HomePage_Banner
HomePage_Banner
HomePage_Banner
HomePage_Banner

ಬಡಗನ್ನೂರು: ಹನುಮಗಿರಿ- ಬಡಗನ್ನೂರು-ನಿಡ್ಪಳ್ಳಿ ಶಾಂತಾದುರ್ಗಾ ದೇವಾಲಯದ ಸಂರ್ಕ ರಸ್ತೆ ಅಭಿವೃದ್ಧಿಗೆ 7.53 ಕೋಟಿ ಅನುದಾನ ಶಂಕುಸ್ಥಾಪನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
ಬಡಗನ್ನೂರುಃ ಗ್ರಾಮದ ಅಭಿವೃದ್ಧಿಯಿಂದ ರಾಷ್ಟ್ರದ ಅಭಿವೃದ್ಧಿ ಸಾಧ್ಯ ಎಂದು ಕನಸು ಕಂಡ  ಮಹಾತ್ಮಾ ಗಾಂಧಿಯವರ ಗ್ರಾಮ ಸ್ವರಾಜ್ ಚಿಂತನೆಯ ಅನುಷ್ಠಾನಕ್ಕೆ  ತಂದವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಎಂದು  ಹೇಳಿದರು.
ಅವರು ಹನುಮಗಿರಿ- ಬಡಗನ್ನೂರು-ನಿಡ್ಪಳ್ಳಿ ಶಾಂತಾದುರ್ಗಾ ದೇವಾಲಯದ ಸಂಪರ್ಕ ರಸ್ತೆಯ ಜೋಡಣೆಗೆ ಪ್ರಧಾನ ಮಂತ್ರಿ ಗ್ರಾಮಸಡಕ್ ಯೋಜನೆಯಡಿ 7.53 ಕೋಟಿ ಅನುದಾನದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಗ್ರಾಮದ ಅಭಿವೃದ್ಧಿಯಿಂದ ರಾಷ್ಟ್ರದ ಅಭಿವೃದ್ಧಿ ಸಾಧ್ಯ ಎಂದು ಕನಸು ಕಂಡ  ಮಹಾತ್ಮಾ ಗಾಂಧಿಯವರ ಗ್ರಾಮ ಸ್ವರಾಜ್ ಚಿಂತನೆಯ ಅನುಷ್ಠಾನಕ್ಕೆ  ತಂದು ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಕಂಚಿನಿಂದ ಕಾಮರೂಪರದವರೆಗೆ   ಚತುರ್ಪಥ ರಸ್ತೆ  ಚಿಂತನೆ ಮಾಡಲಾಯಿತು ಬಳಿಕ ಹಳ್ಳಿ ಹಳ್ಳಿಗಳ ರಸ್ತೆಗಳನ್ನು   ರಾಷ್ಟ್ರೀಯ ಹೆದ್ದಾರಿ ಜೋಡಣೆ ಮುಖಾಂತರ ಗ್ರಾಮದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಿ ಅನೇಕ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಯಿತು.ಆ ಬಳಿಕ 5 ವರ್ಷ ಅವಧಿಯಲ್ಲಿ  ಗಾಮ ಸಡಕ್ ಅನುದಾನ ಇರಲಿಲ್ಲ ಬಳಿಕ ನರೇಂದ್ರ ಮೋದಿ ಸರ್ಕಾರ ಅಟಲ್ ಬಿಹಾರಿ ವಾಜಪೇಯಿ ಚಿಂತನೆಯನ್ನು ಪುನಃ ಅನುಷ್ಠಾನ ಮಾಡಿ ಗಾಂಧಿಜೀ ಗ್ರಾಮ ಸ್ವರಾಜ್ ಕನಸನ್ನು ನನಸು ಗೊಳಿಸುವ ಮೂಲಕ ಹನುಮಗಿರಿ- ಬಡಗನ್ನೂರು- ನಿಡ್ಪಳ್ಳಿ ಶಾಂತಾದುರ್ಗಾ ದೇವಾಲಯ ಸಂಪರ್ಕ ರಸ್ತೆ ಅಭಿವೃದ್ಧಿಗೆ 7.53 ಕೋಟಿ ರೂಪಾಯಿ ನರೇಂದ್ರ ಸರ್ಕಾರ ನೀಡಿದೆ.  ತನ್ನ  ಅವಧಿಯಲ್ಲಿ ಜಿಲ್ಲೆಗೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 172 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಸಂಸದ ನಳೀನ್ ಕುಮಾರ್ ಹೇಳಿದರು.
ಮುಡಿಪಿನಡ್ಕ – ಸುಳ್ಯಪದವು  ರಸ್ತೆ ಪ್ರತಿಭಟನೆ ಸಂದರ್ಭದಲ್ಲಿ   ಕೊಟ್ಟ ಮಾತಿನಂತೆ   ಮುಡಿಪಿನಡ್ಕ ಬಡಗನ್ನೂರು ರಸ್ತೆ  ಅಭಿವೃದ್ಧಿಗೆ ಶಾಸಕ ಸಂಜೀವ ಮಠಂದೂರು ರವರ ಒನ್ ಟೈಮ್ ಯೋಜನೆಯ ಅನುದಾನದಲ್ಲಿ 80 ಲಕ್ಷ ನೀಡಿ ಅಭಿವೃದ್ಧಿ ಮಾಡಲಾಗಿದೆ.ಇದೇ ರಸ್ತೆ ಅಗಲೀಕರಣಕ್ಕೆ ಸೆಂಟ್ರಲ್ ರೋಡ್ ಪಂಡ್  ನಿಂದ 5 ಕೋಟಿ ಅನುದಾನ  ಬಿಡುಗಡೆ ಮಾಡಲಾಗಿದೆ. ನರೇಂದ್ರ ಮೋದಿ ಸರ್ಕಾರ  15 ಹಣಕಾಸು ಯೋಜನೆಯಡಿ ಗ್ರಾಮ ಪಂಚಾಯತಿಗೆ ನೇರವಾಗಿ ಒಂದು ಕೋಟಿ ನೀಡುವ ಬಗ್ಗೆ ಚಿಂತನೆ ಮಾಡಲಾಗಿದೆ ಗ್ರಾಮದಲ್ಲಿನ  ಮ‌ೂಲಭೂತ ಸೌಕರ್ಯಗಳನ್ನು ಈಡೇರಿಸುವಲ್ಲಿ ಚಿಂತನೆ ನಡೆಸುತ್ತಿದೆ. ಮುಂದಿನ ಪಂಚಾಯತ್ ಚುನಾವಣೆಯಲ್ಲಿ ಮೋದಿ ಸರ್ಕಾರಕ್ಕೆ ಆಶೀರ್ವದಿಸುವಂತೆ  ಸಂಸದ ನಳೀನ್ ಕುಮಾರ್ ಕಟೀಲು ಕರೆ ನೀಡಿದರು.
ಕಾಮಗಾರಿ ಉದ್ಘಾಟನೆ:-
ಮುಡಿಪಿನಡ್ಕ ಸುಳ್ಯಪದವು  ರಸ್ತೆ ಅಭಿವೃದ್ಧಿಗೆ ಶಾಸಕರ  ಒನ್ ಟೈಮ್ ಯೋಜನೆಯಡಿ 80 ಲಕ್ಷ ರೂಪಾಯಿ ಅನುದಾನ ಕಾಮಗಾರಿಯನ್ನು     ಪುತ್ತೂರು ಶಾಸಕ ಸಂಜೀವ ಮಠಂದೂರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟನೆ ಮಾಡಿ ಮಾತನಾಡಿ, ಬಡಗನ್ನೂರು ಹಾಗೂ ಪಡುವನ್ನೂರು ಗ್ರಾಮದ ಜನರ ಅಚ್ಚೆಯೇದಿನವಾಗಿದೆ. 2 ವರ್ಷದಲ್ಲಿ   21.50 ಕೋಟಿ ರೂಪಾಯಿ ಅನುದಾನ ಬಂದಿದ್ದರೆ ಅದು ಬಡಗನ್ನೂರು ಪಂಚಾಯತಿಗೆ ಮಾತ್ರ, ಈ ಗ್ರಾಮದ ರಸ್ತೆ  ಅವ್ವ್ಯಯವಸ್ಥೆ ರಸ್ತೆ ಕುತವರು ನಾನು ಮತ್ತು ಸಂಸದರು ಇಂತಹ ದುರುವ್ಯವಸ್ಥೆಗೆ ಕಾಯಕಲ್ಪ ಮಾಡುವ ಕೆಲಸ ಆಗಿದೆ  ಮುಂದಿನ ದಿನಗಳಲ್ಲಿ ಸಂಸದರ ಸೆಂಟ್ರಲ್ ರೋಡ್ ಪಂಡ್  ನಿಂದ 5.50 ಕೋಟಿ ಅನುದಾನ  ಬಿಡುಗಡೆ ಮಾಡಿ ರಸ್ತೆ ಅಗಲಿಕರಣ ನಡೆಯಲಿದೆ.ಹಾಗೂ ಕೋಟಿ ಚೆನ್ನಯರ ಜನ್ಮಸ್ಥಳ ಮತ್ತು ಅವರು ಆರಾಧಿಸುತ್ತ ಬಂದಿರುವ ನಾಗ ಬಿಮ್ಮರ್ ಮತ್ತು ಮಾತೆ ದೇಯಿ ಬೈದೆತಿ ಸಮಾಧಿ ಹಾಗೂ ನ್ಯಾಯ ನಿರ್ಮಾಣ ಚಾವಡಿ ಹಾಗೂ ಅರಮನೆ ಸಂಪರ್ಕ ರಸ್ತೆ ಅಭಿವೃದ್ಧಿಗೆ 50 ಲಕ್ಷ ರೂಪಾಯಿ ಅನುದಾನ ಶಂಕುಸ್ಥಾಪನೆ ಹಾಗೂ ದೇವಿ ಹುಟ್ಟಿ ಬೆಳೆದ ಕೂವೆತೋಟ ಮತ್ತು ಸಂಖಪಾಲ ಬೆಟ್ಟದ ಅಭಿವೃದ್ಧಿಗೆ 1.75  ಅನುದಾನದ ಶಿಲಾನ್ಯಾಸ ನಡೆಯಲಿದೆ ಎಂದ ಅವರು ಕೃಷಿಕರು ಇಂದು  ಸಂತಸದ ಜೀವನವನ್ನು ನಡೆಸುತ್ತಿದ್ದಾರೆ  ಇದಕ್ಕೆ ಕಾರಣ ಕೇಂದ್ರ ಸರಕಾರ ಮತ್ತು ಪ್ರಧಾನಿಯವರ ನೀತಿಯಾಗಿದೆ. ಅಡಕೆಯನ್ನು ಕಿಸಾನ್ ರೈಲಿನ ವ್ಯವಸ್ಥೆ ಯನ್ನು ಮಾಡುವ ಮೂಲಕ ರೈತ ಬೆಳೆದ ಬೆಳೆಯನ್ನು ಇಂದು ದೇಶದ ವಿವಿಧ ರಾಜ್ಯ ಗಳಿಗೂ ತಲುಪಿಸುವ ವ್ಯವಸ್ಥೆಯನ್ನು ಮಾಡಿರುವ ಕಾರಣ ರೈತ ಬೆಳೆದ ಉತ್ಪನ್ನ ಗಳಿಗೆ ಬೆಲೆಯೂ ದೊರಕುತ್ತಿದೆ. ಸರಕಾರದ ಪ್ರತೀಯೊಂದು ಯೋಜನೆಯೂ ದೇಶದ ಕಟ್ಟ ಕಡೆಯ ಜನ ಸಾಮಾನ್ಯನಿಗೂ ತಲುಪುವ ಕೆಲಸ ನಡೆಯಬೇಕು. ಯಡಿಯೂರಪ್ಪ ಅವರು ಕಲ್ಪ ವೃಕ್ಷ ಕಾಮಧೇನು ಇದ್ದಂತೆ ನಾವು ಕೇಳಿದ್ದಕ್ಕೆಲ್ಲಾ ಅನುದಾನವನ್ನು ಕೊಡುತ್ತಿದ್ದಾರೆ, ಶಾಸಕರಾದ ಆರಂಭದಲ್ಲಿ ನಮ್ಮದೇ ಸರಕಾರ ಇಲ್ಲದ ಕಾರಣ ನಾನು ಮುಖಮುಚ್ಚಿಕೊಂಡು ಓಡಾಡಬೇಕಾದ ಸ್ಥಿತಿ ಬಂದಿತ್ತು ಆದರೆ ಆ ಬಳಿಕ ಅನುದಾನ ಹೆಚ್ಚು ಬಿಡುಗಡೆಯಾಗುತ್ತಿರುವುದರಿಂದ ಕಾಮಗಾರಿಗಳನ್ನು ನಡೆಸಲು ಸಾಧ್ಯವಾಗುತ್ತಿದೆ. ಫಸಲು ಭೀಮಾ ಯೋಜನೆಯಲ್ಲಿ ಪುತ್ತೂರು ವಿಧಾನಸಬಾ ಕ್ಷೇತ್ರದ ರೈತರ ಖಾತೆಗೆ 19 ಲಕ್ಷ, ಪ್ರಧಾನಿಗಳ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ 8 ಕೋಟಿ ರೂ ರೈತರ ಖಾತೆಗೆ ನೇರ ಜಮಾವಣೆಯಾಗಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 37 ಕಾಲು ಸಂಕ ನಿರ್ಮಾಣವಾಗಲಿದ್ದು, 37 ಕಿ ಮೀ ರಸ್ತೆಗೆ 32.50 ಕೋಟಿ ಅನುದಾನವನ್ನು ನೀಡುವ ಮೂಲಕ ಗ್ರಾಮೀಣ ರಸ್ತೆಗಳ ಅಭಿವೃದ್ದಿಗೆ ನಾವು ಪಣತೊಟ್ಟಿರುವುದಾಗಿ ಶಾಸಕರು ಹೇಳಿದರು. ಬೀದಿ ಬದಿ ವ್ಯಾಪಾರಿಗಳ ಬದುಕು ಕಟ್ಟಲು ನಾವು ಬದ್ದರಾಗಿದ್ದು ಮುಂದಿನ ದಿನಗಳಲ್ಲಿ ಬೀದಿ ಬದಿ ವ್ಯಾಪಾರಿಗಳಿಗೂ ಸಂತಸದ ದಿನಗಳು ಬರಲಿದೆ ಎಂದು ಹೇಳಿದರು.
ವೇದಿಕೆಯಲ್ಲಿ   ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೂಡು, ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಲೋಕೋಪಯೋಗಿ ಇಲಾಖಾ ಇಂಜಿನಿಯರ್ ರಾಜಾರಾಮ್, ಪ್ರಧಾನ ಮಂತ್ರಿ ಗ್ರಾಮಸಡಕ್ ನ ಇಂಜಿನಿಯರ್ ಶ್ರೀನಿವಾಸ್ ಮೂರ್ತಿ, ಉಪಸ್ಥಿತರಿದ್ದರು.
ಕಾರ್ಯಕ್ರಮದದಲ್ಲಿ ಬಿಜೆಪಿ ಹಿಂದುಳಿದ ಮೋರ್ಚಾ ಜಿಲ್ಲಾಧ್ಯಕ್ಷ ಆರ್ ನಾರಾಯಣ, ,  ತಾ.ಪಂ ಮಾಜಿ ಅಧ್ಯಕ್ಷೆ ರೇಖಾ ನಾಗರಾಜ್,   ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ,  ಬಿಜೆಪಿ ಮಂಡಲ ಕಾರ್ಯದರ್ಶಿ ನಿತೀಶ್‌ಕುಮಾರ್ ಶಾಂತಿವನ,,ಬಡಗನ್ನೂರು ಬಿಜೆಪಿ ಗ್ರಾಮ ಮಂಡಲ  ಅಧ್ಯಕ್ಷ ನಾರಾಯಣ ರೈ ಕುದ್ಕಾಡಿ, ಉಪಾಧ್ಯಕ್ಷ ಸಂತೋಷ ಆಳ್ವ, ಜಿಲ್ಲಾ ಪ್ರಮುಖ ಭರತೇಶ್ ರೃ ಮೂಡಾಯೂರು,  ಶ್ರೀ ಕೂವೆ ಶಾಸ್ತಾರ ವಿಷ್ಣು ಮೂರ್ತಿ ದೇವಾಲಯದ ಮಾಜಿ ಆಡಳಿತ ಮೂಕ್ತೇಸರ ಮನೋಜ್ ರೈ ಪೇರಾಲು,ಕುಂಬ್ರ ಪ್ರ ಕೃ ಪ.ಸ.ಸ.ನಿರ್ದೇಶಕ ರಘರಾಮ ಪಾಟಾಳಿ, ಬಡಗನ್ನೂರು ಗ್ರಾ.ಪಂ. ಸದಸ್ಯರಾದ ರವಿರಾಜ ರೈ ಸಜಂಕಾಡಿ, ಉದಯ ಕುಮಾರ್ ಶರವು, ಹೇಮಲತಾ ಗೌಡ ಗುರುಪ್ರಸಾದ್ ರೈ ಕುದ್ಕಾಡಿ,ಬಾಲಕೃಷ್ಣ ನಾಯ್ಕ ಮೂಂಡೋಳೆ,ಸುಶೀಲಾ ಪಕ್ಯೋಡು,ಹಾಗೂ ಬಿಜೆಪಿ ಗ್ರಾಮಸಮಿತಿ  ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.
ತಾಲೂಕು ಭಜನಾ ಸಂಘದ ಅಧ್ಯಕ್ಷ ಸುಬ್ಬಯ್ಯ ರೈ ಹಲಸಿನಡಿ ಸ್ವಾಗತಿಸಿದರು.ಬೂತ್ ಸಮಿತಿ ಮಾಜಿ ಅಧ್ಯಕ್ಷ ರಾಮಕೃಷ್ಣ ಭಟ್ ವಂದಿಸಿದರು. ಅರಿಯಡ್ಕಗ್ರಾ.ಪಂ ಸದಸ್ಯ ತಿಲಕ್ ರೈ ಕುತ್ಯಾಡಿ ಕಾರ್ಯಕ್ರಮ ನಿರೂಪಿಸಿದರು. 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.