HomePage_Banner
HomePage_Banner
HomePage_Banner
HomePage_Banner

ನೆಲ್ಯಾಡಿ ಗ್ರಾ.ಪಂ.ವಿಶೇಷ ಗ್ರಾಮಸಭೆ | ಡಾಮರು ಅಗೆದಿರುವುದರಿಂದ ಸಂಚಾರಕ್ಕೆ ತೊಂದರೆ; ತಕ್ಷಣ ಕಾಂಕ್ರಿಟೀಕರಣಕ್ಕೆ ಆಗ್ರಹ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ನೆಲ್ಯಾಡಿ ಗ್ರಾಮ ಪಂಚಾಯತ್‌ನ ೨೦೨೧-೨೨ನೇ ಸಾಲಿನ ನಮ್ಮ ಗ್ರಾಮ ನಮ್ಮ ಯೋಜನೆ(ಜನರ ಯೋಜನೆ ಜನರ ಅಭಿವೃದ್ಧಿ)ಕರಡು ಯೋಜನೆ ಸಿದ್ಧಪಡಿಸುವ ವಿಶೇಷ ಗ್ರಾಮಸಭೆ ಹಾಗೂ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ‘ ರೋಜ್‌ಗಾರ್ ದಿವಸ’ ನ.೨೫ರಂದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ರಸ್ತೆ ಕಾಂಕ್ರಿಟೀಕರಣಕ್ಕೆ ಆಗ್ರಹ:
ನೆಲ್ಯಾಡಿ ಗಾಂಧಿಮೈದಾನದ ಬಳಿಯಿಂದ ಮಾದೇರಿಗೆ ಸಂಪರ್ಕ ಕಲ್ಪಿಸುವ ಜಿ.ಪಂ.ರಸ್ತೆಯಲ್ಲಿ ರಸ್ತೆ ಕಾಂಕ್ರಿಟೀಕರಣ ಕಾಮಗಾರಿಗಾಗಿ ೧೭೦ ಮೀ.ಉದ್ದಕ್ಕೆ ಡಾಮರು ಅಗೆದುಹಾಕಲಾಗಿದೆ. ಇದೀಗ ಇಲ್ಲಿ ರಸ್ತೆ ಎತ್ತರಿಸಿ ಕಾಂಕ್ರಿಟೀಕರಣ ಮಾಡಲು ನಿರ್ಧರಿಸಲಾಗಿದ್ದು ಇದಕ್ಕೆ ರೂ.೪೦ಲಕ್ಷಕ್ಕೂ ಹೆಚ್ಚು ಅನುದಾನದ ಅಗತ್ಯವಿದೆ. ಇದರ ಬದಲು ಈಗ ಇರುವಲ್ಲಿಯೇ ರಸ್ತೆ ಕಾಂಕ್ರಿಟೀಕರಣಕ್ಕೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಗ್ರಾಮಸ್ಥರು ಸೇರಿಕೊಂಡು ಪ್ರತಿಭಟನೆ ನಡೆಸುವ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಗ್ರಾ.ಪಂ.ನ ಮಾಜಿ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್‌ರವರು ಹೇಳಿದರು. ಗ್ರಾಮಸ್ಥ ಜಿ.ವರ್ಗೀಸ್ ಮಾದೇರಿಯವರು ಇದಕ್ಕೆ ಬೆಂಬಲ ಸೂಚಿಸಿ ಮಾತನಾಡಿ, ರಸ್ತೆ ಅಗೆದು ಹಾಕಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಆದ್ದರಿಂದ ತಕ್ಷಣ ಕಾಂಕ್ರಿಟೀಕರಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಈ ಬಗ್ಗೆ ಸಂಬಂಧಿಸಿದವರ ಗಮನಕ್ಕೆ ತರಲು ಸಭೆಯಲ್ಲಿ ನಿರ್ಣಯಿಸಲಾಯಿತು.

ಸಭೆಯಲ್ಲಿ ನಮ್ಮ ಗ್ರಾಮ ನಮ್ಮ ಯೋಜನೆ ಕರಡು ಯೋಜನೆ ಸಿದ್ಧಪಡಿಸುವುದು, ಸಬ್ ಕಿ ಯೋಜನಾ ಸಬ್‌ಕ ವಿಕಾಸ್ ಜನ ಯೋಜನೆ ಅಭಿಯಾನ, ಸ್ವಸಹಾಯ ಗುಂಪುಗಳ ಮಹಿಳೆಯರ ಬಲವರ್ದನೆ, ದೀನ ದಯಾಳ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯ ಫಲಾನುಭವಿಗಳ ಆಯ್ಕೆ, ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದವರ ಜೀವನೋಪಾಯ ಅಭಿವೃದ್ಧಿಪಡಿಸುವುದು, ಸಾಮಾಜಿಕ ಭದ್ರತೆ ಪಿಂಚಣಿಯನ್ನು ಪಡೆಯದೇ ಸಂಕಷ್ಟಗೊಳಗಾದವರನ್ನು ಗುರುತಿಸುವುದು, ಗ್ರಾಮ ನೈರ್ಮಲ್ಯದ ಬಗ್ಗೆ ಚರ್ಚೆ, ಸುಲಭ ಜೀವನ ಸಮೀಕ್ಷೆ ಅನುಷ್ಠಾನ ಮಾಡುವ ಬಗ್ಗೆ ಚರ್ಚಿಸಲಾಯಿತು. ಗ್ರಾಮಕರಣಿಕೆ ಲಾವಣ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಪುಷ್ಪಾವತಿ ಡಿ.ಎಂ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾ.ಪಂ.ಮಾಜಿ ಸದಸ್ಯರಾದ ಫ್ಲೋರಿನಾ ಡಿ.ಸೋಜ, ಉಮಾವತಿ, ಮೋಹಿನಿ, ಚಿತ್ರಾ ರಾಮನಗರ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು. ಪಿಡಿಒ ಮಂಜುಳ ಎನ್.,ಸ್ವಾಗತಿಸಿ, ಮಾಹಿತಿ ನೀಡಿದರು. ಕಾರ್ಯದರ್ಶಿ ದೇವರಾಜ್ ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.

ಆಡಳಿತಾಧಿಕಾರಿ ಗೈರು-ಆಕ್ರೋಶ
ವಿಶೇಷ ಗ್ರಾಮಸಭೆಗೆ ಆಡಳಿತಾಧಿಕಾರಿ ಹೊನ್ನಪ್ಪ ಬಿ.ಗೌಡರವರು ಗೈರು ಹಾಜರಿಗೆ ಗ್ರಾಮಸ್ಥ ಜಿ.ವರ್ಗೀಸ್ ಮಾದೇರಿ ಆಕ್ರೋಶ ವ್ಯಕ್ತಪಡಿಸಿದರು. ‘ನಮ್ಮ ಗ್ರಾಮ ನಮ್ಮ ಯೋಜನೆ’ ವಿಶೇಷ ಗ್ರಾಮಸಭೆಯಾಗಿರುವುದರಿಂದ ಆಡಳಿತಾಧಿಕಾರಿಯವರು ಸಭೆಗೆ ಕಡ್ಡಾಯವಾಗಿ ಹಾಜರಾಗಬೇಕಿತ್ತು ಎಂದು ಜಿ.ವರ್ಗೀಸ್‌ರವರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ಮಂಜುಳ ಎನ್.,ರವರು, ಆಡಳಿತಾಧಿಕಾರಿಯವರಿಗೆ ಅವರ ಮಾತೃಇಲಾಖೆಯಲ್ಲಿ ಸಮೀಕ್ಷೆ ಕಾರ್ಯ ನಡೆಯುತ್ತಿರುವುದರಿಂದ ಸಭೆಗೆ ಬರಲು ಆಗುತ್ತಿಲ್ಲ ಎಂದು ಮಾಹಿತಿ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.