ಪುತ್ತೂರು: ಸರ್ವೆ ಗ್ರಾಮದ ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಕರುಣಾಕರ ಗೌಡ ಎಲಿಯ ಆಯ್ಕೆಯಾಗಿದ್ದಾರೆ. ನ.24ರಂದು ದೇವಸ್ಥಾನದಲ್ಲಿ ಆಡಳಿತಾಧಿಕಾರಿ ತುಳಸಿರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಸದಸ್ಯರುಗಳು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸದಸ್ಯರುಗಳಾಗಿ ಲಿಂಗಪ್ಪ ಎನ್. ನೇರೋಳ್ತಡ್ಕ, ಲಲಿತಾ ಎಚ್.ಎಲಿಯ, ಉಮಾವತಿ ಎಲಿಯ, ದಿನೇಶ್ ರಾವ್ ಸೊರಕೆ, ಅಶೋಕ್ ರೈ ಸೊರಕೆ, ರವಿ ರೈ ಮಠ, ಚಂದ್ರಹಾಸ ನಾಯ್ಕ್ ಸರ್ವೆ, ಮತ್ತು ಅರ್ಚಕ ನಾಗೇಶ ಕಣ್ಣಾರಾಯರವರುಗಳಾಗಿದ್ದಾರೆ.