ಪುತ್ತೂರು: ಕಾವು ಮೇಗಿನಪೇಟೆಯಲ್ಲಿ ಉಮ್ಮರ್ ಮಿನಾರ್ ಎಂಬವರ ನೂತನ ಮಿನಾರ್ ರೆಸಿಡೆನ್ಸ್ ಇದರ ಗೃಹ ಪ್ರವೇಶ ಕಾರ್ಯಕ್ರಮ ನ.16ರಂದು ನಡೆಯಿತು.
ನ.16ರಂದು ಬೆಳಿಗ್ಗೆ ಪುತ್ತೂರು ಕೇಂದ್ರ ಜುಮಾ ಮಸೀದಿ ಮುದರ್ರಿಸ್ ಸಯ್ಯದ್ ಅಹ್ಮದ್ ಪೂಕೋಯಾ ತಂಙಳ್ ದುವಾ ನೆರವೇರಿಸುವ ಮೂಲಕ ಗೃಹಪ್ರವೇಶ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಾಡನ್ನೂರು ನೂರುಲ್ಹುದಾ ಉಪಾಧ್ಯಕ್ಷ ಸಯ್ಯದ್ ಬುರ್ಹಾನ್ ಅಲಿ ತಂಙಳ್, ಮಾಡನ್ನೂರು ಕತೀಬ್ ಸಿರಾಜುದ್ದೀನ್ ಫೈಝಿ, ಮಾಡನ್ನೂರು ನೂರು ಹುದಾ ಅಕಾಡೆಮಿ ಪ್ರಾಂಶುಪಾಲರಾದ ಹನೀಫ್ ಹುದವಿ, ಕಾವು ಬದ್ರಿಯಾ ಜುಮಾ ಮಸೀದಿ ಖತೀಬ್ ಶುಕೂರ್ ದಾರಿಮಿ, ನೂರುಲ್ಹುದಾ ವ್ಯವಸ್ಥಾಪಕರಾದ ಖಲೀಲುರ್ರಹ್ಮಾನ್ ಅರ್ಷದಿ ಸೇರಿದಂತೆ ಅನೇಕ ಉಲಮಾಗಳು ಉಪಸ್ಥಿತರಿದ್ದರು.
ಮಾಜಿ ಸಚಿವ ರೈ ಭೇಟಿ:
ಗೃಹಪ್ರವೇಶ ಕಾರ್ಯಕ್ರಮಕ್ಕೆ ದಕ ಜಿಲ್ಲೆಯ ಮಾಜಿ ಉಸ್ತುವಾರಿ ಸಚಿವ ರಮಾನಾಥ ರೈ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಜಿಪಂ ಸದಸ್ಯ ಎಂ ಎಸ್ ಮಹಮ್ಮದ್, ಕಾವು ಪಂಚಲಿಂಗೇಶ್ವರ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಿವ್ಯನಾಥ ಶೆಟ್ಟಿ ಕಾವು, ಕಾವು ಬುಶ್ರಾ ಅಬ್ದುಲ್ ಅಝೀಝ್, ಮಾಡನ್ನೂರು ಮಸೀದಿ ಅಧ್ಯಕ್ಷ ಕೆ ಕೆ ಇಬ್ರಾಹಿಂ ಹಾಜಿ, ಕೈಗಾರಿಕಾ ಉದ್ಯಮಿ ಪುಷ್ಪಕ್ ಇಬ್ರಾಹಿಂ ಹಾಜಿ ಸೇರಿದಂತೆ ರಾಜಕೀಯ ಮುಖಂಡರು ಭಾಗವಹಿಸಿ ಶುಭ ಹಾರೈಸಿದರು. ಮನೆ ಮಾಲಕರಾದ ಉಮ್ಮರ್ ಮಿನಾರ್, ಮಕ್ಕಳಾದ ಫಾತಿಮತ್ ಸುಹೈನಾ, ಇಮ್ರಾನ್ ಕೈಸ್, ಅಬ್ದುಲ್ ಝಿಯಾದ್ ಅತಿಥಿಗಳನ್ನು ಸ್ವಾಗತಿಸಿದರು.