ಕಡಬ: ಕೊಯಿಲ ಗ್ರಾಮದ ಸಬಳೂರು ಅಯೋಧ್ಯಾನಗರ ಶ್ರೀ ರಾಮ ಭಜನಾ ಮಂಡಳಿಯ 2020-21ನೇ ಸಾಲಿನ ಅಧ್ಯಕ್ಷರಾಗಿ ಗಣೇಶ್ ಎರ್ಮಡ್ಕ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ನಾಗೇಶ್ ಕಡೆಂಬ್ಯಾಲು ಆಯ್ಕೆಯಾಗಿದ್ದಾರೆ.
ಭಜನಾ ಮಂದಿರದಲ್ಲಿ ನಿಕಟಪೂರ್ವ ಉಪಾಧ್ಯಕ್ಷ ರಾಮಯ್ಯ ಗೌಡ ಬುಡಲೂರು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ ಪರಮೇಶ್ವರ ಎಸ್. ಸಬಳೂರು, ಉಪಾಧ್ಯಕ್ಷರಾಗಿ ಕೇಶವ ಗೌಡ ಮರಿಕೆ, ಯತೀನ್ ಪಟ್ಟೆದಮೂಲೆ, ಕೋಶಾಧಿಕಾರಿಯಾಗಿ ಚಿದಾನಂದ ಪಾನ್ಯಾಲು, ಜೊತೆ ಕಾರ್ಯದರ್ಶಿಯಾಗಿ ಉಮೇಶ ಸಂಕೇಶ, ಗೌರವ ಸಲಹೆಗಾರರಾಗಿ ರಾಜೀವ ಗೌಡ ಪಟ್ಟೆದಮೂಲೆ, ರಾಮಯ್ಯ ಗೌಡ ಬುಡಲೂರು, ಕೆ.ಎಸ್. ಬಾಲಕೃಷ್ಣ ಕೊಲ್ಯ, ಪ್ರಶಾಂತ್ ಕೊಲ್ಯ ಆಯ್ಕೆಯಾಗಿದ್ದಾರೆ. ಮಾಜಿ ಅಧ್ಯಕ್ಷ ರಾಮಚಂದ್ರ ನಾಯ್ಕ ಸ್ವಾಗತಿಸಿ, ವಂದಿಸಿದರು.