HomePage_Banner
HomePage_Banner
HomePage_Banner
HomePage_Banner

ದ್ವಿಚಕ್ರ ವಾಹನ ಶೋ ರೂಮ್‌ಗೆ ಅಕ್ರಮ ಪ್ರವೇಶಿಸಿ ಮಾಜಿ ನೌಕರನ ದಾಂಧಲೆ ಆರೋಪ | ಮಾತಿನ ಚಕಮಕಿ, ತಳ್ಳಾಟದಲ್ಲಿ ಇಬ್ಬರಿಗೆ ಗಾಯ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇಲ್ಲಿನ ಪ್ರತಿಷ್ಠಿತ ದ್ವಿಚಕ್ರ ವಾಹನ ಶೋ ರೂಮ್‌ವೊಂದಕ್ಕೆ ಮಾಜಿ ನೌಕರರೋರ್ವರು ಅಕ್ರಮವಾಗಿ ಪ್ರವೇಶಿಸಿ ದಾಂಧಲೆ ನಡೆಸಿ ಗಾಜಿಗೆ ಹಾನಿ ಮಾಡಿರುವ ಆರೋಪ ವ್ಯಕ್ತವಾಗಿದೆ. ಈ ವೇಳೆ ನಡೆದ ಮಾತಿನ ಚಕಮಕಿ, ತಳ್ಳಾಟದಲ್ಲಿ ಇಬ್ಬರು ಗಾಯಗೊಂಡಿರುವುದಾಗಿ ವರದಿಯಾಗಿದೆ.


ನ.25ರಂದು ಸಂಜೆ ಈ ಘಟನೆ ನಡೆದಿದ್ದು ದ್ವಿಚಕ್ರ ವಾಹನ ಶೋ ರೂಮ್‌ನ ಮಾಲಕ ಎನ್.ಕೃಷ್ಣಕಿಶೋರ್‌ರವರ ಪುತ್ರ ಅಖಿಲೇಶ್(28ವ.) ಹಾಗೂ ಮಾಜಿ ನೌಕರ ಪುತ್ತೂರು ಕಸಬಾ ನಿವಾಸಿ ರಂಜನ್(26ವ.)ಗಾಯಗೊಂಡವರಾಗಿದ್ದಾರೆ. ಈ ಪೈಕಿ ಅಖಿಲೇಶ್‌ರವರ ಬೆನ್ನಿಗೆ ಗಾಜಿನ ತುಂಡು ಒಳಹೊಕ್ಕಿದ್ದು ಅವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ರಂಜನ್‌ರವರ ಕೈ ಮತ್ತು ಕುತ್ತಿಗೆಯ ಭಾಗಕ್ಕೆ ಗಾಯವಾಗಿದ್ದು ಅವರೂ ಸಹ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೊಂಡಿದ್ದಾರೆ.

ಅಕ್ರಮ ಪ್ರವೇಶಿಸಿ ದಾಂಧಲೆ: ಘಟನೆ ಕುರಿತಂತೆ ‘ಸುದ್ದಿ’ಗೆ ಪ್ರತಿಕ್ರಿಯೆ ನೀಡಿರುವ ಗಾಯಾಳು ಅಖಿಲೇಶ್‌ರವರು ನಮ್ಮ ಸಂಸ್ಥೆಗೆ ರಾಜೀನಾಮೆ ನೀಡಿದ ರಂಜನ್ ಎಂಬವರು ಶೋ ರೂಮ್‌ಗೆ ಅಕ್ರಮವಾಗಿ ಪ್ರವೇಶಿಸಿ ಸಂಸ್ಥೆಯ ಹೆಚ್.ಆರ್ ಗಿರೀಶ್ ಅವರನ್ನು ಅವಾಚ್ಯವಾಗಿ ನಿಂದಿಸಿದ್ದಲ್ಲದೆ ಕ್ಯಾಬೀನ್‌ನಲ್ಲಿದ್ದ ನನ್ನ ತಂದೆ ಕೃಷ್ಣಕಿಶೋರ್‌ರವರನ್ನೂ ಅವಾಚ್ಯವಾಗಿ ನಿಂದಿಸಿ ಹಲ್ಲೆಗೆ ಯತ್ನಿಸಿದ್ದರು. ಇದೇ ವೇಳೆ ನಾನು ಅಲ್ಲಿಗೆ ಹೋಗಿ ವಿಚಾರಿಸಿದಾಗ ನನ್ನನ್ನು ಕ್ಯಾಬೀನ್‌ನಲ್ಲಿದ್ದ ಪಾರ್ಟಿಷಿಯನ್ ಗ್ಲಾಸ್‌ಗೆ ದೂಡಿ ಹಾಕಿದ್ದಾರೆ. ಅವರು ದೂಡಿದ ರಭಸಕ್ಕೆ ಗಾಜು ಹುಡಿಯಾಗಿ ಬೆನ್ನಿಗೆ ಗಾಜಿನ ತುಂಡು ಸಿಕ್ಕಿ ಗಾಯವಾಗಿದೆ ಎಂದು ತಿಳಿಸಿದ್ದಾರೆ. ರಂಜನ್‌ರವರು ರಾಜೀನಾಮೆ ಪತ್ರ ಕೊಟ್ಟಿದ್ದು, ಅವರ ಸ್ಯಾಲರಿಯನ್ನು ಕ್ಲಿಯರ್ ಮಾಡಿದ್ದೇವೆ. ಅವರ ಪಿಎಫ್‌ಗೆ ಸಂಬಂಧಿಸಿದಂತೆ ನಮ್ಮ ಹೆಚ್.ಆರ್. ಅವರಲ್ಲಿ ಡಿಜಿಟಲ್ ಕೀ ಇದ್ದು ಅದು ಅಡಿಟ್‌ಗೆ ಮಂಗಳೂರಿಗೆ ಹೋಗಿದ್ದ ಹಿನ್ನೆಲೆಯಲ್ಲಿ ಪಿಎಫ್‌ಗೆ ಅಪ್ರೂವ್ ಮಾಡಲು ಆಗುತ್ತಿರಲಿಲ್ಲ. ಆದರೆ ಈ ವಿಚಾರವನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ರಂಜನ್ ಅವರು ಏಕಾಏಕಿ ಸಂಸ್ಥೆಗೆ ಅಕ್ರಮವಾಗಿ ಪ್ರವೇಶಿಸಿ ದಾಂಧಲೆ ನಡೆಸಿದ್ದಾರೆ ಎಂದು ಅಖಿಲೇಶ್‌ರವರು ಮಾಹಿತಿ ನೀಡಿದ್ದಾರೆ.

ಸಂಸ್ಥೆಯ ಗಾಜಿನ ಹಾನಿಯಾಗಿರುವುದು

ಪಿಎಫ್ ಕೇಳಿದಕ್ಕೆ ಹಲ್ಲೆ: ಸರಕಾರಿ ಅಸ್ಪತ್ರೆಯಲ್ಲಿ ದಾಖಲಾಗಿರುವ ಪುತ್ತೂರು ಕಸಬಾ ನಿವಾಸಿ ರಂಜನ್(26ವ.)ರವರು ಪ್ರತಿಕ್ರಿಯಿಸಿ, ನಾನು ಮೂರು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದೇನೆ. ಆದರೆ ನನಗೆ ಸೇರಬೇಕಾದ ಪಿಎಫ್ ಹಣವನ್ನು ನೀಡಲು ಸಂಸ್ಥೆಯವರು ಸತಾಯಿಸುತ್ತಿದ್ದಾರೆ. ಪಿಎಫ್ ಅಪ್ರೂವಲ್‌ಗಾಗಿ ಎರಡು ಮೂರು ಸಲ ಪದೇ ಪದೇ ಅಲೆದಾಡಿದ್ದೇನೆ. ಆದರೆ ಅವರು ನಿರ್ಲಕ್ಷ್ಯ ತೋರುತ್ತಿದ್ದರು. ಇವತ್ತು ಕೂಡಾ ನಾನು ಹಾಗೂ ನನ್ನ ಸಹೋದರ ಸಂಜಯ್ ಸಂಸ್ಥೆಗೆ ಹೋಗಿದ್ದೆವು. ಅಲ್ಲಿ ನನ್ನ ಮೇಲೆ ಸಂಸ್ಥೆಯ ಮಾಲಕರು ಮತ್ತು ಸಿಬ್ಬಂದಿಗಳು ಸೇರಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಘಟನೆಗೆ ಸಂಬಂಧಿಸಿ ಇತ್ತಂಡದವರು ಪೊಲೀಸರಿಗೆ ದೂರು ನೀಡಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.