ಪುತ್ತೂರು: ಎರಡು ದಿನಗಳು ನಡೆದ ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಮತ್ತು ನಗರ ಮಂಡಲದ ಬಿಜೆಪಿ ಪ್ರಶಿಕ್ಷಣ ವರ್ಗದ ಸಮಾರೋಪ ಸನಾರೋಪ ಸಮಾರಂಭ ನ.25ರಂದು ನಡೆಯಿತು.
ಕೆಮ್ಮಾಯಿ ಶ್ರೀ ಮಹಾವಿಷ್ಣು ಮಂಟಪದಲ್ಲಿ ಗ್ರಾಮಾಂತರ ಮಂಡಲ ಮತ್ತು ಕಲ್ಲೇಗ ಭಾರತ್ ಮಾತಾ ಸಮುದಾಯ ಭವನದಲ್ಲಿ ನಗರ ಮಂಡಲದ ಪ್ರಶಿಕ್ಷಣ ವರ್ಗ ನಡೆಯಿತು. ಗ್ರಾಮಾಂತರ ಮಂಡಲದ ಪ್ರಶಿಕ್ಷಣ ವರ್ಗದ ಸಮಾರೋಪ ಭಾಷಣವನ್ನು ಮಂಗಳೂರು ವಿಭಾಗದ ಸಂಘಟನಾ ಕಾರ್ಯದರ್ಶಿ ಪ್ರಸಾದ್ ಕುಮಾರ್ ಬೆಳ್ತಂಗಡಿ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷ ಸಾಜ ರಾಧಾಕ್ರಷ್ಣ ಆಳ್ವ, ಪ್ರಶಿಕ್ಷಣ ಪ್ರಕೋಷ್ಠದ ಸಂಚಾಲಕ ತಾ.ಪಂ ಅಧ್ಯಕ್ಷ ರಾಧಾಕ್ರಷ್ಣ ಬೋರ್ಕರ್, ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ನಿತೀಶ್ ಶಾಂತಿವನ ಉಪಸ್ಥಿತರಿದ್ದರು.
ನಗರಮಂಡಲದ ಪ್ರಶಿಕ್ಷಣ ವರ್ಗದ ಸಮಾರೋಪ ಭಾಷಣವನ್ನು ಬಿಜೆಪಿ ಪುತ್ತೂರು ನಗರ ಮಂಡಲ ಪ್ರಶಿಕ್ಷಣ ವರ್ಗ ಸಮಾರೋಪ ಸಮಾರಂಭ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಮಾಡಿದರು. ಶಾಸಕ ಸಂಜೀವ ಮಟಂದೂರು, ಬಿಜೆಪಿ ಪುತ್ತೂರು ನಗರ ಮಂಡಲದ ಅಧ್ಯಕ್ಷ ಪಿ. ಜಿ ಜಗನ್ನಿವಾಸ ರಾವ್, ಪುತ್ತೂರು ನಗರಸಭಾ ಅಧ್ಯಕ್ಷ ಜೀವಂದರ್ ಜೈನ್, ಪ್ರಶಿಕ್ಷಣ ಸಂಚಾಲಕ ರಾಮದಾಸ ಹಾರಾಡಿ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.