ಪುತ್ತೂರು: ಚಿಕ್ಕಮಗಳೂರು ಜಿಲ್ಲೆಯ ಪವಿತ್ರ ಚಂದ್ರದ್ರೋಣ ಪರ್ವತದಲ್ಲಿರುವ ಶ್ರೀಗುರು ದತ್ತಾತ್ರೇಯ ಪೀಠದಲ್ಲಿ ಹಿಂದು ಅರ್ಚಕರ ನಿಯುಕ್ತಿ ಹಾಗೂ ತ್ರಿಕಾಲ ಪೂಜಾವ್ಯವಸ್ಥೆಗೆ ಆಗ್ರಹಿಸಿ ಈ ವರ್ಷದ ದತ್ತಜಯಂತಿ (29.12.2020)ಒಳಗಾಗಿ ಶ್ರೀಗುರು ದತ್ತಾತ್ರೇಯ ಪೀಠದ ಗುಹಾಂತರ ದೇವಾಲಯದಲ್ಲಿರುವ ಶ್ರೀಗುರು ದತ್ತಾತ್ರೇಯರ ಪಾದುಕೆಗಳಿಗೆ ತ್ರಿಕಾಲ ಪೂಜೆ ಕಾರ್ಯಗಳು ಹಿಂದುಗಳ ಪದ್ದತಿ ಪರಂಪರೆ ಹಾಗೂ ಶ್ರದ್ದಾ ಭಕ್ತಿಗಳಿಗನುಗುಣವಾಗಿ ನಡೆಯುವಂತೆ ಹಿಂದೂ ಅರ್ಚಕರನ್ನು ನೇಮಿಸಬೇಕೆಂದು ಆಗ್ರಹಿಸಿ ಮಾನ್ಯ ಮುಖ್ಯಮಂತ್ರಿಗಳಿಗೆ ಉಪ ತಹಸಿಲ್ದಾರರ ಮೂಲಕ ವಿಶ್ವ ಹಿಂದೂ ಪರಿಷತ್ ಬಜರಂಗದಳ ವಿಟ್ಲ ಪ್ರಖಂಡ ವತಿಯಿಂದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ವಿಟ್ಲ ಪ್ರಖಂಡ ಕಾರ್ಯಾಧ್ಯಕ್ಷ ಪದ್ಮನಾಭ ಕಟ್ಟೆ,ಪ್ರಖಂಡ ಕಾರ್ಯದರ್ಶಿ ಚರಣ್ ಕಾಪುಮಜಲು.ಬಜರಂಗದಳ ಪ್ರಖಂಡ ಸಹ ಸಂಚಾಲಕ್ ಚಂದ್ರಹಾಸ ಕನ್ಯಾನ,ಸಹ ಕಾರ್ಯದರ್ಶಿ ಮನೋಜ್ ಕಾಶೀಮಠ.ಪ್ರಮುಖರಾದ ಜಯಂತ ವಿಟ್ಲ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು