HomePage_Banner
HomePage_Banner
HomePage_Banner
HomePage_Banner

ಬ್ಲಾಕ್‌  ಕಾಂಗ್ರೆಸ್‌ ವತಿಯಿಂದ ಅಹಮ್ಮದ್ ಪಟೇಲ್, ಕುಂಬ್ರ ಬಾಲಕೃಷ್ಣ ರೈ ಶ್ರದ್ಧಾಂಜಲಿ ಸಭೆ – ಸಂವಿಧಾನ ದಿನ ಆಚರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದ ಖಜಾಂಜಿ  ಅಹಮ್ಮದ್‌ ಪಟೇಲ್‌ ಹಾಗೂ ಕುಂಬ್ರದ ಬಾಲಕೃಷ್ಣ ರೈ ಯವರ ನಿಧನಕ್ಕೆ ಪುತ್ತೂರು ಬ್ಲಾಕ್‌ ಕಾಂಗ್ರಸ್‌ ವತಿಯಿಂದ ಪುತ್ತೂರು ಬ್ಲಾಕ್‌ ಕಂಗ್ರೆಸ್‌ ಕಚೇರಿಯಲ್ಲಿ ನ.26ರಂದು ಶ್ರದ್ಧಾಂಜಲಿ ಸಭೆ ನಡೆಸಲಾಯಿತು. ಬಳಿಕ ಸಂವಿಧಾನ ದಿನದ ಅಂಗವಾಗಿ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.

ಪುತ್ತೂರು ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರು ಅಹಮ್ಮದ್‌ ಪಟೇಲ್‌ ಹಾಗೂ ಕುಂಬ್ರ ಬಾಲಕೃಷ್ಣ ರೈ ರವರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ ಶ್ರದ್ದಾಂಜಲಿ ಅರ್ಪಿಸಿದರು.

ಬಳಿಕ ಮಾತನಡಿದ ಅವರು ಅಹಮ್ಮದ್‌ ಪಟೇಲ್‌ ರಾಷ್ಟ್ರ ಮಟ್ಟದ ನಾಯಕರಾಗಿದ್ದು, ಕಾಂಗ್ರೆಸ್‌ ನ ಅಭಿವೃದ್ಧಿಗೆ ಅವಿರತವಾಗಿ ಹೋರಾಟ ನಡೆಸಿದವರಾಗಿದ್ದಾರೆ. ಕುಂಬ್ರ ಬಾಳಕೃಷ್ಣ ರೈರವರು ತಾಲೂಕು ಮಟ್ಟದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬೆಳೆಸುವಲ್ಲಿ ಶಕ್ತಿ ಮೀರಿ ದುಡಿದಿದ್ದಾರೆ. ಇವರಿಬ್ಬರ ಅಗಲಿಕೆಯಿಂದ ಕಾಂಗ್ರೆಸ್‌ ಗೆ ನಷ್ಟ ವುಂಟಾಗಿದೆ. ಅವರ ಆತ್ಮಕ್ಕೆ ಭಗವಂತನು ಚಿರಶಾಂತಿ ನೀಡಲೆಂದು ಪ್ರಾರ್ಥಿಸಿದರು.

ಪುತ್ತೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹಮ್ಮಸ್‌ ಬಡಗಗ್ನೂರು ರವರು ಮಾತನಾಡಿ ನಮ್ಮನಗಲಿದ ಅಹಮ್ಮದ್‌ ಪಟೇಲ್‌ ರವರು ಕಾಂಗ್ರೆಸ್‌ ಪಕ್ಷದ ನಂಬಿಕಸ್ತ ಹಾಗೂ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿದ್ದರು. ಮೂರು ಭಾರಿ ಸಂಸದರಅಗಿ ಮೂರು ಭಾರಿ ರಾಜ್ಯ ಸಭಾಸದಸ್ಯರಾಗಿ ಹಾಗೂ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಯವರ ರಾಜಕೀಯ ಕಾರ್ಯದರ್ಶೀಯಾಗಿ ಹಾಗೂ ಸೋನಿಯಾಗಾಂಧಿ ಕುಟುಂಬದ ಅತ್ಯಂತ ನಿಕಟ ವ್ಯಕ್ತಿಯಾಗಿದ್ದರು. ಕಾಂಗ್ರೆಸ್‌ ನ ಬೆಳವಣಿಗೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದ ಧಿಮಂತವ್ಯಕ್ತಿಯಾಗಿದ್ದರು. ಅವರ ಅಗಲಿಕೆ ಕಾಂಗ್ರೆಸ್‌ ನ ಈ ಸಂಧಿಗ್ದ ಕಾಳ ಘಟ್ಟದಲ್ಲಿ ತುಂಬಲಾರದ ನಷ್ಟ ಉಂಟಾಗಿದೆ ಎಂದು ಅವರು ಹೇಳಿದರು.  ಕುಂಬ್ರ ಬಾಲಕರಷ್ಣ ರೈ ವರು ಕಾಂಗ್ರೆಸ್‌ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದು ಕಾಂಗ್ರೆಸ್‌ ಗಾಗಿ ಅಹೋ ರಾತ್ರಿ ದುಡಿದವರಾಗಿದ್ದಾರೆ. ಅವರ ನಿಧನದಿಂ ಪಕ್ಷಕ್ಕೆ ತುಂಬಲಾರದ ನಷ್ಟವುಂಟಾಗಿದೆ. ಇಬ್ಬರ ಆತ್ಮಕ್ಕೂ ಭಗವಂತನು ಶಾಂತಿ ನೀಡಲಿ ಎಂದು ಹೇಳಿದರು.

ಒಂದು ನಿಮಿಸ ಮೌನ ಪ್ರಾರ್ಥನೆ: ಅಗಲಿದ ಅಹಮ್ಮದ್‌ ಪಟೇಲ್‌ ಹಾಗೂ ಕುಂಬ್ರ ಬಾಲಕೃಷ್ಣ ರೈ ರವರ ಆತ್ಮಕ್ಕೆ ಚಿರ ಶಾಂತಿ ಕೋರಿ ಸಭೆಯಲ್ಲಿ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಸಭೆಯಲ್ಲಿ ಕೆಪಿಸಿಸಿ ಸದಸ್ಯ ಎಮ್‌ ಬಿ ವಿಶ್ವನಾಥ ರೈ, ಪುತ್ತೂರು ಬ್ಲಾಕ್‌ ಕಾಂಗ್ರೆಸ್‌ ನ ಕಾರ್ಯದೆರ್ಶಿ ಭಾಸ್ಕರ ಗೌಡ ಕೋಡಿಂಬಾಳ, ವಿಟ್ಲ ಉಪ್ಪಿನಂಗಡಿ ಬ್ಲಾಕ್‌ ಕಾಂಗ್ರೆಸ್‌ ನ ಉಪಾಧ್ಯಕ್ಷ ನ್ಯಾಯವಾದಿ ಎಮ್‌ ಪಿ ಅಬೂಬಕ್ಕರ್‌, ಪುತ್ತೂಋಉ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್‌ ಕೌಶಲ್‌ ಶೆಟ್ಟಿ, ಪುತ್ತೂರು ಬ್ಲಾಕ್‌ ಕಾಂಗ್ರೆಸ್‌ ಸೇವಾದಳದ ಅಧ್ಯಕ್ಷಜೋಕಿಮ್‌ ಡಿಸೋಜ, ಬ್ಲಾಕ್‌ ಕಾಂಗ್ರೆಸ್‌ ಕಾರ್ಯದರ್ಶಿ ರೋಶನ್‌ ರೈ ಬನ್ನೂರು ಸೇರಿದಂತೆ ವಿವಿಧ ಪದಾಧಿಕಾರಿಗಳಾದ ಆದಮ್‌ ಕಲ್ಲರ್ಪೆ, ಗಂಗಾಧರ್‌ ಶೆಟ್ಟಿ ಎಲಿಕ, ಯಾಕೂಬ್‌ ಕುರಿಯ, ಪ್ರಸಾದ್‌ ಪಾಣಾಜೆ, ಜಾನ್‌ ಸಿರಿಲ್‌ ಮಸ್ಕರೇನಸ್‌ ಮೊದಲಾದವರು ಉಪಸ್ಥಿತರಿದ್ದರು. ಬ್ಲಾಕ್‌ ಕಾಂಗ್ರೆಸ್‌ ನ ಪ್ರಧಾನ ಕಾರ್ಯದರ್ಶಿ ಕೃಷ್ಣ ಪ್ರಸಾದ್‌ ಆಳ್ವ ಕಜಾರ್ಯಕ್ರಮ ನಿರೂಪಿಸಿದರು.

ಸಂವಿಧಾನದ ಪ್ರತಿಜ್ಞಾ ಸ್ವೀಕಾರ:
ನ.26 ಭಾರತದ ಸಂವಿಧಾನ ದಿನವಾಗಿ ಅಚರಿಸಲಾಗುತ್ತಿದ್ದು ಇದರ ಅಂಗವಾಗಿ ಸಂವಿಧಾನದ ವಿಧಿಯನ್ನು ಬೋಧಿಸಲಾಯಿತು. ಪುತ್ತೂರು ಬ್ಲಾಕ್‌ ಕಾಂಗ್ರೆಸ್‌ ನ ಪ್ರಧಾನ ಕಾರ್ಯದರ್ಶಿ ಭಾಸ್ಕರ ಗೌಡ ಕೋಡಿಂಬಾಳರವರು ಭಾರತದ ಪ್ರಜೆಗಳಾದ ನಾವು ಭಾರತವನ್ನು ಸಾರ್ವಭೌಮ ಸಮಾಜವಾದಿ ಜಾತ್ಯಾತೀತ ಪ್ರಜಾಸತಾತ್ಮಕ ಗಣರಾಜ್ಯವನ್ನಾಗಿ ರೂಪಿಸುವುದಕ್ಕಾಗಿ ಭಾರತದ ಎಲ್ಲಾ ಪ್ರಜೆಗಳಿಗೆ ಸಾಮಾಜಿಕ ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು ವಿಚಾರ ಅಭಿವ್ಯಕ್ತಿ ನಂಬಿಕೆ, ಧರ್ಮ ಮತ್ತು ಉಪಾಸನೆಯ ಸ್ವಾತಂತ್ರ್ಯವನ್ನು ಸ್ಥಾನ ಮಾನ ಮತ್ತಯ ಅವಕಾಶಗಳ ಸಮತೆಯನ್ನು ದೊರೆಯುವಂತೆ ಮಾಡುವುದಕ್ಕಾಗಿ ವ್ಯಕ್ತಿ ಗೌರವ ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲಿಯೂ ಮಾತೃತ್ವ ಭಾವನೆಯನ್ನು ಮೂಡಿಸುವುದಕ್ಕೆ ದೃಢ ಸಂಕಲ್ಪ ಮಾಡಿ ಎಂದು ಸಂವಿಧಾನದ ಪ್ರತಿಜ್ಞಾ ವಿಧಿಯನ್ನು ಸಭೆಯಲ್ಲಿ ಭೋಧಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.