ಕಡಬ: ಚಿಕ್ಕಮಗಳೂರು ಜಿಲ್ಲೆಯ ಚಂದ್ರದ್ರೋಣ ಪರ್ವತದಲ್ಲಿರುವ ಶ್ರೀಗುರು ದತ್ತಾತ್ರೇಯ ಪೀಠದಲ್ಲಿ ಹಿಂದೂ ಅರ್ಚಕರ ನಿಯುಕ್ತಿ ಹಾಗೂ ತ್ರಿಕಾಲ ಪೂಜಾ ವ್ಯವಸ್ಥೆಗೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಡಬ ಪ್ರಖಂಡ ವತಿಯಿಂದ ಕಡಬ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಚಿಕ್ಕಮಗಳೂರು ಜಿಲ್ಲೆ ಜಾಗರಾ ಹೋಬಳಿ ಸ.ನಂ.195ರಲ್ಲಿ ಇನಾಂ ದತ್ತಾತ್ರೇಯ ಪೀಠ ಕ್ಷೇತ್ರದಲ್ಲಿರುವ ಶ್ರೀಗುರು ದತ್ತಾತ್ರೇಯರ ಪಾದುಕೆಗಳುಳ್ಳ ಗುಹಾಂತರದಲ್ಲಿಯ ಇತಿಹಾಸ ಪ್ರಸಿದ್ದವಾದ, ಪೌರಾಣಿಕ ಹಿನ್ನೆಲೆಯಿಂದ ಕೂಡಿದ ಸಮಸ್ತ ಹಿಂದು ಸಮಾಜದ ಶ್ರದ್ದಾ ಭಕ್ತಿಯ ಕೇಂದ್ರವಾಗಿದ್ದು, ಈ ಪೀಠ ಶ್ರೀಗುರು ದತ್ತಾತ್ರೇಯ ಪೀಠ ಎಂದೇ ಪ್ರಸಿದ್ಧವಾಗಿದೆ.
ಇದು ಸಂಪೂರ್ಣ ಹಿಂದು ದೇವಲಯವಾಗಿದ್ದು, ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯ ವ್ಯವಸ್ಥೆಗೆ ಒಳಪಟ್ಟಿದ್ದು, ಅಧಿಕೃತ ಸರ್ಕಾರಿ ದಾಖಲೆಗಲು ಕೂಡ ಇನಾಂ ದತ್ತಾತ್ರೇಯ ಪೀಠ ಎಂದೇ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ. ಶೀಗುರುದತ್ತಾತ್ರೇಯ ಪೀಠದಲ್ಲಿ ಗುಹಾಂತರ ದೇವಾಲಯದಲ್ಲಿ ಹಿಂದೂ ದೇವರಲ್ಲಿ ನಂಬಿಕೆಯೇ ಇಲ್ಲದ ಹಿಂದು ಪೂಜಾ ಪದ್ದತಿಯನ್ನು ಒಪ್ಪದ ಮುಜಾವರ್ (ಮುಸ್ಲಿಂ ಅರ್ಚಕ) ರನ್ನು ನೇಮಿಸಿರುವುದು ಸಮಸ್ತ ಹಿಂದೂಗಳ ಭಕ್ತಿ, ಶ್ರದ್ದೆ ಹಾಗೂ ಭಾವನೆಗಳಿಗೆ ತೀವ್ರವಾದ ಆಘಾತ ಹಾಗೂ ಧಕ್ಕೆ ತರುವ ವಿಷಯವಾಗಿದೆ. ಅಲ್ಲಿಗೆ ಬರುವ ಭಕ್ತಾದಿಗಳಿಗೆ ಪಾದುಕೆ, ಪೂಜೆ, ಪುನಸ್ಕಾರ ಆರತಿ ಯಾವುದೂ ದೊರಕದೆ ಮನನೊಂದು ಅಪಮಾನಿತರಾಗಿ ಹಿಂತಿರುಗುವ ಪರಿಸ್ಥಿತಿ ಪ್ರತಿನಿತ್ಯ ಜರುಗುತ್ತಿದೆ. ಆದುದರಿಂದ ವಿಶೇಷ ಅಸಕ್ತಿ ವಹಿಸಿ ಈ ವರ್ಷದ ದತ್ತ ಜಯಂತಿ (29.12.2020)ಒಳಗಾಗಿ ಶ್ರೀಗುರು ದತ್ತಾತ್ರೇಯ ಪೀಠದ ಗುಹಾಂತರ ದೇವಾಲಯದಲ್ಲಿರುವ ಶ್ರೀಗುರು ದತ್ತಾತ್ರೇಯರ ಪಾದುಕೆಗಳಿಗೆ ತ್ರಿಕಾಲ ಪೂಜೆ ಕಾರ್ಯಗಳು ಹಿಂದುಗಳ ಪದ್ದತಿ ಪರಂಪರೆ ಹಾಗೂ ಶ್ರದ್ದಾ ಭಕ್ತಿ ಗಳಿಗನುಗುಣವಾಗಿ ನಡೆಯುವಂತೆ ಹಿಂದೂ ಅರ್ಚಕರನ್ನು ನೇಮಿಸಬೇಕೆಂದು ಆಗ್ರಹಿಸಿ ಕಡಬ ತಹಸೀಲ್ದಾರ್ ಮೂಲಕ ಮುಖ್ಯ ಮಂತ್ರಿಗಳಿಗೆ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಡಬ ಪ್ರಖಂಡ ವತಿಯಿಂದ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಕಡಬ ಪ್ರಖಂಡ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ, ಮಾಜಿ ಅಧ್ಯಕ್ಷ ವಾಸುದೇವ ಗೌಡ ಕೊಲ್ಲೆಸಾಗು, ಉಪಾಧ್ಯಕ್ಷ ಸುರೇಶ್ ಎನ್ ಕೋಟೆಗುಡ್ಡೆ, ಸಂತೋಷ್ ಕುಮಾರ್ ಕೋಡಿಬೈಲು, ಕಾರ್ಯದರ್ಶಿ ಪ್ರಮೋದ್ ರೈ ನಂದುಗುರಿ, ಬಜರಂಗದಳ ಕಡಬ ಪ್ರಖಂಡ ಸಹ ಸಂಯೋಜಕ ಯತೀಶ್ ಹೊಸಮನೆ ಬಜರಂಗದಳ ಸುರಕ್ಷಾ ಪ್ರಮುಖ್ ಜಯಂತ ಕಲ್ಲುಗುಡ್ಡೆ ಪ್ರಮುಖರಾದ ಮೋನಪ್ಪ ಗೌಡ ನಾಡೋಳಿ ಜಯರಾಮ ಪಡೆಜ್ಜಾರು, ದಕ್ಷತ್ ಕಡಬ ಮೊದಲಾದವರು ಉಪಸ್ಥಿತರಿದ್ದರು.