HomePage_Banner
HomePage_Banner
HomePage_Banner
HomePage_Banner

ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಸಾಧನೆಗೆ ಮೂರನೇ ಬಾರಿ ಪ್ರಶಸ್ತಿ ಪುರಸ್ಕಾರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬನ್ನೂರು ರೈತರ ಪ್ರಾತಮಿಕ ಕೃಷಿ ಪತ್ತಿನ ಸಹಕಾರಿ ಸಂಘ ತನ್ನ ವಿಶೇಷ ಸಾಧನೆಗಾಗಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ನ  ಪ್ರಶಸ್ತಿಗೆ ಮೂರನೇ ಬಾರಿ ಆಯ್ಕೆಯಾಗಿದೆ. 2019-20 ನೇ ಸಾಲಿನ ಸಹಕಾರಿ ಸಂಘದ ಸಾಧನೆಯನ್ನು ಪರಿಗಣಿಸಿ ಆಡಿಟ್‌ ವರ್ಗೀಕರಣದಲ್ಲಿ ಎ ತರಗತಿ ಸ್ಥಾನ ಹೊಂದಿ ಅತ್ಯತ್ತಮವಾದ ಕಾರ್ಯ ನಿರ್ವಹಣೆಗಾಗಿ ಪ್ರಶಸ್ತಿ ಗೆ ಭಾಜಕವಾಗಿದೆ. ಪ್ರಸ್ತುತ ಸಾಲಿನಲ್ಲಿ 6041 ಎ ತರಗತಿ ಸದಸ್ಯರನ್ನು ಹೊಂದಿದ್ದು 2.58 ಕೋಟಿ ಪಾಲು ಬಂಡವಾಳ ಹೊಂದಿದೆ. ಸಹಕಾರಿ ಸಂಘವು 12 ಕೋಟೊ ತೇವಣಿ ಹೊಂದಿದ್ದು ಸದಸ್ಯರ ಹೊರ ಬಾಖಿ ಸಾಲ ರೂ.23 ಕೋಟಿ ಇರುತ್ತದೆ. 2019-20 ನೇ ಸಾಲಿನಲ್ಲಿ 158 ಕೋಟಿ ವ್ಯವಹಾರ ನಡೆಸಿದ್ದು, ಪ್ರಸಕ್ತ ಸಾಲಿನಲ್ಲಿ 45 ಲಕ್ಷ ನವ್ವಳ ಲಾಭ ಗಳಿಸಿದೆ. 

ಸಂಘದ ಕಾರ್ಯವ್ಯಾಪ್ತಿ:
ಬನ್ನೂರು ಸಹಕಾರಿ ಸಂಘದ ಕಾರ್ಯ ಕ್ಷೇತ್ರ ವ್ಯಾಪ್ತಿಯ 9 ಗ್ರಾಮಗಳೊಂದಿಗೆ ಬನ್ನೂರು ಬೆಳ್ಳಿಪ್ಪಾಡಿ. ಕೋಡಿಂಬಾಡಿ, ಚಿಕ್ಕಮುಡ್ನೂರು, ಪಡ್ನೂರು, ಕೊಡಿಪ್ಪಾಡಿ, ಕುಳ, ಕಬಕ, ಪುತ್ತೂರು ಕಸಬಾ ಹೀಗೆ 9 ಗ್ರಾಮಗಳನ್ನು ಒಳಗೊಂಡಿದೆ. ಗ್ರಾಹಕರ ಅನುಕೂಲಕ್ಕಾಗಿ ಸೇಫ್‌ ಲಾಕರ್‌ ವ್ಯವಸ್ಥೆ ಇದ್ದು ಪೂರಕವಾಗಿ ತ್ವರಿತ  ಸೇವೆಗಾಗಿ ನೆಫ್ಟ್‌ / ಆರ್‌ ಟಿ ಒ ವ್ಯವಸ್ಥೆಗಳನ್ನು ಹಮ್ಮಿಕೊಳ್ಳಲಾಗಿದೆ. ಕೇಂದ್ರ ಸರಕಾರ ರೈತರ ಬೆಳೆಗೆ ಅಡಮಾನ ಆಧರಿತ ಬೆಳೆವಿಮಾ ಯೋಜನಾ ಸೌಲಭ್ಯ ಜಾರಿಗೆ ತಂದಿರುತ್ತದೆ. ಸಾಲಗಾರ ಸದಸ್ಯರಿಗೆ ಲಾಭಾಂಶದಲ್ಲಿ ವಿಂಗಡಿಸಿ ನೀಡಲಾಗುತ್ತಿದೆ. 2018-19 ನೇ ಸಾಳಿನ ಸಂಘದ ಉತ್ತಮ ಸಾಧನೆಗೆ ದ.ಕ ಜಿಲ್ಲಾ ಸಹಕಾರಿ ಬ್ಯಾಂಕ್‌ ನಿಂದ ಪ್ರಶಸ್ತಿ ಪಡೆದುಕೊಂಡಿದ್ದು ಇದೀಗ ಮೂರನೇ ಬಾರಿಗೆ ಪ್ರಶಸ್ತಿಗರ ಆಯ್ಕೆಗೊಂಡಿದೆ. ಸಂಗದ ಅಭಿವೃದ್ಧಿಗೆ ಪೂರಕವಾಗಿ 12 ಮಂದು ಸದಸ್ಯರಿದ್ದು, ಪಂಜಿಗುಡ್ಡೆ ಈಶ್ವರಭಟ್‌ ಅಧ್ಯಕ್ಷರಾಗಿ ರಾಜಶೇಖರ್‌ ಜೈನ್‌ ಉಪಾಧ್ಯಕ್ಷರಾಗಿ, ನಿರ್ದೇಶಕರಾಗಿ ಸುಭಾಸ್‌ ನಾಯಕ್‌, ಜಯಲಕ್ಷ್ಮೀ ಸುರೇಶ್, ಆಶ್ರಫ್‌ ಕಲ್ಲೇಗ,ದೇವಾನಂದ ಕೆ, ಮೋಹನ ಪಕ್ಕಳ, ಸ್ಮಿತಾ ಭಂಢಾರಿ, ಸುಬ್ರಹ್ಮಣ್ಯ ಗೌಡ, ರಾಜು, ಶ್ರೀನಿವಾಸ, ಸುಂದರ ಪೂಜಾರಿ ಬಡಾವು, ಬ್ಯಾಂಕ್‌ ನ ಪ್ರತಿನಿಧಿಯಾಗಿ ಶಶಿಕುಮಾರ್‌ ಬಾಲ್ಯೊಟ್ಟು ಹಾಗೂ ವಲಯ ಮೇಲ್ವಿಚಾರಕೃಾಗಿ ವಸಂತ ಇವರುಗಳು ಕಾರ್ಯನರ್ವಹಿಸುತ್ತಿದ್ದು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಗೋಪಾಲಕೃಷ್ಣ ಭಟ್‌ ಹಾಗೂ ಸಿಬಂಧಿಗಳು ಸಂಘದ ಸಾಲಗಾರ ಸದಸ್ಯರು ಕ್ಲಪ್ತ ಸಮಯದಲ್ಲಿ ಸಾಳ ಮರುಪಾವತಿಸಿ ಸಂಘದ ಶ್ರೇಯೋಭಿವೃದ್ಧಿಗೆ ಕಾರಣರಾಗಿರುತ್ತಾರೆ.  ನನಗೆ ಅತೀವ ಸಂತೋಷ ತಂದಿದೆ. ಉತ್ತಮ ಸಾಧನೆಗಾಗಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ನ ವತಿಯಿಂದ ಬನ್ನೂರು ರೈತರ ಸೇವಾಸಹಕಾರಿ ಸಘಕ್ಕೆ ಮೂರನೇ ಬಾರಿಗೆ ಪ್ರಶಸ್ತಿಗೆ ಆಯ್ಕೆ ಗೊಂಡಿರುವುದು ನನಗೆ ಅತೀವ ಸಂತೋಷವಾಗಿದೆ ಎಂದು ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಈಶ್ವರ್‌ ಭಟ್‌ ಪಂಜಿಗುಡ್ಡೆ ತಿಳಿಸಿದ್ದಾರೆ.

ನ.27ರಂದು ಪ್ರಶಸ್ತಿ ಪ್ರಧಾನ:  ಮಂಗಳೂರಿನ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ನ ಮಹಾಸಭೆಯಲ್ಲಿ ನ.27ರಂದು ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ. 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.