- ಧರ್ಮದೈವ ಧೂಮಾವತಿ, ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ
ಪುತ್ತೂರು: ಕುಂಜೂರು ಕುಟುಂಬದ ಶ್ರೀ ಧರ್ಮದೈವಗಳ ದೈವಸ್ಥಾನ ಹಾಗೂ ನೂತನ ತರವಾಡು ಮನೆಯ ಗೃಹಪ್ರವೇಶ ಮತ್ತು ಧರ್ಮದೈವ ಧೂಮಾವತಿ ಹಾಗೂ ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ನ.19ರಿಂದ 20ರ ವರೆಗೆ ಜರಗಿತು.
ದೈವಜ್ಞರಾದ ವಳಕುಂಜ ವೆಂಕಟ್ರಮಣ ಭಟ್ರ್ರ ಮಾರ್ಗದರ್ಶನದಲ್ಲಿ ವಾಸ್ತುಶಿಲ್ಪಿ ವೆಂಕಟರಮಣ ಆಚಾರ್ಯ ಮರ್ಕಂಜ ಇವರ ವಾಸ್ತುಶಿಲ್ಪದೊಂದಿಗೆ ವೇದಮೂರ್ತಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ್ ತಂತ್ರಿಯವರ ನೇತೃತ್ವದಲ್ಲಿ ಕುಂಜೂರು ಕುಟುಂಬದ ಶ್ರೀ ಧರ್ಮದೈವಗಳ ದೈವಸ್ಥಾನ ಹಾಗೂ ತರವಾಡು ಮನೆಯ ಗೃಹಪ್ರವೇಶ ಮತ್ತು ಧರ್ಮದೈವ ಧೂಮಾವತಿ ಹಾಗೂ ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ನೆರವೇರಿತು. ನೂರಾರು ಭಕ್ತರು ಈ ಧಾರ್ಮಿಕ ವಿಧಿಯಲ್ಲಿ ಪಾಲ್ಗೊಂಡು, ದೇವರ ಪ್ರಸಾದವನ್ನು ಸ್ವೀಕರಿಸಿದರು. ಕುಂಜೂರು ತರವಾಡು ಮನೆಯ ಯಜಮಾನರಾದ ಮೋಹನ ಪೂಜಾರಿ ಹಾಗೂ ಕುಟುಂಬಸ್ಥರು ಆಗಮಿಸಿದ ಭಕ್ತಾಧಿಗಳನ್ನು ಸ್ವಾಗತಿಸಿ, ಸತ್ಕರಿಸಿದರು.