HomePage_Banner
HomePage_Banner
HomePage_Banner
HomePage_Banner

ವೈಜ್ಞಾನಿಕ, ಧಾರ್ಮಿಕ ಹಿನ್ನೆಲೆಯುಳ್ಳ ತುಳಸಿ ಗಿಡ | ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ತುಳಸಿ ಪೂಜೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ವೈಜ್ಞಾನಿಕವಾಗಿಯೂ, ಧಾರ್ಮಿಕ ಹಿನ್ನಲೆಯಲ್ಲೂ ತುಳಸಿ ಗಿಡ ಮಹತ್ವ ಪಡೆದಿದೆ. ಹಿಂದೂ ಸಂಪ್ರದಾಯದಂತೆ ತುಳಸಿ ಗಿಡವನ್ನು ದರ್ಶನ ಮಾಡಿದವರ ದೇಹ ಪಾವನ ಆಗುತ್ತದೆ ಎಂಬಂತೆ ಕಾರ್ತಿಕ ತಿಂಗಳ ಶುಕ್ಲ ಪಕ್ಷದಂದು ತುಳಸಿ ಹಬ್ಬ ಆಚರಿಸಲಾಗುತ್ತದೆ. ತುಳಸಿಗೆ ಈ ದಿನ ವಿವಾಹವಾಯಿತೆಂಬ ನಂಬಿಕೆಯಿದೆ. ವಿಷ್ಣುವನ್ನು ಮೆಚ್ಚಿಸಲು ಈ ದಿನವನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ.

ತುಳಸಿ ಪೂಜೆ ಮಹಾಲಿಂಗೇಶ್ವರ ದೇವಸ್ಥಾನ

ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನ.26ರಂದು ಬೆಳಿಗ್ಗೆ ತುಳಸಿ ಪೂಜೆ ನಡೆಯಿತು. ದೇವಳದ ಬೆಳಗ್ಗಿನ ಪೂಜೆ, ನಿತ್ಯ ಬಲಿ ಉತ್ಸವದ ಬಳಿಕ ದೇವಳದ ಒಳಾಂಗಣದಲ್ಲಿರುವ ಮಾವಿನ ಎಲೆ ಮತ್ತು ಹೂವಿನಿಂದ ಅಲಂಕೃತಗೊಂಡ ತುಳಸಿ ಕಟ್ಟೆಯಲ್ಲಿ ದೇವಳದ ಪ್ರಧಾನ ಅರ್ಚಕ ವಸಂತ ಕುಮಾರ್ ಕೆದಿಲಾಯ ಅವರ ನೇತೃತ್ವದಲ್ಲಿ ತುಳಸಿ ಪೂಜೆ ನಡೆಯಿತು. ತುಳಸಿಗೆ ಹಾಲು, ಪಂಚಾಮೃತ ಅಭಿಷೇಕ, ಸುವಸ್ತುಗಳ ಸಮರ್ಪಣೆ ಮಾಡಿ ಪೂಜೆ ಮಾಡಲಾಯಿತು. ಈ ಸಂದರ್ಭದಲ್ಲಿ ದೇವಳದ ಭಕ್ತರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.