ಹಿರೇಬಂಡಾಡಿ: ಹಿರೇಬಂಡಾಡಿ ಗ್ರಾ.ಪಂ.ನ ೨೦೨೦-೨೧ನೇ ಮಿಷನ್ ಅಂತ್ಯೋದಯ ಜನರ ಯೋಜನೆ ಜನರ ಅಭಿವೃದ್ಧಿ ಮತ್ತು ನಮ್ಮ ಗ್ರಾಮ ನಮ್ಮ ಯೋಜನೆ ಜಿಪಿಡಿಪಿ ಕಾಮಗಾರಿಗಳ ಕರಡು ಯೋಜನೆ ತಯಾರಿಯ ವಿಶೇಷ ಗ್ರಾಮಸಭೆಯು ನ.೨೫ರಂದು ಅಂಬೇಡ್ಕರ್ ಸಮುದಾಯಭವನದಲ್ಲಿ ಜರಗಿತು.
ಗ್ರಾಮಕರಣಿಕ ಜಿತೇಶ್ರವರ ಅಧ್ಯಕ್ಷತೆಯಲ್ಲಿ ಸಭೆ ಜರಗಿತು. ಸಭೆಯಲ್ಲಿ ಗ್ರಾಮಸ್ಥರು ರಸ್ತೆ ಕಾಂಕ್ರಿಟೀಕರಣ, ದಾರಿದೀಪ, ಶಾಲೆಗಳಿಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ, ಶಾಲಾ ಕಾಂಪೌಂಡ್ಗಳ ರಚನೆ, ಹಳೆಯ ಅಂಗನವಾಡಿ ಕಟ್ಟಡಗಳನ್ನು ತೆಗೆದು ಹೊಸಕಟ್ಟದ ನಿರ್ಮಾಣ, ಹಿರೇಬಂಡಾಡಿ ಗ್ರಾಮಕ್ಕೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಕುಮಾರಧಾರ ನದಿಯಿಂದ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ, ಕಾಲೋನಿಗಳಲ್ಲಿ ಗಂಗಾಕಲ್ಯಾಣ ಯೋಜನೆ, ಪುತ್ತೂರಿನಿಂದ ದಾರಂದಕುಕ್ಕು ಮುಖಾಂತರ ಹಿರೇಬಂಡಾಡಿ ಕುಮಾರಧಾರ ನದಿಗೆ ಕಿಂಡಿ ಅಣೆಕಟ್ಟು ಹಾಗೂ ಸೇತುವೆ ನಿರ್ಮಿಸಿ ಆ ಮೂಲಕ ಕೊಲ ಪಶು ಸಂಗೋಪನ ಇಲಾಖೆಗೆ ಸಂಪರ್ಕ ರಸ್ತೆಯನ್ನು ನಿರ್ಮಿಸುವುದು ಮುಂತಾದ ಬೇಡಿಕೆಗಳನ್ನು ಗ್ರಾಮಸ್ಥರು ನೀಡಿದರು.
ಸಭೆಯಲ್ಲಿ ಗ್ರಾ.ಪಂ. ಮಾಜಿ ಸದಸ್ಯರಾದ ಸೇಸಪ್ಪ ನೆಕ್ಕಿಲು, ಸದಾನಂದ ಶೆಟ್ಟಿ, ವಿಶ್ವನಾಥ ಕೆಮ್ಮಟೆ, ಪುಷ್ಪಾವತಿ ಶಾಂತಿತ್ತಡ್ಕ, ಹಿರೇಬಂಡಾಡಿ ಶಾಲಾ ಎಸ್ಡಿಎಂಸಿ ಅಧ್ಯಕ್ಷ ರಾಮಕೃಷ್ಣ ಹೊಸಮನೆ, ಹಿರೇಬಂಡಾಡಿ ಗ್ರಾ.ಪಂ. ವ್ಯಾಪ್ತಿಯ ಶಾಲಾ ಮುಖ್ಯಗುರುಗಳು, ಅಧ್ಯಾಪಕರುಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಕಾರ್ಯದರ್ಶಿ ಪರಮೇಶ್ವರ ಸ್ವಾಗತಿಸಿ, ವಂದಿಸಿದರು. ಸಿಬ್ಬಂದಿಗಳಾದ ಸೋಮನಾಥ, ನೋಣಯ್ಯ, ಲೋಕೇಶ್, ಚೈತ್ರಾ, ಕವಿತಾ ಸಹಕರಿಸಿದರು.