HomePage_Banner
HomePage_Banner
HomePage_Banner
HomePage_Banner

ಭಕ್ತಕೋಡಿ: ಶ್ರೀರಾಮ ಭಜನಾ ಮಂದಿರದ ವಿರುದ್ದ ಶ್ರೀರಾಮ ಭಕ್ತವೃಂದದ ಆರೋಪ ನಿರಾಧಾರ-ಭಜನಾ ಮಂದಿರದ ಸ್ಪಷ್ಟನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಭಕ್ತಕೋಡಿ ಶ್ರೀರಾಮ ಭಜನಾ ಮಂದಿರದ ವಿರುದ್ದ ಶ್ರೀರಾಮ ಭಕ್ತವೃಂದದವರು ನಡೆಸಿದ ಅರೋಪ ನಿರಾಧಾರವಾಗಿದೆ, ಸುಳ್ಳು ಆರೋಪಗಳನು ಹೊರಿಸಿ ಅವರು ಪ್ರತಿಭಟನೆ ನಡೆಸಿರುವುದಾಗಿ ಭಜನಾ ಮಂದಿರದ ಅಧ್ಯಕ್ಷ ಸುಬ್ರಹ್ಮಣ್ಯ ಕರುಂಬಾರು ಸ್ಪಷ್ಟನೆ ನೀಡಿದ್ದಾರೆ.

ನ.26ರಂದು ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು. ಶ್ರೀರಾಮ ಮಂದಿರದ ಹೆಸರಿನಲ್ಲಿ ಯಾವುದೆ ಕಬಡ್ಡಿ ತಂಡವಿಲ್ಲ. ಶ್ರೀರಾಮ ಫ್ರೆಂಡ್ಸ್ ಭಕ್ತಕೋಡಿ ಹೆಸರಿನಲ್ಲಿ ಕೆಲ ಯುವಕರು ಸಂಘ ಕಟ್ಟಿಕೊಂಡು ಪ್ರತ್ಯೇಕ ಸೀಲ್, ರಶೀದಿ ಪುಸ್ತಕ ಆಮಂತ್ರಣ ಪತ್ರಿಕೆಗಳನ್ನು ಮುಗಿಸಿ ಕಾರ್ಯಕ್ರಮಗಳನ್ನು ಅಯೋಜಿಸುತ್ತಿದ್ದಾರೆ. ಕಬಡ್ಡಿ ಪಂದ್ಯಾಟಗಳಲ್ಲಿ ಗೆದ್ದಂತಹ ಫಲಕಗಳನ್ನು, ಸಂಘದ ದಾಖಲೆಗಳನ್ನು ಮಂದಿರದ ಒಳಗೆ ಇಟ್ಟು ರಾಮನ ಹೆಸರಿನಲ್ಲಿ ಹಕ್ಕು ಸ್ಥಾಪಿಸಲು ಪಟ್ಟ ಪ್ರಯತ್ನವನ್ನು ಆಡಳಿತ ಮಂಡಳಿ ವಿರೋಧಿಸಿರುವುದು ಹಗೂ ಫಲಕಗಳನ್ನು ಮಂದಿರದ ಕಾರ್ಯಾಲಯದಿಂದ ಮಂದಿರದ ಕಾರ್ಯಾಲಯ ಮಾಡಲು ಉದ್ದೇಶಿಸಿದ ಕಟ್ಟಡಕ್ಕೆ ಸ್ಥಳಾಂತರಿಸಿರುವುದೆ ಪ್ರತಿಭಟನೆಗೆ ಮೂಲಕಾರಣವಾಗಿದೆ. ಹೊರತು ಕಪ್‌ಗಳನ್ನು ಕಸದ ಬುಟ್ಟಿಗೆ ಎಸೆದಿಲ್ಲ.

ಮಂದಿರದ ಪಾವಿತ್ರ್ಯತೆ, ಮಂದಿರವನ್ನು ರಾಜಕೀಯ ಮುಕ್ತ ಧಾರ್ಮಿಕ ಸಂಸ್ಥೆಯನ್ನಾಗಿ ರೂಪಿಸುವ ದೃಷ್ಟಿಯಿಂದ ಮಂದಿರದ ಒಳಗಡೆ ಭಜನೆಗೆ ಮಾತ್ರ ಅವಕಾಶ ನೀಡುವುದಲ್ಲದೆ ಯಾವುದೆ ಸಂಘಟನೆಗಳ ವಸ್ತುಗಳನ್ನು ಇಡಲು ಹಾಗೂ ಸಭೆಗಳನ್ನು ನಡೆಸಲು ಅವಕಾಶವನ್ನು ನಿರಾಕರಿಸಲಾಗಿದೆ. ಪ್ರತ್ಯೇಕ ಕಾರ್ಯಾಲಯವನ್ನು ರಚಿಸಿ ಅದರಲ್ಲಿ ಸಭೆ ನಡೆಸಲು ಅವಕಾಶ ಕೊಡುವುದಾಗಿ ಸಭೆ ನಡೆಸಿ ನಿರ್ದಾರಕೈಗೊಳ್ಳಲಾಗಿದೆ. ಮಂದಿರದ ಆವರಣದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಅನುಮತಿ ಪಡೆದು ನಡೆಸಲು ಮುಕ್ತ ಅವಕಾಶವನ್ನು ನೀಡಲಾಗಿದ್ದರೂ ಪ್ರತಿಭಟನಕಾರರು ಸುಳ್ಳು ಆರೋಪ ಮಾಡಿದ್ದಾರೆ.

ಬೆಳಿಗ್ಗೆ ೬ ಗಂಟೆಯಿಂದ ಸಂಜೆ ೬ ಗಂಟೆಯ ತನಕ ಮಂದಿರದ ಆವರಣದಲ್ಲಿ ಕ್ರೀಡಾ ಚಟುವಟಿಕೆಗಳನ್ನು ನಡೆಸಲು ಅನುಮತಿ ನೀಡಲಾಗಿದ್ದರೂ ಆವರಣದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ. ಶ್ರೀರಾಮ ಫ್ರೆಂಡ್ಸ್‌ನವರು ರಾತ್ರಿ ಆವರಣದಲ್ಲಿ ಆಡಲು ಅವಕಾಶ ಹಾಗೂ ಮಂದಿರ ಕೀಲಿ ಕೈಯನ್ನು ನೀಡುವಂತೆ ಒತ್ತಾಯಿಸಿ ಅವಾಚ್ಯವಾಗಿ ಬೈದಿರುವುದಲ್ಲದೆ ಮಂದಿರದ ಕಾರ್ಯಕ್ರಮಗಳಿಗೆ ಅಡ್ಡಿ ಪಡಿಸುವುದಾಗಿ ಬೆದರಿಕೆ ಹಾಕಿದ್ದರು. ಮಂದಿರದ ಸ್ವಚ್ಚತೆ, ಸ್ವತ್ತುಗಳ ರಕ್ಷಣೆ ಹಾಗೂ ರಾತ್ರಿ ಸಂಭವಿಸಬಹುದಾದ ಯಾವುದೇ ಸಮಸ್ಯೆಗಳಿಗೆ ಮಂದಿರವೇ ಹೊಣೆಯಾಗುವ ದೃಷ್ಠಿಯಿಂದ ಪೊಲೀಸ್ ಅನುಮತಿಯ ಹೊರತಾಗಿ ಯಾವುದೇ ಚಟುವಟಿಕೆಗಳಿಗೆ ಅನುಮತಿ ನಿರಾಕರಿಸಲಾಗಿದೆ.

ನೂತನ ಸಮಿತಿಯವರು ಮಹಾಸಭೆ ನಡೆಸದೇ ಅವ್ಯವಹಾರ ನಡೆಸಿರುವುದಾಗಿ ಪ್ರತಿಭಟನಕಾರರು ಆರೋಪಿಸಿದ್ದು ನೂತನ ಸಮಿತಿ ನೋಂದಾವಣೆಗೊಂಡಿರುವುದೇ ಸಪ್ಟಂಬರ್ ತಿಂಗಳಿನಲ್ಲಿ. ಹಿಂದಿನ ಆಡಳಿತ ಮಂಡಳಿಯವರು ಅವ್ಯವಹಾರ ನಡೆಸಿದರೆ ಅದಕ್ಕೆ ನೂತನ ಸಮಿತಿ ಹೊಣೆಯಲ್ಲ.

”ಶ್ರೀ ರಾಮ ಭಕ್ತ ವೃಂದ” ಎಂಬ ಬ್ಯಾನರ್ ಅಡಿಯಲ್ಲಿ ಪ್ರತಿಭಟನೆ ನಡೆಸಲಾಗಿದೆ. ಆದರೆ ಅವರ್‍ಯಾರು ಮಂದಿರದಲ್ಲಿ ನಡೆಯುವ ಭಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿಲ್ಲ. ಆದಾಗ್ಯೂ ಭಜನಾ ಕಾರ್ಯಕ್ರಮಗಳಲ್ಲಿ ಎಲ್ಲರಿಗೂ ಅವಕಾಶ ನೀಡಬೇಕೆಂದು ಆಗ್ರಹಿಸಿದ್ದಾರೆ. ಭಜನೆಗೆ ಅವರನ್ನು ಯಾರೂ ತಡೆದಿಲ್ಲ. ಮಂದಿರಕ್ಕೆ ಅನುವಂಶಿಕ ತಜ್ಞರ ಅರ್ಚಕರು ಯಾರೂ ಇಲ್ಲ. ನಿತ್ಯ ಭಜನೆಯಲ್ಲಿ ಭಾಗವಹಿಸುವ ಎಲ್ಲಾ ಜಾತಿಯವರು ಪೂಜಾ ಕಾರ್ಯಗಳು ನಡೆಯುವುದು ಮೊದಲಿಂದಲೂ ನಡೆದು ಬಂದ ಸಂಪ್ರದಾಯವಾಗಿದೆ. ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರು ಶ್ರೀರಾಮ ಫ್ರೆಂಡ್ಸ್ ಭಕ್ತಕೋಡಿಯ ಕಬಡ್ಡಿ ತಂಡದ ಸದಸ್ಯರು. ಪುತ್ತೂರು, ಕಡಬ ತಾಲೂಕಿನ ವಿವಿಧ ಕಡೆಗಳಿಂದ ಬಂದ ಹಿಂದೂ ಜಾಗರಣಾ ವೇದಿಕೆ ಹಾಗೂ ರಾಜಕೀಯ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ಬೆರಳೆಣಿಕೆಯ ಮಂದಿಯಷ್ಟೇ ಊರವರು ಭಾಗವಹಿಸಿದ್ದಾರೆ.

ಹೊಸ ಸಮಿತಿ ರಚನೆಯಾದ ನಂತರ ಮುಂಡೂರು ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಭಜನಾ ಮಂದಿರದ ಖಾತೆ ತೆರೆದು ಅದರಲ್ಲಿ ಮಂದಿರದ ವಾಣಿಜ್ಯ ಕಟ್ಟಡದ ಬಾಡಿಗೆಯನ್ನು ಪಾವತಿಸಲಾಗಿದೆ. ಈ ಹಿಂದೆ ಮಹಾಸಭೆಗಳು, ಲೆಕ್ಕಪರಿಶೋಧನೆಗಳು ಪ್ರತೀ ವರ್ಷ ನಡೆಯದೇ ಇದ್ದ ಕಾರಣಕ್ಕಾಗಿ ನೂತನ ಸಮಿತಿಯನ್ನು ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ ೧೯೬೦ರಡಿಯಲ್ಲಿ ನೋಂದಾಯಿಸಲಾಗಿದ್ದು ಇನ್ನು ಮುಂದೆ ಪ್ರತಿ ವರ್ಷ ಸದಸ್ಯತ್ವ ನೊಂದಣಿ, ಮಹಾಸಭೆ, ಲೆಕ್ಕ ಪರಿಶೋಧನೆ, ಪದಾಧಿಕಾರಿಗಳ ಆಯ್ಕೆ ಪ್ರಕ್ರೀಯೆಗಳನ್ನು ಪಾರದರ್ಶಕವಾಗಿ ನಡೆಸುವ ಹಾಗೂ ಜನರಿಗೆ ಉತ್ತರದಾಯಿಯಾಗುವ ಉದ್ದೇಶವನ್ನು ಸಮಿತಿಯು ಹೊಂದಿದೆ. ಆದರೆ ವ್ಯವಸ್ಥೆ ಸುಧಾರಣೆಯ ನಿಯೋಗಗಳು ಪ್ರತಿಭಟನೆ ನಡೆಸಿದ್ದಾರೆ. ತಾಳ್ಮೆ ವಹಿಸಿ ಮುಂದಿನ ಮಹಾನಶಯ ಷಯವನ್ನು ಪಾಲಿಸಬಹುದಿತ್ತು ತಮಗೂ ಪದಾಧಿಕಾರಿಗಳಾಗುವ ಅವಕಾಶವಿತ್ತು.

ಹೊಸ ಸಮಿತಿಯು ಅಧಿಕಾರ ವಹಿಸಿಕೊಂಡ ಬಳಿಕ ಪ್ರತಿ ದಿನ ಬೆಳಿಗ್ಗೆ ಮಂದಿರನ್ನು ಸ್ವಚ್ಚಗೊಳಿಸಿ, ಶ್ರೀರಾಮ ದೇವರಿಗೆ ದೀಪಬೆಳಗಿಸಿ, ಧ್ವನಿವರ್ಧಕದ ಮೂಲಕ ಕೀರ್ತನೆಯನ್ನು ಪ್ರಸಾರ ಮಾಡಲಾಗುತ್ತಿದೆ. ೧೨ ವರ್ಷಗಳ ನಂತರ ಸುಮಾರು ರೂ.೧೦,೦೦೦ಸಾವಿರ ವೆಚ್ಚದಲ್ಲಿ ಮಂದಿರದ ಆವರಣ ಗೋಡೆಗೆ ಪೈಂಟಿಂಗ್ ಮಾಡಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ರೂ.೨೧,೦೦೦ವೆಚ್ಚದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಮಂದಿರದ ಗೋದಾಮು ಕಟ್ಟಡದ ಮೇಲ್ಛಾವಣಿಯನ್ನು ದುರಸ್ಥಿಗೊಳಿಸಲಾಗಿದ್ದು ಕಾರ್ಯಾಲಯವನ್ನಾಗಿ ಪರಿವರ್ತಿಸಲಾಗುವುದು. ಅಯೋಧ್ಯೆಯಲ್ಲಿ ರಾಮ ಮಂದಿರದ ಶಿಲಾನ್ಯಾಸ ಸಂದರ್ಭ ವಿಶೇಷ ಭಜನೆ, ಪ್ರಾರ್ಥನೆ ಸಲ್ಲಿಸಿ ನೆನಪಿಗಾಗಿ ಸಂಪಿಗೆ ಗಿಡವನ್ನು ನಡೆಲಾಗಿದೆ. ಗಣೇಶ ಚತುರ್ಥಿಗೆ ದೂರದ ಪೊಳಲಿಯಿಂದ ಕದಿರು ತರಿಸಿ ವಿತರಿಸುವ ಮೂಲಕ ಸಂಪ್ರದಾಯವನ್ನು ಉಳಿಸಲು ಶ್ರಮಿಸಲಾಗಿದೆ. ಪ್ರತಿ ಏಕಾದಶಿಗೆ ಭಜನೆ ನಡೆಯುತ್ತಿದ್ದು ೩೦ಕ್ಕೂ ಅಧಿಕ ಮಂದಿ ಹಾಜರಾಗುತ್ತಿದ್ದಾರೆ. ವಿದ್ಯುತ್ ಸಮಸ್ಯೆ ಉಂಟಾಗದಂತೆ ಇನ್ವರ್ಟರ್ ಅಳವಡಿಸಲಾಗಿದೆ ಎಂದು ಅವರು ತಿಳಿಸಿದರು.

ಕಟ್ಟಡ ಬಾಡಿಗೆ ಬ್ಯಾಂಕ್ ಖಾತೆಗೆ:
ಇಷ್ಟು ವರ್ಷದಲ್ಲಿ ಮಂದಿರದ ಹೆಸರಿನಲ್ಲಿ ಬ್ಯಾಂಕ್ ಖಾತೆಯೇ ಇರಲಿಲ್ಲ. ಹೊಸ ಸಮಿತಿ ಬಂದ ಬಳಿಕ ಬ್ಯಾಂಕ್ ಖಾತೆ ತೆರೆಯಲಾಗಿದೆ. ಇಷ್ಟು ವರ್ಷದಲ್ಲಿ ಮಹಾಸಭೆ ಹಾಗೂ ಲೆಕ್ಕಪರಿಶೋಧನೆಯೇ ನಡೆದಿಲ್ಲ. ಮಂದಿರವು ನೋಂದಾವಣೆಯಾಗಿರುವ ಕುರಿತು ನಮಗೆ ಯಾವುದೇ ಮಾಹಿತಿಯಿಲ್ಲ. ಹೊಸ ಸಮಿತಿ ಬಂದ ಬಳಿಕ ಕಳೆದ ಸಪ್ಟಂಬರ್‌ನಲ್ಲಿ ನೋಂದಾವಣೆಗೊಂಡಿದ್ದು ಮುಂದಿನ ದಿನಗಳಲ್ಲಿ ಮಂದಿರದ ಪಾದರ್ಶಕ ಆಡಳಿತಕ್ಕೆ ಅವಕಾಶ ಮಾಡಿಕೊಡಲಾಗಿದೆ. ನೊಂದಾವಣೆಗೊಂಡು ವರ್ಷ ಪೂರೈಸಿದ ಕೂಡಲೇ ಲೆಕ್ಕಪರಿಶೋಧನೆ ನಡೆಸಿ ಮಹಾಸಭೆ ನಡೆಸಲಾಗುವುದು. ಅದರಲ್ಲಿ ಲೆಕ್ಕಪತ್ರ ಮಂಡಿಸಲಾಗುವುದು ಎಂದು ಸದಸ್ಯ ಕಮಲೇಶ್ ಹೇಳಿದರು. ಕಾರ್ಯದರ್ಶಿ ರಾಜೇಶ್ ಎಸ್.ಡಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.