ಪುತ್ತೂರು: ಪುತ್ತೂರು ಉಪ್ಪಿನಂಗಡಿ ರಸ್ತೆಯ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದ ವೇಳೆ ಪುತ್ತೂರಿಗೆ ಸರಬರಾಜಾಗುವ ಕುಡಿಯುವ ನೀರಿನ ಪೈಪ್ಗೆ ಹಾನಿಯಾಗಿದ್ದು ನ.೨೭ರಂದು ಪುತ್ತೂರು ಪಟ್ಟಣಕ್ಕೆ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಆಗಲಿದೆ ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.
ರಸ್ತೆ ಅಗಲೀಕರಣ ಕಾಮಗಾರಿ ವೇಳೆ ದಾರಂದಕುಕ್ಕುವಿನಲ್ಲಿ ಉಪ್ಪಿನಂಗಡಿ ನೇತ್ರಾವದಿ ಹೊಳೆಯಿಂದ ಪುತ್ತೂರಿಗೆ ಸರಬರಾಜು ಆಗುವ ಕುಡಿಯುವ ನೀರಿನ ಸರಬರಾಜಿನ ಪೈಪ್ ನ.೨೫ರಂದು ಒಡೆದು ಹೋಗಿದೆ. ಹಾಗಾಗಿ ಪೈಪ್ ದುರಸ್ತಿಯಾಗದ ಹಿನ್ನಲೆಯಲ್ಲಿ ನ.೨೬ ರಂದು ಪುತ್ತೂರು ಪಟ್ಟಣಕ್ಕೆ ನೀರು ಸರಬರಾಜು ಆಗಿರಲಿಲ್ಲ. ಇದೀಗ ಪೈಪ್ ದುರಸ್ತಿ ಕಾರ್ಯ ಮುಗಿಯದ ಹಿನ್ನಲೆಯಲ್ಲಿ ನ.೨೭ರಂದೂ ನೀರು ಸರಬರಾಜು ಆಗುವುದಿಲ್ಲ. ಇದರ ಜೊತೆಗೆ ಪೈಪ್ ದುರಸ್ತಿಯಾದ ಬಳಿಕವೂ ಪೈಪ್ನಲ್ಲಿ ನೀರು ತುಂಬಲು ಸಮಯವಕಾಶ ಬೇಕಾಗಿರುವುದರಿಂದ ಪುತ್ತೂರು ಪಟ್ಟಣಕ್ಕೆ ನೀರು ಸರಬರಾಜಿನಲ್ಲಿ ವ್ಯತ್ಯಾಸ ಆಗಲಿದೆ. ಸಾರ್ವಜನಿಕರು ಸಹರಿಸುವಂತೆ ಪೌರಾಯುಕ್ತೆ ರೂಪಾ ಶೆಟ್ಡಿ ತಿಳಿಸಿದ್ದಾರೆ.