ಪುತ್ತೂರು: ಸ್ಪೆಷಲ್ ಕೇಕ್ ಹಾಗೂ ಜ್ಯೂಸ್ ಮಳಿಗೆ ಮಾಸ್ಟರ್ ಬೇಕ್ ನ.26ರಂದು ದರ್ಬೆ ಪ್ರಶಾಂತ್ ಮಹಲ್ ನ ನೆಲಮಹಡಿಯಲ್ಲಿ ಶುಭಾರಂಭಗೊಂಡಿತು.
ನೂತನ ಸಂಸ್ಥೆಯನ್ನು ಪ್ರಶಾಂತ್ ಮಹಲ್ ನ ಮ್ಹಾಲಕರು, ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸೀತಾರಾಮ ರೈ ಹಾಗೂ ಸಿವಿಲ್ ಇಂಜಿನಿಯರ್ ವಿನ್ಯಾಸ್ ಕನ್ ಸ್ಟ್ರಕ್ಷನ್ ಕಿಶೋರ್ ಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಸವಣೂರು ಸೀತಾರಾಮ ರೈಯವರು, ಬೇಕರಿಯಲ್ಲಿ ಅತೀ ದೊಡ್ಡ ಸಂಸ್ಥೆಯಾಗಿ ಮಾಸ್ಟರ್ ಬೇಕ್ ದರ್ಬೆಯಲ್ಲಿ ಶುಭಾರಂಭಗೊಂಡಿದೆ. ಇದರ ಮೂಲಕ ಪುತ್ತೂರಿನ ಜನತೆಗೆ ಉತ್ತಮ ಸೇವೆಗಳ ಮೂಲಕ ಪುತ್ತೂರು ಮಾತ್ರವಲ್ಲದೆ ಇತರ ಕಡೆಗಳಿಗೂ ಜನತೆಗೂ ಆಕರ್ಷಿಸುವಂತಾಗಲಿ ಎಂದರು.
ಉದ್ಯಮಿ, ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಜಯಂತ ನಡುಬೈಲು ಮಾತನಾಡಿ, ಯುವಕರು ಉದ್ಯೋಗವನ್ನು ಅರಸದೆ ಸ್ವ ಉದ್ಯೋಗವನ್ನು ಪ್ರಾರಂಭಿಸುವ ಮೂಲಕ ಮಾದರಿಯಾಗಿದ್ದಾರೆ. ಬೆಳೆಯುತ್ತಿರುವ ಪುತ್ತೂರಿಗೆ ಇಂತಹ ಉದ್ಯಮಗಳು ಪೂರಕವಾಗಿದೆ.ಕೇಕ್ ತಯಾರಿಕೆಯಲ್ಲಿ ವಿಶೇಷ ಪರಿಣತಿ ಪಡೆದ ಪುತ್ತೂರಿನ ಜನತೆಗೆ ಸೇವೆ ನೀಡಲು ಮುಂದಾಗಿದ್ದು ಇನ್ನಷ್ಟು ಶಾಖೆಗಳು ತೆರೆಯುವಂತಾಗಲಿ ಎಂದು ಹಾರೈಸಿದರು.
ಪಾಲುದಾರರಾದ ರಾಜೇಶ್ ಹಾಗೂ ದಿನೇಶ್ ಅತಿಥಿಗಳನ್ನು ಸ್ವಾಗತಿಸಿ, ಸತ್ಕರಿಸಿದರು. ನಮ್ಮಲ್ಲಿ ಪ್ರೆಶ್ ಜ್ಯೂಸ್ ಹಾಗೂಎಲ್ಲಾ ರೀತಿಯ ಸ್ಪೆಷಲ್ ಕೇಕ್ ಗಳು, ಗ್ರಾಹಕರ ಬೇಡಿಕೆಯಂತೆ 10 ನಿಮಿಷದಲ್ಲಿ ವಿಭಿನ್ನ ಶೈಲಿಯಲ್ಲಿ ಕೇಕ್ ಗಳನ್ನು ಸಿದ್ದಪಡಿಸಿಕೊಡಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.