯ ವಾರ್ಷಿಕದ ಪ್ರಮುಖ ಕಾರ್ಯಕ್ರಮವಾಗಲಿದೆ ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.
ವಿದ್ಯಾಸಂಸ್ಥೆಯ ಪ್ರ.ಕಾರ್ಯದರ್ಶಿ ಡಾ. ಎಮ್ಮೆಸ್ಸೆಂ ಝೈನಿ ಕಾಮಿಲ್, ಕಾರ್ಯಾಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಕೋಶಾಧಿಕಾರಿ ಹಾಜಿ ಎಸ್.ಎಂ ಅಹ್ಮದ್ ಬಶೀರ್, ಸಹಕಾರ್ಯದರ್ಶಿ ಕರೀಂ ಹಾಜಿ ಚೆನ್ನಾರ್, ಸಂಚಾಲಕ ಅಡ್ವೊಕೇಟ್ ಶಾಕಿರ್ ಹಾಜಿ ಮಿತ್ತೂರು, ಸದಸ್ಯರಾದ ಬದ್ರುದ್ದೀನ್ ಹಾಜಿ ಅಳಕೆಮಜಲು ಉಪಸ್ಥಿತರಿದ್ದರು. ವಿದ್ಯಾಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಬಿ.ಕೆ ರಶೀದ್ ಸ್ವಾಗತಿಸಿ ವಂದಿಸಿದರು.