HomePage_Banner
HomePage_Banner
HomePage_Banner
HomePage_Banner

ಉಪ್ಪಿನಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮ     

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಉಪ್ಪಿನಂಗಡಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಶಿಕ್ಷಕರಾದ  ಶ್ರೀಧರ್ ಭಟ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಭಾರತದ ಸಂವಿಧಾನವು ಪ್ರಪಂಚದ ವಿವಿಧ ದೇಶಗಳ ಸಂವಿಧಾನಕ್ಕಿಂತ ಶ್ರೇಷ್ಠವಾದ ಸಂವಿಧಾನವಾಗಿದ್ದು ,ಅದನ್ನು ಗೌರವಿಸಿ ಪಾಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂಬುದಾಗಿ ತಿಳಿಸಿದರು.

ಸಂವಿಧಾನ ದಿನಾಚರಣೆಯ ಮಹತ್ವವನ್ನು ಕುರಿತು ಸಮಾಜ ವಿಜ್ಞಾನ ಶಿಕ್ಷಕರಾದ ಶ್ರೀಯುತ ಸುಬ್ರಹ್ಮಣ್ಯ ಭಟ್ ರವರು ಮಾತನಾಡುತ್ತಾ ಸಂವಿಧಾನದ ರಚನೆಯ ಹಿನ್ನೆಲೆ, ಹಕ್ಕುಗಳು ಮತ್ತು ಕರ್ತವ್ಯಗಳು , ರಾಜ್ಯ ನಿರ್ದೇಶಕ ತತ್ವಗಳು ಮತ್ತು ಜಾತ್ಯಾತೀತ ತತ್ವಗಳ ಮಹತ್ವ ಕುರಿತು ವಿವರಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ಶ್ರೀಮತಿ ಸುಮಾ, ಶ್ರೀಮತಿ ದೇವಕಿ, ಶ್ರೀಮತಿ ವನಲಕ್ಷ್ಮಿ ,ಶ್ರೀ ವಿಜಯಕುಮಾರ್ ಶ್ರೀಮತಿ ಅವರ ವಾತ್ಸಲ್ಯ, ಶ್ರೀಯುತ ಲಕ್ಷ್ಮೀಶ್ ನಾಯ್ಕ, ದೈಹಿಕ ಶಿಕ್ಷಕರಾದ ಶ್ರೀಮತಿ ಎಲಿಜಬೆತ್ , ಶ್ರೀಮತಿ ಪ್ರಾರ್ಥನ, ಕುಮಾರಿ ಭವ್ಯ ಮತ್ತು ವಿವೇಕಾನಂದ ಕಾಲೇಜಿನ  ಬಿ.ಎಡ್ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

ಬಿ.ಎಡ್ ಪ್ರಶಿಕ್ಷಣಾರ್ಥಿಯರಾದ ಕುಮಾರಿ ರೋಶಣಿ ,ಕುಮಾರಿ ಸುಮಿತ್ರ ಪ್ರಾರ್ಥಿಸಿದರು ,ಕುಮಾರಿ ದಿವ್ಯ ಸ್ವಾಗತಿಸಿದರು, ಕುಮಾರಿ ಓರಿನ್ ವಂದನಾರ್ಪಣೆಗೈದರು ಕುಮಾರಿ ವಿನುತಾ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.