ಪುತ್ತೂರು: ಪಡ್ನೂರು ಗ್ರಾಮದ ಯರ್ಮುಂಜದಲ್ಲಿ ಧರ್ಮದೈವ ರುದ್ರಚಾಮುಂಡಿ, ಪಿಲಿಚಾಮುಂಡಿ ಮತ್ತು ಪರಿವಾರ ದೈವಗಳ ನವೀಕರಣಗೊಂಡ ಚಾವಡಿಯಲ್ಲಿ ಧರ್ಮದೈವ ಮತ್ತು ಪರಿವಾರ ದೈವಗಳ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವವು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನ.26ರಂದು ಜರಗಿತು.
ಬೆಳಿಗ್ಗೆ ಮಹಾಗಣಪತಿ ಹೋಮ, ಬ್ರಹ್ಮಕಲಶ ಪೂಜೆ ನಡೆದು ಬೆಳಿಗ್ಗೆ 8.48 ರಿಂದ 10.10 ರ ಧನು ಲಗ್ನದ ಶುಭಮುಹೂರ್ತದಲ್ಲಿ ಧರ್ಮದೈವ ಮತ್ತು ಪರಿವಾರ ದೈವಗಳ ಪ್ರತಿಷ್ಠೆ ನಡೆದು ಬ್ರಹ್ಮಕಲಶಾಭಿಷೇಕ ನಡೆದು ತಂಬಿಲ ಸೇವೆ, ಮಂಗಳಾರತಿ, ಪ್ರಸಾದ ನಡೆಯಿತು. ಯರ್ಮುಂಜ ಕುಟುಂಬಸ್ಥರು ಸೇರಿದಂತೆ ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹೊನ್ನಪ್ಪ ಗೌಡ ಯಮುಂಜರವರು ಭಕ್ತಾಧಿಗಳನ್ನು ಸ್ವಾಗತಿಸಿ,ಪ್ರಸಾದ ನೀಡಿ ಸತ್ಕರಿಸಿದರು.